ಯಾದಗಿರಿ ವಿಧಾನಸಭೆ ಮತೇತ್ರದ ದೋರನಹಳ್ಳಿಯಲ್ಲಿ ಹಯ್ಯಾಳ, ನಾಯ್ಕಲ್ ಜಿಪಂ ವ್ಯಾಪ್ತಿಯ ಗ್ರಾಮಗಳ ಕುಂದು ಕೊರತೆ ಹಾಗೂ ವಿವಿಧ ಸಮಸ್ಯೆಯನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ಶುಕ್ರವಾರ ಆಲಿಸಿದರು. ಪರಶುರಾಮ ಕುರಕುಂದಿ, ಗೊಲ್ಲಾಳಪ್ಪ ಗೋಲಗೇರಿ, ಸಾಯಬಣ್ಣ ಹಲಗಿ, ನಾಗಶೇಟ್ಟಿ ಸಾಹುಕಾರ, ಕಲ್ಲಪ್ಪ ಖಾನಾಪುರ, ಶಂಕ್ರಯ್ಯಸ್ವಾಮಿ, ಸಿದ್ದಣ್ಣ, ಇಂದ್ರಜಿತ್, ರಾಜು ಗುತ್ತೇದಾರ, ಮಲ್ಲರಡ್ಡಿ ದೊರೆ, ಸುರೇಶ ಸಾಹುಕಾರ, ಮಲ್ಲಿನಾಥ ಮಲಗೊಂಡ ಇತರರಿದ್ದರು.
- ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮುದ್ನಾಳ್ ಭರವಸೆ
- ದೋರನಹಳ್ಳಿಯಲ್ಲಿ ಮತಕ್ಷೇತ್ರದ ಕುಂದು ಕೊರತೆ ಸಭೆ
ದೋರನಹಳ್ಳಿ: ಜನರ ಸಮಸ್ಯೆಗೆ ಸದಾ ಧ್ವನಿಯಾಗಿ ನಿಲ್ಲಲು ನಾನು ಸಿದ್ಧನಿದ್ದು, ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಭಾರತೀಯ ಜತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ಹೇಳಿದರು.
ಪಟ್ಟಣದ ಆದಿಸಂಗಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಯಾದಗಿರಿ ವಿಧಾನಸಭಾ ಮತಕ್ಷೆತ್ರದ ಕುಂದು ಕೊರತೆ, ಮೂಲಭೂತ ಸೌಕರ್ಯ ಮತ್ತು ಸಮಸ್ಯೆ ಪರಿಹಾರ ಕುರಿತು ಕರೆದಿದ್ದ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮತಕ್ಷೇತ್ರದ ಸಮಸ್ಯೆ ಕುರಿತು ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಈ ಹೋರಾಟಕ್ಕೆ ತಮ್ಮ ಬೆಂಬಲ ಬೇಕು ಎಂದು ಹೇಳಿದರು.
ಅಧಿಕಾರದ ಅಮಲಿನಲ್ಲಿರುವ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಇದು ಸಕಾಲವಾಗಿದೆ. ಅಧಿಕಾರದಲ್ಲಿದ್ದವರೆ ಲೂಟಿಗೆ ನಿಂತರೆ ಜನರ ಸಮಸ್ಯೆಗೆ ಪರಿಹಾರ ಕೊಡುವವರು ಯಾರು?. ಹೀಗಾಗಿ ನಾನು ಅನಿವಾರ್ಯವಾಗಿ ಹೋರಾಟ ಮಾಡಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ನಮ್ಮ ಸಮಸ್ಯೆ ಮತ್ತು ಕುಂದು ಕೊರತೆಗಳ ಪರಿಹಾರಕ್ಕಾಗಿ ಬೃಹತ್ ಹೋರಾಟ ಮಾಡಲು ನಿರ್ಧರಿಸಲಾಗಿದ್ದು, ಮತಕ್ಷೇತ್ರದಿಂದ 10 ಸಾವಿರ ಜನರನ್ನು ಸೇರಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ. ಹೀಗಾಗಿ ಈ ಹೋರಾಟಕ್ಕೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಮಾತನಾಡಿ, ಸರ್ಕಾರ ಮತ್ತು ಅಧಿಕಾರಿಗಳ ಚರ್ಮ ದಪ್ಪವಾಗಿದೆ. ಹೀಗಾಗಿ ಹೋರಾಟದ ಬಿಸಿ ಮುಟ್ಟಿಸಿದರೆ ಮಾತ್ರ ಜನರ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೆ ಶಾಸಕರ ಪುತ್ರನೇ ಖುದ್ದಾಗಿ ಮರಳು ದಂದಗೆ ಇಳಿದಿದ್ದಾರೆ ಎಂದು ಅವರ ಪಕ್ಷದ ಕಾರ್ಯಕರ್ತರೇ ಗೋಳಾಡುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಗೊಲ್ಲಾಳಪ್ಪ ಗೋಲಗೇರಿ, ಸಾಯಬಣ್ಣ ಹಲಗಿ, ನಾಗಶೇಟ್ಟಿ ಸಾಹುಕಾರ, ಕಲ್ಲಪ್ಪ ಖಾನಾಪುರ, ಶಂಕ್ರಯ್ಯಸ್ವಾಮಿ, ಸಿದ್ದಣ್ಣ, ಇಂದ್ರಜಿತ್, ರಾಜು ಗುತ್ತೇದಾರ, ಮಲ್ಲರಡ್ಡಿ ದೊರೆ, ಸುರೇಶ ಸಾಹುಕಾರ, ಮಲ್ಲಿನಾಥ ಮಲಗೊಂಡ, ಸುರೇಶಗೌಡ ಎರಿಬಿಡಿ, ಸಿದ್ರಾಮರಡ್ಡಿ ಪಾಟೀಲ್, ಡಾ.ಬಸವರಾಜ, ಗೋವಿಂದ ಕೊಂಚೆಟ್ಟಿ, ರಾಮಲಿಂಗಪ್ಪ ಕೊಂಚೆಟ್ಟಿ, ರಂಗಪ್ಪ ನಾಯಕ್ ದೊರೆ, ಲಿಂಗರಾಜ ಸಾಹುಕಾರ, ವಾಲ್ಮೀಕಿ ನಾಯಕ, ಮೌನೇಶ, ಸಾಬಣ್ಣ ಗುಂಟನೂರ್, ಮಹಾಂತೇಶ ಮಲಗೊಂಡ ಹಲವು ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು. ಸಭೆಯ ನಿರ್ವಹಣೆಯನ್ನು ದೊಡ್ಡಪ್ಪ ದೇಸಾಯಿ, ಗೋವಿಂದಪ್ಪ ಕೊಂಚೆಟ್ಟಿ, ಕಲ್ಲಪ್ಪ ಖಾನಾಪುರ, ಮಂಜುನಾಥ ಕಂಚಗಾರ, ಭೀಮ ಆಂದೇಲಿ, ವೆಂಕಟೇಶ ಕಶೇಟ್ಟಿ, ರವಿ ಪಾಲ್ಕಿ ಇದ್ದರು.