ದೇವನಹಳ್ಳಿ 16ನೇ ವಾರ್ಡಿನಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್​, ಪುರಸಭೆ ಮಾಜಿ ಅಧ್ಯಕ್ಷ ಎಂ. ಮೂರ್ತಿ, ಬೆಸ್ಕಾಂ ಎಇ ಭರತ್​ ಗೃಹಜ್ಯೋತಿ ನವೀಕರಣ ಅರ್ಜಿಗಳನ್ನು ವಿತರಿಸಿ, ಅರಿವು ಮೂಡಿಸಿದರು. 
ರಾಜ್ಯ

ಮರುಅರ್ಜಿ ಸಲ್ಲಿಸಿ ಗೃಹಜ್ಯೋತಿ ಪಡೆಯಿರಿ / DEVANAHALLI

ದೇವನಹಳ್ಳಿ : ರಾಜ್ಯದ ಮತದಾರರಿಗೆ ಗ್ಯಾರಂಟಿ ಯೋಜನೆಗಳ ಅನುಕೂಲ ಸಿಗಬೇಕೆಂಬ ಉದ್ದೇಶದಿಂದ ಫಲಾನುಭವಿಗಳ ಮರು ಸಮೀೆಯನ್ನು ಸರ್ಕಾರ ಕೈಗೊಂಡಿದೆ ಎಂದು ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್​ ಹೇಳಿದರು.
ಪಟ್ಟಣದ ಅಂಬೇಡ್ಕರ್​ ಕಾಲನಿಯ ಮಾರಮ್ಮ ದೇವಾಲಯದ ಬಳಿ ಗೃಹಜ್ಯೋತಿ ಫಲಾನುಭವಿಗಳಿಗೆ ನವೀಕರಣದ ಅರ್ಜಿಗಳನ್ನು ವಿತರಸಿ ಮಾತನಾಡಿದರು. ಕೆಲವರು ಬೇರೆ ರಾಜ್ಯಗಳಿಂದ ಬಂದು ನಮ್ಮ ರಾಜ್ಯದ ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಿದ್ದಾರೆ. ಸ್ಥಳಿಯ ಬಹಳಷ್ಟು ಜನ ಗ್ಯಾರಂಟಿಗಳಿಗೆ ಅರ್ಹರಿದ್ದರೂ ಸೌಲಭ್ಯಗಳು ಸಿಗದೆ ವಂಚಿತರಾಗಿದ್ದಾರೆ. ಅರ್ಹರ ವಿವರಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಹೊರ ರಾಜ್ಯದವರು ಮತ್ತು ನಮ್ಮ ರಾಜ್ಯದವರು ಎಷ್ಟು ಮಂದಿ ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್​ ವಿದ್ಯುತ್​ ಉಚಿತ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ನಿಖರ ಅಂಕಿ ಅಂಶ ಕಲೆ ಹಾಕಲು ಲಾನುಭವಿಗಳ ಮರುಸಮೀೆ ಅನುಕೂಲವಾಗಲಿದೆ ಎಂದರು.
ವಿದ್ಯುತ್​ ಮೀಟರ್​ ಇನ್ನೂ ಅಳವಡಿಸಿಕೊಂಡಿರುವುದಿಲ್ಲ, ಮೃತರ ಹೆಸರಿನಲ್ಲಿ ವಿದ್ಯುತ್​ ಮೀಟರ್​ ಇದ್ದು, ಅದನ್ನು ಬದಲಿಸದೇ ಇರುವವರು ಹಾಗೂ ಮನೆ ಪೌತಿ ಖಾತೆಯಾದವರ ಹೆಸರಿನಲ್ಲಿಯೇ ಇರಿಸಿಕೊಂಡವರು ತಮ್ಮ ಹೆಸರಿಗೆ ಬದಲಾಯಿಸಿಕೊಂಡು ಗೃಹಜ್ಯೋತಿ ಸೇರಿದಂತೆ ಗ್ಯಾರಂಟಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಅದಕ್ಕೆ ಆಯಾ ಇಲಾಖಾ ಅಧಿಕಾರಿಗಳು ಸಹ ಮಾರ್ಗದರ್ಶ ನೀಡಲಿದ್ದಾರೆ. ಅಧಿಕಾರಿಗಳು ಸಮೀೆಗೆ ಮತ್ತು ನವೀಕರಣ ಅರ್ಜಿ ನೀಡಲು ಬಂದಾಗ ಅವರು ಕೇಳಿದ ದಾಖಲಾತಿ ವಿವರ ನೀಡಿ ಸೌಲಭ್ಯದ ಫಲಾನುಭವಿಗಳಾಗಬಹುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ವಿದ್ಯುತ್​ ಇಲಾಖೆಯಿಂದ ಗೃಹಜ್ಯೋತಿ ಮರು ಸರ್ವೇ ಮಾಡುತ್ತಿದ್ದು, ಬೆಸ್ಕಾಂ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಿ ಉಚಿತ ಸೌಲಭ್ಯ ಪಡೆದುಕೊಳ್ಳಿ. ಅಧಿಕಾರಿಗಳು ಬೆಳಗ್ಗೆ 8ರಿಂದ ರಾತ್ರಿ 9ರವರೆಗೂ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ಹೊರ ರಾಜ್ಯದವರು ಯೋಜನೆಯ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದರೆ ರಾಜ್ಯಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ. ಇವರನ್ನು ಮರುಸಮೀೆ ಬಳಿಕ ಉಚಿತ ಸೌಲಭ್ಯದಿಂದ ಹೊರಗಿಡಲಾಗುತ್ತದೆ. ವಾರ್ಡನಲ್ಲಿ ದಲಿತ, ಬಡವರೇ ಹೆಚ್ಚಾಗಿದ್ದು, ಯಾರು ಮನೆಗಳಿಗೆ ಇಲ್ಲಿಯವರೆಗೆ ವಿದ್ಯುತ್​ ಮೀಟರ್​ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲವೋ ಅವರು ಬೆಸ್ಕಾಂನಿಂದ ವಿದ್ಯುತ್​ ಸಂಪರ್ಕ, ಮೀಟರ್​ ಅಳವಡಿಸಿಕೊಟ್ಟು, ಗೃಹಜ್ಯೋತಿ ಸೌಲಭ್ಯ ಒದಗಿಸಲಾಗುವುದು ಎಂದರು.
ಮನೆಗಳಿಗೆ ಬರುವ ಲೈನ್​ಮನ್​ ಅಥವಾ ಮೀಟರ್​ ರೀಡರ್​ಅನ್ನು ಸಂಪರ್ಕಿಸಿದರೆ ಅವರು ಎಲ್ಲ ಮಾರ್ಗದರ್ಶನ ನೀಡಿ, ಅರ್ಜಿಗಳನ್ನು ಭರ್ತಿ ಮಾಡಿ ಆನ್​ಲೈನ್​ ನೋಂದಣಿ ಮಾಡಿಕೊಡುತ್ತಾರೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಮೂರ್ತಿ, ಬೆಸ್ಕಾಂ ಎಇ ಭರತ್​, ಬೆಸ್ಕಾಂ ಸಿಬ್ಬಂದಿ ನಂದಕುಮಾರ್​, ರವಿ, ಕೃಷ್ಣ ನಾರಾಯಣಸ್ವಾಮಿ ಮತ್ತಿತರರು ಇದ್ದರು.