- ಹಿರಿಯ ಸಾಹಿತಿ ಪ್ರೊ. ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಗೆ 19 ಸದಸ್ಯರನ್ನು ನೇಮಕ ಮಾಡಿದೆ.
- ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಸಮಿತಿ ಅಸ್ತಿತ್ವಕ್ಕೆ ಬರುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಈ ಸಮಿತಿ ಕಾರ್ಯ ನಿರ್ವಹಿಸಲಿದೆ.
- ಡಾ. ವಿನಯ ಒಕ್ಕುಂದ, ನಾಗೇಶ್ ಹೆಗಡೆ ಮತ್ತು ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ವಿ. ಶಾಂತರಾಜು ಅವರನ್ನು ನೇಮಕ
ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕ ಆಯ್ಕೆಗಾಗಿ ಇರುವ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಆದೇಶ ಹೊರಡಿಸಿದೆ.
ಹಿರಿಯ ಸಾಹಿತಿ ಪ್ರೊ. ರಾಜಪ್ಪ ದಳವಾಯಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಗೆ 19 ಸದಸ್ಯರನ್ನು ನೇಮಕ ಮಾಡಿದೆ. ಈ ಸಮಿತಿಯ ಅವಧಿಯು ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಸಮಿತಿ ಅಸ್ತಿತ್ವಕ್ಕೆ ಬರುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಈ ಸಮಿತಿ ಕಾರ್ಯ ನಿರ್ವಹಿಸಲಿದೆ.
ಸಮಿತಿ ಸದಸ್ಯರು:
ಸದಸ್ಯರಾಗಿ ರೇವಣಪ್ಪ ಬಿದರಗೇರಿ, ಟಿ. ಗುರುರಾಜ್, ಡಾ. ವಿನಯ ಒಕ್ಕುಂದ, ಡಾ. ಅರುಣ್ ಜೋಳದ ಕೂಡ್ಲಗಿ, ವಿ.ಎಲ್. ನರಸಿಂಹಮೂರ್ತಿ, ವಿಜಯಲಕ್ಷ್ಮೀ ಆರ್.ಜೆ., ಮೀನಾಕ್ಷಿ ಬಾಳಿ, ನಾಗೇಶ್ ಹೆಗಡೆ, ಪ್ರೊ. ಶೌಕತ್ ಅಜೀಂ, ಡಾ.ವಿನಾಯಕ ಕಮತದ, ಸಿ. ಮರಿಸ್ವಾಮಿ ಮತ್ತು ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ವಿ. ಶಾಂತರಾಜು ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಮತ್ತು ಲೇಖಕರ ಸಂಘದ ಅಧ್ಯಕ್ಷ ಡಿ.ಎನ್. ಗುರುಪ್ರಸಾದ್, ಪುಸ್ತಕ ಪ್ರಾಧಿಕಾರ ಅಧ್ಯಕ್ಷ, ಮೈಸೂರಿನ ಪ್ರಸಾರಾಂಗ ನಿರ್ದೇಶಕ, ವಿಜ್ಞಾನ ಪರಿಷತ್ತು ಅಧ್ಯಕ್ಷ, ಗ್ರಂಥಾಲಯ ಪ್ರಾಧಿಕಾರದ ನಾಮ ನಿರ್ದೇಶಿತ ಪ್ರತಿನಿಧಿ, ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.