HD Kumaraswamy on KPSC Scam asks for Priyank Kharge Resignation
- KPSC ಅಕ್ರಮ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮ ನೇಮಕಾತಿ
- ದಾಖಲೆಗಳ ಸಮೇತ ಮಾಹಿತಿ ಬಿಚ್ಚಿಟ್ಟ ಎಚ್ಡಿ ಕುಮಾರಸ್ವಾಮಿ, ಪ್ರಿಯಾಂಕ್ ರಾಜೀನಾಮೆಗೆ ಪಟ್ಟು
- ಕೆಪಿಎಸ್‌ಸಿ ಅಕ್ರಮ ಬಯಲಿಗಿಟ್ಟು ಸರ್ಕಾರದ ವಿರುದ್ಧ ಕಿಡಿಕಾರಿದ ಎಚ್ಡಿ ಕುಮಾರಸ್ವಾಮಿ
ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ(KPSC) ಅಕ್ರಮ, ನೇಮಕಾತಿ ದಂಧೆ ಸೇರಿದಂತೆ ಸಾಲು, ಸಾಲು ಸಮಸ್ಯೆ ಇದೆ. ಪಾರ್ಕ್ ಜಾಗವನ್ನು ಶೇಕಡಾ 5 ಕ್ಕೆ ಇಳಿಸುವುದು, ಸುರಂಗ ಮಾರ್ಗದ ಯೋಜನೆ ಸೇರಿದಂತೆ ಹಲವು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಗುಡುಗಿದರು.
ಈಗ ಕೆಪಿಎಸ್ಸಿ ಸಂಸ್ಥೆ ಮೇಲೆ ಈಗ ಜನರಿಗೆ ವಿಶ್ವಾಸವಿಲ್ಲ. ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ರೀತಿಯ ಭರವಸೆ ಇಲ್ಲ. ಸಂಸ್ಥೆಗೆ ಸದಸ್ಯರನ್ನು ನೇಮಕ ಮಾಡುವ ವಿಚಾರದಲ್ಲೇ ದೊಡ್ಡ ಮಟ್ಟದ ದಂಧೆ ನಡೆಯುತ್ತಿದ್ದು. ನಿರ್ದಿಷ್ಟ ರೇಟ್ ಫಿಕ್ಸ್ ಮಾಡಿಕೊಳ್ಳಲಾಗಿದೆ. ಜಾತಿಯ ಹೆಸರಿನಲ್ಲಿ ಹಾಗೂ ಹಣ ನಿಗದಿ ಮಾಡಿ ಸದಸ್ಯರ ನೇಮಕಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೆಪಿಎಸ್ಸಿ ಅಕ್ರಮ
ಕೆಪಿಎಸ್‍ಸಿ ಮೇಲೆ ಜನರಿಗೆ ನಂಬಿಕೆ ಕಳೆದುಕೊಳ್ಳಲು ಈ ಸರ್ಕಾರವೇ ಸಂಪೂರ್ಣ ಕಾರಣ. ಆಡು ಮುಟ್ಟದ ಸೊಪ್ಪಿಲ್ಲ, ಗೃಹ ಸಚಿವರು ಮಾತನಾಡದ ವಿಷಯವಿಲ್ಲ. ನಿತ್ಯ ಸಮಸ್ಯೆಗಳ ಬಗ್ಗೆ ಪ್ರತಿನಿತ್ಯ ಹೇಳಿಕೆ ನೀಡುತ್ತಾರೆ. ಕೆಪಿಎಸ್‍ಸಿ ವಿಚಾರವಾಗಿಯೂ ಗೃಹ ಸಚಿವರು ಮಾತನಾಡಿದ್ದಾರೆ. ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ, ತಂದೆಯನ್ನು ನೋಡಲು ಅನುಮತಿ ಪಡೆದು ಹೋಗಿದ್ದಾರೆ ಎಂದು ಗೃಹ ಸಚಿವರೇ ಸಮರ್ಥಿಸಿಕೊಳ್ಳುತ್ತಾರೆ. ಅಲ್ಲದೆ ನನಗೆ ಕರೆ ಮಾಡಿದ್ದಾರೆ ಎಂದೂ ಹೇಳಿಕೊಳ್ಳುತ್ತಾರೆ. ಹೀಗಿದ್ದ ಮೇಲೆ ನೀವು ಗೃಹ ಇಲಾಖೆಯನ್ನು ಯಾಕೆ ನಡೆಸುತ್ತಿದ್ದೀರಾ? ಎಂದು ಎಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.
"ಆಗಸ್ಟ್ 25ರಂದು ಏನಾಯ್ತು ಎನ್ನುವ ವಿಷಯ ಗೊತ್ತಿಲ್ಲ ಎಂದು ಹೇಳುತ್ತಾರೆ. ಪರಪ್ಪನ ಅಗ್ರಹಾರ ಜೈಲಿನ ವಿಚಾರದಲ್ಲಂತೂ ರಿಲೇ ಮಾಡಿಸಿದ್ದೇ ಮಾಡಿಸಿದ್ದು. ಆದರೆ ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿಯನ್ನು ಅಡಗಿಸಲು ನಿಮ್ಮಿಂದ ಸಾಧ್ಯವಿಲ್ಲ" ಎಂದು ಎಚ್‌ಡಿಕೆ ಎಚ್ಚರಿಸಿದ್ದಾರೆ.
73 ಸಾವಿರ ಉದ್ಯೋಗ ಭರವಸೆ ಏನಾಯಿತು?.
ರಾಜ್ಯದ 4 ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿರುವುದನ್ನು ಉಲ್ಲೇಖಿಸಿದ ಅವರು, "73 ಸಾವಿರ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದಿರಿ. ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಹೇಳತ್ತಾರೆ. ಆದರೆ, ಹೊಸ ಹೊಸ ತಿದ್ದುಪಡಿ ಹೆಸರಲ್ಲಿ ಏನೇನೂ ನಡೆಯುತ್ತಿದೆ ಎಂಬ ವಿಚಾರ ಗೊತ್ತಿಲ್ಲ ಎಂದು ಕೊಳ್ಳಬೇಡಿ ಎಂದು ಗುಡುಗಿದರು.
ನೇಮಕಾತಿ ದಂಧೆ
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 4 ಮಂದಿ ಎಕ್ಸಿಕ್ಯೂಟಿವ್ ಇಂಜಿನಿಯರ್ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮದ ಸ್ಪೋಟಕ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಈ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಗೊತ್ತಿದ್ದರೂ ಸಹ ನೇಮಕ ಮಾಡಿದ್ದಾರೆ, ಈ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒತ್ತಾಯಿಸಿದರು
ಅಕ್ರಮದ ಬಗ್ಗೆ ಎಚ್ಡಿ ಕುಮಾರಸ್ವಾಮಿ ಅವರು ಕೊಟ್ಟ ದಾಖಲೆಗಳ ಪಿಡಿಎಫ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ