ಸಮುದಾಯದ ಬೇಡಿಕೆ ಈಡೇರಿಸಲು ಸಿದ್ಧ community
ಶ್ರೀನಿವಾಸಪುರ: ಸವಿತಾ ಸಮಾಜದ ಸಮುದಾಯ ಭವನಕ್ಕೆ ಕಾಂಪೌಂಡ್ ನಿರ್ಮಾಣ ಸೇರಿ ಹಲವು ಬೇಡಿಕೆ ಈಡೇರಿಸು ಸಿದ್ಧನಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.community
ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಮಾತನಾಡಿ, ನಾನು ನಿಮ್ಮ ಸೇವಕ. ನಿಮಗಾಗಿ ದುಡಿಯಲು ಸಿದ್ಧನಿದ್ದೇನೆ. ಸಮುದಾಯದ ಬೇಡಿಕೆಯಂತೆ ಸಮುದಾಯ ಭವನಕ್ಕೆ ದಾರಿ, ಕಾಂಪೌಂಡ್ ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಸವಿತಾ ಮಹರ್ಷಿಗಳು ಸಮಾಜದ ಮುಖಿಯಾಗಿ ಕೆಲಸ ಮಾಡಿದ್ದಾರೆ. ಇಂತಹ ಮಹಾತ್ಮರ ಜಯಂತಿ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ಸವಿತಾ ಕಲಾವಿದರ ಸಂದ ಅಧ್ಯಕ್ಷ ನೆಲವಂಕಿ ರಾಮಚಂದ್ರಪ್ಪ, ಸಮುದಾಯದ ಮುಖಂಡರಾದ ಕೆ.ಸುಂದರ್ರಾಜು, ಕೆ.ಗೋವಿಂದು, ಯದರೂರು ಶ್ರೀರಾಮಪ್ಪ, ಜಗನ್ನಾಥ್, ದಿನೇಶ್, ಜಗಣ್ಣ, ನಾರಾಯಣಪ್ಪ, ರಾಮಕೃಷ್ಣ, ಶಿವ, ಟಿ.ಸಿ.ಮುನಿರಾಜು, ರಾಮಪ್ಪ, ಕೊಂಡಮರಿ ಶ್ರೀನಿವಾಸ್, ಎಸ್.ಮಂಜನಾಥ್, ಶಿವಕುಮಾರ್, ಗೋಪಾಲಕೃಷ್ಣ ಇದ್ದರು.