ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಡಿ.20ರಿಂದ 22ರವರೆಗೆ ಲಿಖಿತ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಿಗಿ ಕ್ರಮಗಳನ್ನು ಕೈಗೊಂಡಿದೆ.  
ರಾಜ್ಯ

ಸಿಸಿಟಿವಿ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ; ವಿವಿಧ ಇಲಾಖೆ ನೇಮಕಾತಿಗೆ ಕೆಇಎ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಸಿಸಿಟಿವಿ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ ಕೆಇಎ ಕ್ರಮ
  • ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪರೀಕ್ಷೆ
  • ಡಿ.20 ರಿಂದ ಮೂರು ದಿನ ನಡೆಯಲಿರುವ ಪರೀಕ್ಷೆ

ಬೆಂಗಳೂರು: ಬಿಡಿಎ,ಬೆಂಗಳೂರುಜಲಮಂಡಳಿ, ತಾಂತ್ರಿಕಶಿಕ್ಷಣ ಇಲಾಖೆ ಸೇರಿದಂತೆ ವಿವಿಧಇಲಾಖೆಗಳಲ್ಲಿನ ಖಾಲಿ ಹುದ್ದೆಗಳನೇಮಕಾತಿಗೆ ಕಲ್ಯಾಣ ಕರ್ನಾಟಕದಅಭ್ಯರ್ಥಿಗಳಿಗೆ ಡಿ.20ರಿಂದ22ರವರೆಗೆಲಿಖಿತ ಪರೀಕ್ಷೆ ನಡೆಸಲು ಮುಂದಾಗಿರುವಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಬಿಗಿ ಕ್ರಮಗಳನ್ನುಕೈಗೊಂಡಿದೆ.

ವಿವಿಧಹುದ್ದೆಗಳಿಗೆ ಕಲ್ಯಾಣ ಕರ್ನಾಟಕದಒಟ್ಟು 24,800ಅಭ್ಯರ್ಥಿಗಳುಅರ್ಜಿ ಸಲ್ಲಿಸಿದ್ದು ಮೂರು ದಿನಗಳಕಾಲ ಪರೀಕ್ಷೆ ನಡೆಸಲಾಗುತ್ತದೆಎಂದು ಪ್ರಾಧಿಕಾರದ ಕಾರ್ಯನಿರ್ವಾಹಕನಿರ್ದೇಶಕ ಹೆಚ್.ಪ್ರಸನ್ನತಿಳಿಸಿದರು.

ಅತ್ಯಂತಪಾರದರ್ಶಕ ಹಾಗೂ ಅಕ್ರಮಗಳಿಗೆಅವಕಾಶ ಇಲ್ಲದಂತೆ ಪರೀಕ್ಷೆಗಳನ್ನುನಡೆಸಲು ಸಕಲ ಸಿದ್ಧತೆಗಳನ್ನುಮಾಡಿಕೊಳ್ಳಲಾಗಿದೆ.ಪರೀಕ್ಷಾಕೊಠಡಿಯಲ್ಲಿ ಸಿಸಿಟಿವಿ ಜತೆಗೆಜಾಮರ್ ಕೂಡ ಅಳವಡಿಸಿದ್ದು,ಎಲೆಕ್ಟ್ರಾನಿಕ್ವಸ್ತುಗಳ ಬಳಕೆಗೆ ನಿರ್ಬಂಧವಿಧಿಸಲಾಗಿದೆ.ಮುಖಚಹರೆ ಪತ್ತೆತಂತ್ರಜ್ಞಾನ ಬಳಸಿಯೇ ಅಭ್ಯರ್ಥಿಗಳನ್ನುಪರೀಕ್ಷಾ ಕೇಂದ್ರದ ಒಳಗೆಬಿಡಲಾಗುತ್ತದೆ.ವಸ್ತ್ರ ಸಂಹಿತೆಇದ್ದು ಅಭ್ಯರ್ಥಿಗಳು ಕಟ್ಟುನಿಟ್ಟಾಗಿಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಶನಿವಾರ ಬೆಂಗಳೂರಿನ ಏಳು ಕೇಂದ್ರಗಳಲ್ಲಿಪರೀಕ್ಷೆ ನಡೆಯಲಿದ್ದು,ಒಟ್ಟು 3,486ಮಂದಿ ತೆಗೆದುಕೊಂಡಿದ್ದಾರೆ.ಬೆಂಗಳೂರು,ಬಳ್ಳಾರಿ,ದಾವಣಗೆರೆ,ಧಾರವಾಡ,ಕಲ್ಬುರ್ಗಿಮತ್ತು ಕೊಪ್ಪಳ ಜಿಲ್ಲೆಗಳ 51ಕೇಂದ್ರಗಳಲ್ಲಿ ಡಿ.21ರಂದುನಡೆಯುವ ಪರೀಕ್ಷೆಯನ್ನು 21,198ಮಂದಿ ಹಾಗೂಡಿ.22ರಂದುಬೆಂಗಳೂರಿನಲ್ಲಿ ಮಾತ್ರ್ು ನಡೆಯುವಪರೀಕ್ಷೆಯನ್ನು 1,166ಮಂದಿ ತೆಗೆದುಕೊಂಡಿದ್ದಾರೆ.ಕಲ್ಯಾಣ ಕರ್ನಾಟಕಸೇರಿದಂತೆ ಇತರ ಎಲ್ಲರಿಗೂ ಡಿ.28ರಂದು ಕನ್ನಡಕಡ್ಡಾಯ ಪರೀಕ್ಷೆ ನಡೆಯಲಿದೆ.