ಬಡವರ ಅಭಿವೃದ್ಧಿಗೆ ರೆಡ್ಡಿ ಸಮುದಾಯ ಬದ್ಧ Reddy community 
ರಾಜ್ಯ

ಬಡವರ ಅಭಿವೃದ್ಧಿಗೆ ರೆಡ್ಡಿ ಸಮುದಾಯ ಬದ್ಧ Reddy community

ಕೆಜಿಎಫ್​: ಆಂಧ್ರದಲ್ಲಿ ಆಡಳಿತ ನಡಸುತ್ತಿರುವ ಸಮ್ಮಿಶ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ನೇತೃತ್ವದಲ್ಲಿ ಬೃಹತ್​ ಹೋರಾಟ ಮಾಡುವುದಾಗಿ ದಕ್ಷಿಣ ಭಾರತದ ಚಲನಚಿತ್ರ ನಟಿ ರೋಜಾ ಹೇಳಿದರು.Reddy community
ನಗರದ ಶ್ರೀ ಪ್ರಸನ್ನ ಲಕ್ಷಿ$್ಮವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಮೊದಲ ದಿನದ ಶಿಭಿಕ ವಾಹನೋತ್ಸವದಲ್ಲಿ ದೇವರ ದರ್ಶನ ಪಡೆದ ಬಳಿಕ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರವನ್ನು ತೊಲಗಿಸುವಂತೆ ಜನಭಿಪ್ರಾಯ ಕೇಳಿ ಬರುತ್ತಿದೆ. ಸುಖಾಸುಮ್ಮನೆ ನಾಯ್ಡು ಸಂಪುಟದಲ್ಲಿರುವ ಸಚಿವರು ಹಾಗೂ ವೈಎಸ್​ಆರ್​ಪಿ ಮುಖಂಡರ ವಿರುದ್ಧ ಸಂಚು ರೂಪಿಸಿ, ಸುಳ್ಳು ಕೇಸ್​ ದಾಖಲಿಸಿ ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದರು.
ರೆಡ್ಡಿ ಸಮುದಾಯ ಸದಾ ಬಡವರ ಕಷ್ಟ, ಸುಖಗಳಲ್ಲಿ ಭಾಗಿಯಾಗುವ ಜತೆಗೆ ಸಮುದಾಯದ ಒಗ್ಗಟಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.
ಜನಜಂಗುಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.