ಡಾ.ಪ್ರಣವಾನಂದ ಸ್ವಾಮೀಜಿ 
ರಾಜ್ಯ

ಫ್ರೀಡಂ ಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜು

ಪ್ರಮುಖ ಮುಖ್ಯಾಂಶಗಳು

  • ಕೋಟ, ಮಾಲೀಕಯ್ಯ, ಸುನಿಲ್​, ಶ್ರೀನಾಥ ನೇತೃತ್ವ
  • ಈಡಿಗ,ಬಿಲ್ಲವರ ಮಾಡು ಇಲ್ಲವೆ ಮಡಿ ಹೋರಾಟ
ಕಲಬುರಗಿ: ಡಾ.ಪ್ರಣವಾನಂದ ಸ್ವಾಮೀಜಿಯವರು ಆರಂಭಿಸಿದ 700 ಕಿ.ಮೀ ಐತಿಹಾಸಿಕ ಪಾದಯಾತ್ರೆಯ ಸಮಾರೋಪ ಫೆಬ್ರವರಿ 12ರಂದು ಬೆಂಗಳೂರು ಫ್ರೀಡಂ ಪಾರ್ಕ್​ನಲ್ಲಿ ನಡೆಯಲಿದ್ದು, ಕೋಟ ಶ್ರೀನಿವಾಸ ಪೂಜಾರಿ, ಮಾಲಿಕಯ್ಯ ಗುತ್ತೇದಾರ್​, ಎಚ್​.ಆರ್​.ಶ್ರೀನಾಥ ಧಣಿ, ಸುನಿಲ್​ಕುಮಾರ್​ ಈಡಿಗರ ಶಕ್ತಿ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು ಫ್ರೀಡಂ ಪಾರ್ಕ್​ಗೆ 12ರಂದು ಬೆಳಗ್ಗೆ 10ಕ್ಕೆ ಪಾದಯಾತ್ರೆ ತಲುಪಲಿದ್ದು ಇದಕ್ಕಾಗಿ ರಾಜ್ಯದ ಎಲ್ಲಾ ತಾಲೂಕುಗಳಿಂದ ಬಸ್​, ರೈಲು ಮತ್ತು ಖಾಸಗಿ ವಾಹನಗಳ ಮೂಲಕ ಸಮಾಜ ಬಾಂಧವರು ಆಗಮಿಸಲು ಪೂರ್ವ ತಯಾರಿ ಕೈಗೊಳ್ಳಲಾಗಿದೆ.
ಈ ಹೋರಾಟವು ಸರ್ಕಾರ, ಪ ಮತ್ತು ವ್ಯಕ್ತಿಗಳ ವಿರುದ್ಧವಲ್ಲ. ಇದು ರಾಜ್ಯದ ಅತಿ ಹಿಂದುಳಿದ ಈಡಿಗ ಬಿಲ್ಲವ ನಾಮಧಾರಿ ಸೇರಿ 26 ಪಂಗಡಗಳ ಸ್ವಾಭಿಮಾನದ ಹೋರಾಟ. ಆರ್ಥಿಕ, ಸಾಮಾಜಿಕ ಮತ್ತು ಶೈಣಿಕ ಅಭಿವೃದ್ಧಿಗೆ ಮತ್ತು ಕುಲಕಸುಬು ಕಳೆದುಕೊಂಡ ಸಮುದಾಯದ ಜನರಿಗೆ ನ್ಯಾಯ ಒದಗಿಸುವ ಹೋರಾಟ ಇದಾಗಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಹೇಳಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್​ ಮಾಜಿ ಸದಸ್ಯ ಎಚ್​.ಆರ್​.ಶ್ರೀನಾಥ ಧಣಿ, ಸಮಾಜದ ಮುಖಂಡರಾದ ಬಿಜೆಪಿಯ ಹಿರಿಯ ನಾಯಕ ಸುನಿಲಕುಮಾರ ಕಾರ್ಕಳ, ವಿಧಾನಪರಿಷತ್​ ವಿರೋಧ ಪದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಾಗರದ ಎಚ್​.ಜಿ.ಪ್ರಶಾಂತ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯ ನಿತಿನ್​ ಗುತ್ತೇದಾರ್​, ಜೆಡಿಎಸ್​ ಕಲಬುರಗಿ ಜಿಲ್ಲಾಧ್ಯ ಬಾಲರಾಜ ಗುತ್ತೇದಾರ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯ ಸತೀಶ ಗುತ್ತೇದಾರ, ಅಶೋಕ ಗುತ್ತೇದಾರ, ಡಾ.ರಾಜಶೇಖರ ಸೇಡಂಕರ್​, ವೆಂಕಟೇಶ ಕಡೇಚೂರ್​, ಡಾ.ಸದಾನಂದ ಪೆರ್ಲ ಇತರರು ಭಾಗವಹಿಸಲಿದ್ದಾರೆ.

ಸ್ಪಂದಿಸದಿದ್ದರೆ ಸತ್ಯಾಗ್ರಹ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತೀಪಿಠದಿಂದ ಪ್ರಾರಂಭಿಸಿದ ಪಾದಯಾತ್ರೆ ಫ12ರಂದು ಬೆಂಗಳೂರು ತಲಪುತ್ತಿದ್ದರೂ ಸರ್ಕಾರ ಹೋರಾಟ ಕಡೆಗಣಿಸುತ್ತಿದೆ. 18ರಲ್ಲಿ ಕನಿಷ್ಠ 5 ಬೇಡಿಕೆಗಳನ್ನಾದರೂ ಈಡೇರಿಸದಿದ್ದರೆ ಹೋರಾಟ ಮುಂದುವರಿಸಲಾಗುವುದು. ಸ್ಪಂದಿಸದಿದ್ದರೆ ನಿರಶನ ಸತ್ಯಾಗ್ರಹ ಶುರು ಮಾಡಲಾಗುವುದು ಎಂದು ಡಾ.ಪ್ರಣವಾನಂದ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಈಡಿಗ ಬಿಲ್ಲವ ಸೇರಿ 26ಪಂಗಡಗಳ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನಬದ್ಧವಾಗಿ ಜೀವನ ಮಾಡಲು ಅವಕಾಶ ಕಲ್ಪಿಸಬೇಕು. ಕುಲಕಸುಬು ಕಿತ್ತುಕೊಂಡು ಬೀದಿಪಾಲಾದ ಸಮುದಾಯದ ಕಲ್ಯಾಣಕ್ಕಾಗಿ ಈ ಹೋರಾಟ ನಡೆಯುತ್ತಿದ್ದು, ಅತಿ ಹಿಂದುಳಿದ ಸ್ವಾಮೀಜಿಗಳ ಬೆಂಬಲದೊಂದಿಗೆ ಪಾದಯಾತ್ರೆ ಸಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಫ್ರೀಡಂ ಪಾರ್ಕ್​ನಲ್ಲಿ ನಡೆಯಲಿರುವ ರಾಜ್ಯದ ಈಡಿಗ ಬಿಲ್ಲವ ಸೇರಿ 26 ಪಂಗಡಗಳ ಶಕ್ತಿ ಪ್ರದರ್ಶನದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಡಾ.ಪ್ರಣವಾನಂದ ಶ್ರೀಗಳು ಮನವಿ ಮಾಡಿದ್ದಾರೆ.
"

ಡಾ.ಪ್ರಣವಾನಂದ ಸ್ವಾಮೀಜಿಯವರು ಸಮಾಜದ ಹಿತಕ್ಕಾಗಿ ಮೂರನೇ ಬಾರಿಗೆ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಪ ಪಂಗಡಗಳೆಂಬ ಭೇದವಿಲ್ಲದೆ ಎಲ್ಲರೂ ಬೆಂಬಲಿಸುವುದು ಅಗತ್ಯ. ಈ ಹೋರಾಟದಲ್ಲಿ ಸರ್ಕಾರದ ಮುಂದಿಟ್ಟ ಬೇಡಿಕೆ ಈಡೇರಿಸಲು ಈಗಾಗಲೇ ಸರ್ಕಾರದ ಅತಿಗಣ್ಯ ನಾಯಕರೊಡನೆ ಚರ್ಚಿಸಲಾಗಿದೆ.

ಮಾಲೀಕಯ್ಯ ಗುತ್ತೇದಾರ್​,

ಮಾಜಿ ಸಚಿವ.