ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕೆಂಪೇಗೌಡಅಂತಾರಾಷ್ಟ್ರೀಯ ವಿಮಾನ ನಿಲ್ದಾಣಬೆಂಗಳೂರು 2025-26ನೇಹಣಕಾಸು ವರ್ಷದಲ್ಲಿ 44.47ದಶಲಕ್ಷ ಪ್ರಯಾಣಿಕರಿಗೆಸೇವೆ ನೀಡುವ ಮೂಲಕ ಹೊಸ ದಾಖಲೆಬರೆದಿದೆ.
ದಕ್ಷಿಣಭಾರತದ ಪ್ರಮುಖ ಜಾಗತಿಕ ಪ್ರವೇಶದ್ವಾರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣ ತನ್ನ ಸ್ಥಾನವನ್ನುಮತ್ತಷ್ಟು ಬಲಪಡಿಸಿಕೊಂಡಿದ್ದು,ಪ್ರಯಾಣಿಕರಜೊತೆಗೆ ಸರಕು ಸಾಗಾಣಿಕೆಯಲ್ಲೂಉತ್ತಮ ಏರಿಕೆ ಕಂಡು ಬಂದಿದೆ.ಪ್ರಸಕ್ತ ಸಾಲಿನಲ್ಲಿ5.32 ಲಕ್ಷಮೆಟ್ರಿಕ್ ಟನ್ ಸರಕುಗಳನ್ನುಸಾಗಣೆ ಮಾಡಿದೆ.ಅಂತಾರಾಷ್ಟ್ರೀಯಪ್ರಯಾಣಿಕರ ಏರಿಕೆ,ದೇಶೀಯ ಬೇಡಿಕೆಯಸ್ಥಿರತೆ ಹಾಗೂ ಬಲಿಷ್ಠ ಸರಕುಕಾರ್ಯಾಚರಣೆ ವ್ಯವಸ್ಥೆ ಈಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.
ಅಂತಾರಾಷ್ಟ್ರೀಯಪ್ರಯಾಣಿಕರ ಸಂಚಾರ ಶೇ.23.9ರಷ್ಟುಏರಿಕೆಯಾಗಿ 7.23ದಶಲಕ್ಷ ತಲುಪಿದರೆ,ದೇಶೀಯ ಸಂಚಾರಶೇ.3.3ರಷ್ಟುಏರಿಕೆಯೊಂದಿಗೆ 37.24ದಶಲಕ್ಷ ತಲುಪಿದೆ.ಒಟ್ಟಾರೆ ಪ್ರಯಾಣಿಕರಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆಶೇ.6.2ರಷ್ಟುಏರಿಕೆ ಕಂಡುಬಂದಿದೆ.ಜಾಗತಿಕ ರಾಜಕೀಯಸವಾಲುಗಳ ನಡುವೆಯೂ ಈ ಬೆಳವಣಿಗೆಗಮನಾರ್ಹವಾಗಿದೆ.
ಕೆಂಪೇಗೌಡಅಂತಾರಾಷ್ಟ್ರೀಯ ವಿಮಾನ ನಿಲ್ದಾಣಬೆಂಗಳೂರು ಹನೋಯ್ ಮತ್ತು ರಿಯಾದ್ಸೇರಿದಂತೆ ಹೊಸ ಅಂತಾರಾಷ್ಟ್ರೀಯಗಮ್ಯಸ್ಥಾನಗಳನ್ನು ಸೇರ್ಪಡೆಗೊಳಿಸುವಮೂಲಕ ತನ್ನ ಜಾಗತಿಕ ಸಂಪರ್ಕವನ್ನುವಿಸ್ತರಿಸಿದೆ.ಲಂಡನ್ ಹೀತ್ರೋ,ಬ್ಯಾಂಕಾಕ್,ಬಹ್ರೇನ್,ಜೆಡ್ಡಾ,ಫುಕೆಟ್,ಕುವೈತ್,ಕಠ್ಮಂಡು,ಮ್ಯೂನಿಕ್ ಮತ್ತುಮಾರಿಷಿಯಸ್ ಮಾರ್ಗಗಳಲ್ಲಿ ಸೇವೆಗಳಸಂಖ್ಯೆಯನ್ನು ಹೆಚ್ಚಿಸಲಾಗಿದೆ.ದುಬೈ,ಅಬುಧಾಬಿ,ಸಿಂಗಾಪುರ,ಲಂಡನ್ ಹೀತ್ರೋಮತ್ತು ಕೌಲಾಲಂಪುರ ಪ್ರಮುಖಅಂತಾರಾಷ್ಟ್ರೀಯ ಗಮ್ಯಸ್ಥಾನಗಳಾಗಿದ್ದರೆ,ದೆಹಲಿ,ಮುಂಬೈ,ಕೊಲ್ಕತ್ತಾ,ಹೈದರಾಬಾದ್ಮತ್ತು ಪುಣೆ ದೇಶೀಯವಾಗಿ ಪ್ರಮುಖಮಾರ್ಗಗಳಾಗಿವೆ. ಒಟ್ಟು 2,80,800ವಿಮಾನ ಸಂಚಾರಗಳುದಾಖಲಾಗಿವೆ.ಇದು ಕಳೆದ ವರ್ಷಕ್ಕೆಹೋಲಿಸಿದರೆ ಶೇ.4.5ರಷ್ಟುಏರಿಕೆಯಾಗಿದೆ.ದಿನಕ್ಕೆ ಸರಾಸರಿ769 ವಿಮಾನಸಂಚಾರ ದಾಖಲಾಗಿದ್ದು,ಒಂದೇ ದಿನದಲ್ಲಿಗರಿಷ್ಠ 837 ವಿಮಾನಗಳಸಂಚಾರ ದಾಖಲಾಗಿದೆ.ಪ್ರಯಾಣಿಕರಸಂಚಾರದಲ್ಲಿಯೂ ಹೊಸ ದಾಖಲೆನಿರ್ಮಾಣವಾಗಿದ್ದು,ಒಂದೇ ದಿನದಲ್ಲಿ1,39,111 ಪ್ರಯಾಣಿಕರುವಿಮಾನ ನಿಲ್ದಾಣದ ಮೂಲಕಪ್ರಯಾಣಿಸಿದ್ದಾರೆ.