ಜಿಲ್ಲಾ ಲೇಖಕಿಯರ ಸಂಘದ ಆಡಳಿತ ಮಂಡಳಿ ಕಾರ್ಯಕ್ರಮವನ್ನು ಕೆ.ಎಂ.ಜಾನಕಿ ಉದ್ಘಾಟಿಸಿದರು. ನೀಲಗಂಗಾ ಚರಂತಿಮಠ, ರಾಜನಂದಾ ಗಾರ್ಗಿ, ಡಾ.ನಿರ್ಮಲಾ ಬಟ್ಟಲ ಇತರರಿದ್ದರು. 
ರಾಜ್ಯ

ಮಹಿಳಾ ಸಾಹಿತಿಗಳ ಪ್ರತಿಭೆ ಪ್ರೋತ್ಸಾಹಿಸಲಿ

ಬೆಳಗಾವಿ:

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ

ಕೆ.ಎಂ.ಜಾನಕಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಲೇಖಕಿಯರ ಸಂಘದ ನೂತನ ಆಡಳಿತ ಮಂಡಳಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಬೇಕಿದೆ. ಇತಿಹಾಸದುದ್ದಕ್ಕೂ ಮಹಿಳೆಯರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಕಾಲಘಟ್ಟಕ್ಕೆ ಹೋಲಿಸಿದರೆ, ಅವರಿಗೆ ದೊರೆಯಬೇಕಾದ ಗೌರವ ಸಿಕ್ಕಿಲ್ಲ.

ಸಾಹಿತಿ ನೀಲಗಂಗಾ ಚರಂತಿಮಠ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ರಾಜನಂದಾ ಗಾರ್ಗಿ, ಡಾ.ನಿರ್ಮಲಾ ಬಟ್ಟಲ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಸುನಂದಾ ಎಮ್ಮಿ, ಹಮೀದಾ ಬೇಗಂ, ಮೀನಾಕ್ಷಿ ಸೂಡಿ, ವಿದ್ಯಾ ಹುಂಡೆಕರ, ಪ್ರಭಾ ಪಾಟೀಲ, ರೇಣುಕಾ ಜಾಧವ, ದೀಪಿಕಾ ಚಾಟೆ, ಜಯಶೀಲಾ ಬ್ಯಾಕೋಡ, ಸುಮಾ ಕಿತ್ತೂರ, ಹೇಮಾ ಸೋನೊಳ್ಳಿ, ಶೈಲಜಾ ಬಿಂಗೆ, ರಂಜನಾ ನಾಯಕ, ಡಾ.ಗುರುದೇವಿ ಹುಲೆಪ್ಪನವರಮಠ ಇತರರಿದ್ದರು.