- ಸಹಕಾರ ಸಂಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಗೃಹ ನಿಮಾರ್ಣ ಸಹಕಾರ ಸಂಘಗಳ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅಕ್ರಮವಾಗಿ ಹಂಚಿಕೆಯಾದ ನಿವೇಶನಗಳ ಕ್ರಯಪತ್ರವನ್ನು ರದ್ದುಪಡಿಸುವ ಅಧಿಕಾರ ಸಹಕಾರ ಸಂಗಳ ಹೆಚ್ಚುವರಿ ರಿಜಿಸ್ಟ್ರಾರ್ಗೆ ಇದೆ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್) ಕಾಯ್ದೆಯ ಸೆಕ್ಷನ್ 70ರ ಅಡಿ ಸಂದ ರಿಜಿಸ್ಟ್ರಾರ್ಗೆ ಅಪರಿಮಿತ ಅಧಿಕಾರವಿದೆ. ನಿಯಮಗಳ ಉಲ್ಲಂಘನೆಯಾಗಿದ್ದರೆ, ನೋಂದಾಯಿತ ಕ್ರಯಪತ್ರವನ್ನೂ ರದ್ದುಪಡಿಸಿ ಸಬ್ ರಿಜಿಸ್ಟ್ರಾರ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಬಹುದು. ಇಂತಹ ಕ್ರಮ ಕೈಗೊಳ್ಳುವ ಮೊದಲು ಸಂಬಂಧಪಟ್ಟ ವ್ಯಕ್ತಿಗಳ ವಿಚಾರಣೆ ನಡೆಸಿ, ನೈಸರ್ಗಿಕ ನ್ಯಾಯದ ತತ್ವಗಳನ್ನು ಪಾಲಿಸುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ.
ಏನಿದು ಪ್ರಕರಣ?:
ಬಿಇಎಂಎಲ್ ನೌಕರರ ಸಹಕಾರ ಸಂದ ಸದಸ್ಯ ಬಿ.ಎಂ. ಯೋಗೇಶ್ಗೆ ಚನ್ನಸಂದ್ರದದಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಅವರು ಆ ನಿವೇಶನವನ್ನು ಸುರೇಶ್ ಮತ್ತು ಬಾಸ್ಕರ್ ಎಂಬವರಿಗೆ ಮಾರಾಟ ಮಾಡಿದ್ದರು. 2015ರಲ್ಲಿ ಭಾಸ್ಕರ್ ತಮ್ಮ ಪಾಲು ಬಿಟ್ಟುಕೊಟ್ಟ ಕಾರಣ ನಿವೇಶನದ ಪೂರ್ಣ ಮಾಲಿಕತ್ವ ಸುರೇಶ್ ಪಾಲಾಗಿತ್ತು. ಅದರಲ್ಲಿ ಅವರು ಬಹುಮಹಡಿ ಕಟ್ಟಡ ನಿರ್ಮಾಣ ಆರಂಭಿಸಿದ್ದರು.
ಆದರೆ, ಹಿರಿತನದ ನಿಯಮ ಉಲ್ಲಂಘಿಸಿರುವುದರಿಂದ ಯೋಗೇಶ್ಗೆ ನೀಡಿದ ಮೂಲ ಹಂಚಿಕೆ ಕಾನೂನುಬಾಹಿರವಾಗಿದೆ ಎಂದು ನೌಕರರ ಸಂದ ಆಡಳಿತ ಮಂಡಳಿ ಹೇಳಿತ್ತು. ಆ ಕ್ರಯಪತ್ರ ರದ್ದುಗೊಳಿಸುವಂತೆ ಮತ್ತು ಶೇ.18ರ ಬಡ್ಡಿಯೊಂದಿಗೆ 62 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕ್ರಯಪತ್ರ ಮಾಡಿಕೊಟ್ಟಿದ್ದ ಸಂದ ಹಿಂದಿನ ಪದಾಧಿಕಾರಿಗಳಾದ ಜೆ. ಮುನ್ನಾಗಪ್ಪ ಮತ್ತು ಎನ್. ರಾಮಕೃಷ್ಣ ಅವರಿಂದ ವಸೂಲಿ ಮಾಡುವಂತೆ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ಗೆ ನೌಕರರ ಸಂಘ ಮನವಿ ಸಲ್ಲಿಸಿತ್ತು. ಅದನ್ನು ತಿರಸ್ಕರಿಸಲಾಗಿತ್ತು.
ಕರ್ನಾಟಕ ಮೇಲ್ಮನವಿ ಪ್ರಾಧಿಕಾರವು ವಿಷಯವನ್ನು ಹೊಸದಾಗಿ ಪರಿಶೀಲಿಸಿ ತೀಮಾರ್ನಿಸುವಂತೆ ಹೆಚ್ಚುವರಿ ರಿಜಿಸ್ಟ್ರಾರ್ಗೆ 2020ರ ಜು.9ರಂದು ನಿರ್ದೇಶನ ನೀಡಿತ್ತು. ಇದನ್ನು ಸುರೇಶ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.