ರಸಗೊಬ್ಬರ, ತೈಲ ಬೆಲೆ ಇಳಿಕೆಗೆ ಆಗ್ರಹಿಸಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯಿಂದ ಸಿರಗುಪ್ಪದಲ್ಲಿ ಉಪ ತಹಸೀಲ್ದಾರ್ ಯಾಕೂಬ್‌ಗೆ ರೈತರು ಮನವಿ ಸಲ್ಲಿಸಿದರು. ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಜೆ.ಸಿದ್ಧರಾಮನಗೌಡ, ಸದಸ್ಯರಾದ ಬಿ.ಸುರೇಶ್, ಬಿ.ಎಲ್.ಈರಣ್ಣ, ಎಚ್.ಬಿ.ಓಬಳೇಶ್ವಪ್ಪ, ಎಂ.ಹುಲೆಪ್ಪ, ಎಂ.ಲಕ್ಷ್ಮಣ, ಕೆ.ಬಸವರಾಜ, ನಾಗರಾಜಗೌಡ ಇದ್ದರು. 
ರಾಜ್ಯ

ರಸಗೊಬ್ಬರ, ತೈಲ ಬೆಲೆ ಇಳಿಸಿ

ಸಿರಗುಪ್ಪ: ರಸಗೊಬ್ಬರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ರೈತರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಯಾಕೂಬ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
 ತಾಲೂಕು ಅಧ್ಯಕ್ಷ ವಿ.ಮಾರುತಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಬೆಲೆ 10 ದಿನಗಳಲ್ಲಿ 4ನೇ ಬಾರಿಗೆ ಏರಿಕೆಯಾಗಿದೆ. ರಸಗೊಬ್ಬರ ದರವೂ ಹೆಚ್ಚಳವಾಗಿದೆ.
ಟ್ರಾೃಕ್ಟರ್ ಉಳುಮೆ, ನೀರಾವರಿ ಪಂಪ್ ಸೆಟ್ ಬಳಕೆ ಮತ್ತು ಬೆಳೆ ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದರಿಂದ ಕೂಡಲೇ ದರ ಇಳಿಸುವಂತೆ ಒತ್ತಾಯಿಸಿದರು.