ಯಾದಗಿರಿ ತಾಲೂಕಿನ ಸೈದಾಪುರ ವಿದ್ಯಾ ವರ್ಧಕ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ದಂತ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಯಿತು.' 
ರಾಜ್ಯ

ದಂತ ರಕ್ಷಣೆಗೆ ನಿಯಮಿತ ತಪಾಸಣೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಡಾ.ಶಿವಾನಂದ ಅಸ್ಪಲ್ಲಿ ಸಲಹೆ >
  • ಸೈದಾಪುರದಲ್ಲಿ ಉಚಿತ ದಂತ ತಪಾಸಣೆ ಶಿಬಿರ
ಸೈದಾಪುರ: ವಿದ್ಯಾರ್ಥಿಗಳು ದಿನಕ್ಕೆ ಎರಡು ಬಾರಿ ಹಲ್ಲು ಶುಚಿಗೊಳಿಸುವುದು, ಆರೋಗ್ಯಕರ ಆಹಾರ ಸೇವಿಸುವುದು ಅಲ್ಲದೆ ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ರಾಯಚೂರು ಎಎಂಇ ದಂತ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಶಿವಾನಂದ ಆಸ್ಪಲ್ಲಿ ಸಲಹೆ ನೀಡಿದರು.
ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯಲ್ಲಿ ಮಾಜಿ ಕಾರ್ಯದರ್ಶಿ ದಿ.ಸಂಗಣ್ಣ ಆಸ್ಪಲ್ಲಿ ಅವರ 34ನೇ ಪುಣ್ಯತಿಥಿ ನಿಮಿತ್ತ ರಾಯಚೂರು ಎಎಂಇ ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮ ಭವಿಷ್ಯಕ್ಕೆ ಶಿಕ್ಷಣದ ಜತೆಗೆ ಆರೋಗ್ಯವೂ ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಪ್ರತಿಯೊಬ್ಬರೂ ಬಾಯಿಯ ಹಾಗೂ ಹಲ್ಲುಗಳ ಸ್ವಚ್ಛತೆಗೆ ವಿಶೇಷ ಗಮನ ಹರಿಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಹಂಪಣ್ಣ ಸಜ್ಜನಶೆಟ್ಟಿ ಮಾತನಾಡಿದರು. ಹಿರಿಯ ನ್ಯಾಯವಾದಿ ಸೂಗಪ್ಪ ಆಸ್ಪಲ್ಲಿ, ಮೃತ್ಯುಂಜಯ ಆಸ್ಪಲ್ಲಿ, ಡಾ.ಶಿವಾನಂದ ಆಸ್ಪಲ್ಲಿ, ಕೈಲಾಸ ಆಸ್ಪಲ್ಲಿ, ಸುರೇಶ ಆನಂಪಲ್ಲಿ, ಡಾ.ಸೋಮನಾಥ, ಲಿಂಗಾರೆಡ್ಡಿ ನಾಯಕ, ಕರಬಸಯ್ಯ ದಂಡಿಗಿಮಠ, ಚಂದ್ರಶೇಖರ ಡೊಣ್ಣೆಗೌಡ, ಸಂತೋಷ, ನಾಗಯ್ಯ ಸ್ವಾಮಿ ಇತರರಿದ್ದರು.