ಶಾಂತಿ ಸ್ಥಾಪನೆಗೆ ಭಗವದ್ಗೀತೆ ಪಠಿಸಿ Bhagavad Gita 
ರಾಜ್ಯ

ಶಾಂತಿ ಸ್ಥಾಪನೆಗೆ ಭಗವದ್ಗೀತೆ ಪಠಿಸಿ Bhagavad Gita

ಪ್ರಮುಖ ಮುಖ್ಯಾಂಶಗಳು

  • ಸತ್ಯಸಾಯಿ ವಿದ್ಯಾಸಂಸ್ಥೆ ಅಧ್ಯಕ್ಷ ವೈ.ಶ್ರೀನಿವಾಸರೆಡ್ಡಿ ಅಭಿಮತ
ಬಾಗೇಪಲ್ಲಿ: ಭಗವದ್ಗೀತೆ ಪಠಣದಿಂದ ಕೋಪ, ಚಿಂತೆ, ಭಯ, ಉದ್ವೇಗ ದೂರವಾಗಿ ಮನೆ ಮತ್ತು ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲಸುತ್ತದೆ ಎಂದು ಸತ್ಯಸಾಯಿ ವಿದ್ಯಾಸಂಸ್ಥೆ ಅಧ್ಯಕ್ಷ ವೈ.ಶ್ರೀನಿವಾಸರೆಡ್ಡಿ ತಿಳಿಸಿದರು. Bhagavad Gita
ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿನ ಸಿದ್ದಿ ಸಮಾಧಿ ಯೋಗ ಮಂದಿರದಲ್ಲಿ ಅಯೋಧ್ಯ ಶ್ರೀರಾಮ ಸತ್ಸಂಗ ಸಮಿತಿಯಿಂದ ಆಯೋಜಿಸಿದ್ದ ಶ್ರೀ ರುದ್ರ ಭಾಷ್ಯ ಹಾಗೂ ಭಗವದ್ಗೀತೆ ಸತ್ಸಂಗ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿಶ್ವದ ಅತ್ಯಂತ ಶ್ರೇಷ್ಠ ಗ್ರಂಥವಾಗಿರುವ ಭಗವದ್ಗೀತೆ ಪಠಣದಿಂದ ಮಾನವೀಯ ಮೌಲ್ಯ ಬೆಳೆಯುತ್ತದೆ. ಇದು ಸನ್ಮಾರ್ಗದ ಜೀವನಕ್ಕೆ ಅಡಿಪಾಯ ಎಂದರು.
ಭಗವದ್ಗೀತೆ ಶ್ಲೋಕ ಪಠಣೆಯ ಮಹತ್ವ, ಭಾವಾರ್ಥ, ಗೂಢಾರ್ಥಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ವಿಶ್ವ ಶಾಂತಿಗೆ ಕಾರಣವಾಗುತ್ತದೆ. ಬೆಳೆಯುವ ಮಕ್ಕಳಲ್ಲಿ ಆತ್ಮರ್ಸೆರ್ಯ ಮೂಡುತ್ತದೆ ಎಂದರು.
ಲಕ್ಷಿ$್ಮವೆಂಕಟೇಶ್ವರ ಆಸ್ಪತ್ರೆ ಮುಖ್ಯಸ್ಥ ಡಾ.ರವೀಂದ್ರರೆಡ್ಡಿ ಮಾತನಾಡಿ, ಸನಾತನ ಧರ್ಮದ ಶ್ರೇಷ್ಠ ಗ್ರಂಥವಾಗಿರುವ ಭಗವದ್ಗೀತೆಯ ಶ್ಲೋಕ ಅಹಿಂಸೆ, ಸತ್ಯ, ಸೇವೆ, ಎಲ್ಲ ಮಾದರಿಯ ಜೀವಿಗಳಲ್ಲಿ ದೈವತ್ವ ಕಾಣುವ ಸಂದೇಶ ಸಾರುತ್ತದೆ ಎಂದರು. ಅಧ್ಯಾತ್ಮಿಕ ಮಾರ್ಗದರ್ಶನ, ನೈತಿಕ ಕರ್ತವ್ಯ, ಧರ್ಮದ ಹಾದಿಯಲ್ಲಿ ನಡೆದು ಶಾಂತಿ ಸಾರುವಂತೆ ಉಪದೇಶಿಸುತ್ತದೆ. ಧರ್ಮ, ಕರ್ಮ, ಪುನರ್ಜನ್ಮದಂತಹ ತತ್ವಗಳ ಮೂಲಕ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದರು. ಶ್ರೀ ರುದ್ರಭಾಷ್ಯ ಪ್ರವಚನಕಾರರಾದ ಶೇಷಕುಮಾರ್​ ಮತ್ತು ಪೂರ್ಣಿಮಾ ದಂಪತಿ ಅವರನ್ನು ಸನ್ಮಾನಿಸಲಾಯಿತು.