ಬೈಲಹೊಂಗಲ ಕೆಆರ್ಸಿಇಎಸ್ ಎಚ್.ವಿ.ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಹಾಗೂ ತಪಾಸಣೆ ಕಾರ್ಯಕ್ರಮವನ್ನು ಡಾ.ಸಂಜಯ.ಸಿದ್ದಣ್ಣವರ ಉದ್ಘಾಟಿಸಿದರು. ಪ್ರಕಾಶ ಪಾಟೀಲ, ಡಿ.ಬಿ. ನರಗುಂದ ಜೋಸೆಫ್ ಅಂಬೋಜ, ಎಂ.ಎಸ್.ಪಟ್ಟಣಶೆಟ್ಟಿ, ಪದ್ಮಶ್ರೀ ಪಾಟೀಲ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಜನರಿಂದ ಜನರಿಗೆ ನೆರವು ಕಲ್ಪನೆಯಿಂದ ಹುಟ್ಟಿಕೊಂಡ ರೆಡಕ್ರಾಸ್ ಸಂಸ್ಥೆ ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸಂಜಯ ಸಿದ್ದಣ್ಣವರ ಹೇಳಿದರು.
ನಗರದ ಕೆಆರ್ಸಿಇಎಸ್ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ರೆಡಕ್ರಾಸ್ ದಿನದ ಅಂಗವಾಗಿ ಯುವ ರೆಡ ಕ್ರಾಸ್ ಟಕ ಮತ್ತು ತಾಲೂಕು ಆಸ್ಪತ್ರೆ ಬೈಲಹೊಂಗಲ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಹಾಗೂ ತಪಾಸಣೆ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ರೆಡಕ್ರಾಸ್ ಸಂಸ್ಥೆ ಯುದ್ಧಕಾಲದಲ್ಲಿ ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಗಾಯಾಳುಗಳಿಗೆ ಹಾಗೂ ಸಂತ್ರಸ್ತರಿಗೆ ವೈದ್ಯಕಿಯ ಚಿಕಿತ್ಸೆ ನೀಡಿದ ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಸ್ಥೆಯಾಗಿದೆ ಎಂದರು.
ಪ್ರಾಂಶುಪಾಲ ಪ್ರಕಾಶ ಪಾಟೀಲ ಮಾತನಾಡಿದರು. ವಂದನಾ ಭಟ್, ವಿದ್ಯಾರ್ಥಿಗಳಿಗೆ ಏಡ್ಸ್ ಜಾಗೃತಿ ಹಾಗೂ ತಡೆಗಟ್ಟುವಿಕೆ, ಆರೋಗ್ಯ ಕಾಪಾಡಿಕೊಳ್ಳಲು ಉಚಿತ ತಪಾಸಣೆ ಮಾಡಿಸಿಕೊಳ್ಳುವ ಕುರಿತು ತಿಳಿಸಿದರು. ರೆಡಕ್ರಾಸ್ ಸಂಯೋಜಕ,
ಸಹಾಯಕ ಪ್ರಾಧ್ಯಾಪಕರಾದ ಡಿ.ಬಿ.ನರಗುಂದ ಜೋಸೆಫ್ ಅಂಬೋಜ, ಎಂ.ಎಸ್.ಪಟ್ಟಣಶೆಟ್ಟಿ, ಪದ್ಮಶ್ರೀ ಪಾಟೀಲ ಇತರರಿದ್ದರು.