Register for Yashaswini Yojana 
ರಾಜ್ಯ

ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಳ್ಳಿ

ಪಾವಗಡ: ಹೈನುಗಾರಿಕೆಯಲ್ಲಿ ತೊಡಗಿರವ ತಾಲೂಕಿನ ರೈತರು ಯಶಸ್ವಿನಿ ಯೋಜನೆಯಡಿ ಜ.30 ರೊಳಗೆ ನೋಂದಾಯಿಸಿಕೊಳ್ಳಿ ಎಂದು ತುಮಕೂರು ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಚಂದ್ರಶೇಖರ್​ ರೆಡ್ಡಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ನಂದಿನಿ ಹಾಲು ಶೇಖರಣಾ ಉಪಕೇಂದ್ರದಲ್ಲಿ ಇತ್ತೀಚೆಗೆ ತುಮಕೂರು ಹಾಲು ಒಕ್ಕೂಟದಿಂದ ಹಮ್ಮಿಕೊಂಡಿದ್ದ ಯಶಸ್ವಿನಿ ಯೋಜನೆಗೆ ನೋಂದಣಿ ಮತ್ತು ಫಲಾನುಭವಿಗಳಿಗೆ ಚೆಕ್​ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಹೆಚ್ಚಿನದಾಗಿ ಹೈನುಗಾರಿಕೆಯಿಂದ ಲಾಭದಾಯಕ ಆದಾಯ ಗಳಿಸಬಹುದಾಗಿದೆ. ಕೆಲ ರೈತರು ಖಾಸಗಿ ಡೇರಿಗಳಿಗೆ ಹಾಲು ಪೂರೈಸುತ್ತಿದ್ದಾರೆ. ಇದರಿಂದ ತುಮಕೂರು ಹಾಲು ಒಕ್ಕೂಟದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಡೇರಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ರೈತರಿಗೆ ತುಮುಲ್​ ನಿಂದ ದೊರೆಯುವ ಸಾಲ ಸೌಲಭ್ಯಗಳನ್ನು ತಿಳಿಸಬೇಕಿದೆ. ಕರ್ನಾಟಕ ಸರ್ಕಾರ ರೈತರಿಗೆ ಮತ್ತು ಕುಟುಂಬದ ಆರೋಗ್ಯದ ದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮರು ಜಾರಿಗೆ ತಂದಿದ್ದು, ಎಸ್​ಸಿ ಮತ್ತು ಎಸ್​ಟಿ ರೈತರಿಗೆ ಉಚಿತವಾಗಿ ಹಾಗೂ ಸಾಮಾನ್ಯ ವರ್ಗದವರಿಗೆ 400 ರೂ.ಗಳಿಗೆ ನೋಂದಣಿಗೆ ಅವಕಾಶವಿದ್ದು, ಜ.30 ರೊಳಗೆ ತಮ್ಮ ಸಮೀಪದ ಡೇರಿ, ಸಹಕಾರ ಸಂಘಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದರು. ತುಮಕೂರು ಹಾಲು ಒಕ್ಕೂಟದಿಂದ ರೈತ ಹಾಗೂ ಹಸು ಮರಣಕ್ಕೆ 16 ರೈತ ಪಲಾನುಭವಿಗಳಿಗೆ ಪರಿಹಾರದ ಚೆಕ್​ ವಿತರಿಸಲಾಯಿತು.