ಆನಂದ ಬಿರಾದಾರ 
ರಾಜ್ಯ

ಡ್ರೋನ್​ ಫೈಲಟ್​ಗಳ ನೇಮಕ 14ರಂದು

ಕಲಬುರಗಿ: ಕೃಷಿಯಲ್ಲಿ ಹೊಸ ತಾಂತ್ರಿಕತೆ ಅಳವಡಿಕೆ, ಯುವ ರೈತರಿಗೆ ಹೊಸತನದ ಮಾಹಿತಿ ಮತ್ತು ತರಬೇತಿ ನೀಡಲು ಕಮಲಾನಗರದ ಪುಣ್ಯಕೋಟಿ ರೈತ ಉತ್ಪಾದಕರ ಸಂಸ್ಥೆ ಯೋಜನೆ ಹಾಕಿಕೊಂಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆನಂದ ಬಿರಾದಾರ ಹೇಳಿದರು. ಹೋಬಳಿಯಲ್ಲಿ ಡ್ರೋನ್​ ಫೈಲಟ್​ಗಳನ್ನು ನೇಮಕ ಮಾಡುವ ಮಹತ್ವದ ಯೋಜನೆಯನ್ನು ಹೈದರಾಬಾದ್​ನ ದೇವಿಶ್ರೀ ಅಗ್ರಿಟೆಕ್​ ಪೆವೇಟ್​ ಲಿಮಿಟೆಡ್​ ಸಹಯೋಗದಲ್ಲಿ ಪುಣ್ಯಕೋಟಿ ರೈತ ಉತ್ಪಾದಕ ಸಂಸ್ಥೆ ರೂಪಿಸಿದೆ. ರೈತರ ಶ್ರಮ, ಉಳಿತಾಯ ಹಾಗೂ ಸಿಂಪಡಣೆ ವೆಚ್ಚ ಕಡಿಮೆ ಮಾಡಲು ಡ್ರೋನ್​ ನೆರವಾಗಲಿದೆ. ಇದನ್ನು ಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್​, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಪ್ರತಿಯೊಂದು ಹೊಬಳಿಯಲ್ಲಿ ಡ್ರೋನ್​ ಫೈಲಟ್​ಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುವುದು. ಆ.14ರಂದು ಡ್ರೋನ್​ ಫೈಲಟ್​ ನೇಮಕಾತಿಗಾಗಿ ಸಂದರ್ಶನ ನಡೆಸಲು ನಿರ್ಧರಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡ್ರೋನ್​ ಪಡೆಯಲು ಸಿಎಸ್​ಆರ್​ ಅನುದಾನ ಸಹಾಯ ಕಲ್ಪಿಸಲು ಅವಕಾಶವಿದೆ. ಡ್ರೋನ್​ ಹೊಂದಿದರೆ ಯುವಕರು ತಿಂಗಳಿಗೆ 25 ಸಾವಿರ ರೂ. ವೇತನ ಪಡೆಯಬಹುದಾಗಿದೆ. ಯುವಕರಿಗೆ ಉದ್ಯೋಗ, ರೈತರಿಗೆ ತಂತ್ರಜ್ಞಾನ ಕೃಷಿಗೆ ಹೊಸ ದಿಕ್ಕು ಎಂಬ ಆಶಯಯೊಂದಿಗೆ ಪುಣ್ಯಕೋಟಿ ರೈತ ಉತ್ಪಾದಕರ ಸಂಸ್ಥೆ ಯೋಜನೆ ರೂಪಿಸಿದೆ ಎಂದು ತಿಳಿಸಿದರು. ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂದ ಅಧ್ಯ ಬಸವರಾಜ ಇಂಗಿನ್​, ಮಹಾದೇವ ಮೋಘಾ ಇದ್ದರು.
"

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆ ದೊಡ್ಡ ಸವಾಲಾಗಿದೆ. ಕಾರ್ಮಿಕರು ಸಿಗದಿರುವುದು, ಹೆಚ್ಚಿನ ಕೂಲಿ ವೆಚ್ಚ ಹಾಗೂ ಸಮಯದ ಅಭಾವ ರೈತರು ಎದುರಿಸುತ್ತಿದ್ದಾರೆ. ಹೀಗಾಗಿ ಕೃಷಿ ಡ್ರೋಣ ಸೇವೆ ರೈತರಿಗೆ ಉತ್ತಮ ಪರ್ಯಾಯವಾಗಿದೆ.

— > ಬಸವರಾಜ ಇಂಗಿನ್​, ಜಿಲ್ಲಾಧ್ಯಕ್ಷ, ತೊಗರಿ ಬೆಳೆಗಾರರ ಸಂಘ