ರೆಡ್ಡಿ ಸಮುದಾಯ ಸಂಘಟನೆಗೆ ಸಮ್ಮೇಳನ ಅಗತ್ಯ Reddy
- ರೆಡ್ಡಿ ಜನ ಸಂಘದ ಸಂಘಟನಾ ಅಧ್ಯಕ್ಷ ಪ್ರಭಾಕರ ರೆಡ್ಡಿ ಹೇಳಿಕೆ
ಕೆಜಿಎಫ್: ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಗ್ರಾಪಂ ಮಟ್ಟದಲ್ಲಿ ರೆಡ್ಡಿ ಸಮುದಾಯದ ಸಂಘಟನಾ ಸಭೆ ನಡೆಯುತ್ತಿದ್ದು, ಸಮುದಾಯ ಒಗ್ಗೂಡಿಸಲು ಎಲ್ಲ ಕಡೆಗಳಲ್ಲಿ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ರೆಡ್ಡಿ ಜನ ಸಂಘದ ಸಂಘಟನಾ ಅಧ್ಯಕ್ಷ ಪ್ರಭಾಕರ ರೆಡ್ಡಿ ಹೇಳಿದರು. Reddy
ತಾಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ರೆಡ್ಡಿ ಸಮುದಾಯದಿಂದ ಹಮ್ಮಿಕೊಂಡಿದ್ದ ರೆಡ್ಡಿ ಜನಸಂಘ ಸಂಘಟನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿಗಷ್ಟೇ ಜಿಲ್ಲಾ ಸಂಘಟನಾ ಸಭೆ ನಡೆದಿದ್ದು, ಆಯಾ ತಾಲೂಕುಮಟ್ಟದ ಅಧ್ಯಕ್ಷರ ಮತ್ತು ಜಿಲ್ಲಾ ಸಂಘಟನೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಪಂಮಟ್ಟದಲ್ಲಿ ಸಂಘಟನಾ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಮಟ್ಟದಲ್ಲಿ ರೆಡ್ಡಿ ಸಂಘಟನಾ ಸಭೆಗಳನ್ನು ರೆಡ್ಡಿ ಸಮುದಾಯದ ಯುವ ಘಟಕ, ಮಹಿಳಾ ಘಟಕ, ಪದಾಧಿಕಾರಿಗಳು ನಡೆಸುವ ಮೂಲಕ ಸಂಘಟನೆ ಮಾಡಲಾಗುತ್ತಿದೆ. ಜಿಲ್ಲೆಯಾದ್ಯಾಂತ ಸಂಘಟನಾ ಸಭೆ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ಬೃಹತ್ ರೆಡ್ಡಿ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರೆಡ್ಡಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಜಯರಾಘವ ರೆಡ್ಡಿ ಮಾತನಾಡಿ, ನಮ್ಮ ರೆಡ್ಡಿ ಜನಾಂಗದ ಉತ್ತಮ ಶಾಲಾ- ಕಾಲೇಜುಗಳಿದ್ದು, ಸಮುದಾಯದವರು ಚೆನ್ನಾಗಿ ವಿದ್ಯಾಭ್ಯಾಸ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶವಿದೆ ಎಂದರು.
ರೆಡ್ಡಿ ಸಂಘದ ಕೆಜಿಎಫ್ ತಾಲೂಕು ಅಧ್ಯಕ್ಷ ಪ್ರಸನ್ನರೆಡ್ಡಿ ಮಾತನಾಡಿ, ತಾಲೂಕಿನ ಒಟ್ಟು 16 ಗ್ರಾಮ ಪಂಚಾಯಿತಿಗಳ ಪೈಕಿ ಮೊದಲ ಸಭೆಯಾಗಿದ್ದು, ಪ್ರತಿ ಗ್ರಾಪಂನಲ್ಲೂ ಸಂಘಟನಾ ಸಭೆಗಳನ್ನು ನಡೆಸಿ ಹೆಚ್ಚಾಗಿ ಯುವ ಸಂಘಟನಾ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಚಂದ್ರರೆಡ್ಡಿ, ದಾಮೋದರ್ ರೆಡ್ಡಿ, ಗೋಪಿ, ಕೋದಂಡರೆಡ್ಡಿ, ಗೋಪಾಲ್ರೆಡ್ಡಿ, ಪ್ರಸಾದ್ ರೆಡ್ಡಿ, ವಿವೇಕ್, ಅರುಣ್, ಶ್ರೀರಾಮ ರೆಡ್ಡಿ, ಪ್ರಕಾಶ್ ರೆಡ್ಡಿ, ಮಧು, ಶ್ರೀನಿವಾಸ್ ರೆಡ್ಡಿ ಇದ್ದರು.