ಲಿಂಗನಬಂಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಿಸಲಾಯಿತು. ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಬಾಲಚಂದ್ರ ಸಾಲಭಾವಿ, ಮುಖ್ಯಶಿಕ್ಷಕ ನಾಗನಗೌಡ ಬಯ್ಯಪುರ, ಶರಣಯ್ಯ ಸರಗಣಾಚಾರ, ದೇವೇಂದ್ರಗೌಡ ಪಾಟೀಲ್ ಇತರರಿದ್ದರು. 
ರಾಜ್ಯ

ರಾಯಣ್ಣ ಶೌರ್ಯ-ಸಾಹಸ ಸ್ಫೂರ್ತಿ

ಯಲಬುರ್ಗಾ: 

ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚನ್ನಮ್ಮ ಅವರ ಸೇನಾನಿಯಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಬಾಲಚಂದ್ರ ಸಾಲಭಾವಿ ಹೇಳಿದರು.

ಲಿಂಗನಬಂಡಿ ಗ್ರಾಮದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜನ್ಮದಿನಾಚರಣೆ ಅಂಗವಾಗಿ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ನೆಲದ ರಕ್ಷಣೆಗಾಗಿ ಬದುಕನ್ನೇ ಮುಡಿಪಾಗಿಟ್ಟ ರಾಯಣ್ಣ ಅವರ ಶೌರ್ಯ, ಸಾಹಸ ಮತ್ತು ತ್ಯಾಗ ಯುವ ಪೀಳಿಗೆಗೂ ಸ್ಫೂರ್ತಿಯಾಗಿದೆ. ಯಾವುದೇ ಸಂದರ್ಭದಲ್ಲೂ ಬ್ರಿಟಿಷರ ಮುಂದೆ ತಲೆಬಾಗಲಿಲ್ಲ. ಬಂಧನಕ್ಕೊಳಗಾದರೂ ನಿಲುವಿನಿಂದ ಹಿಂದೆ ಸರಿಯದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಪ್ರತಿಮ ದೇಶಭಕ್ತಿ ಆದರ್ಶವಾಗಿದೆ. ಪ್ರತಿಯೊಬ್ಬರೂ ರಾಯಣ್ಣ ಧೈರ್ಯ, ಶಿಸ್ತು, ದೇಶಪ್ರೇಮ, ತ್ಯಾಗ ಹಾಗೂ ಹೋರಾಟದ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು. 
ಲಿಂಗನಬಂಡಿ ಗ್ರಾಮವು ಶ್ರೀ ಮೌನೇಶ್ವರರ ಪುಣ್ಯಸ್ಥಳದಿಂದಲೂ ಧಾರ್ಮಿಕವಾಗಿ ವಿಶೇಷ ಮಹತ್ವ ಪಡೆದಿದೆ. ಗ್ರಾಮದ ಜನರು  ಹಬ್ಬ, ಜಯಂತಿ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳನ್ನು  ಒಗ್ಗಟ್ಟಿನಿಂದ ಆಚರಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ ಎಂದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾಗನಗೌಡ ಬಯ್ಯಪುರ, ಶರಣಯ್ಯ ಸರಗಣಾಚಾರ, ಗ್ರಾಪಂ ಮಾಜಿ ಅಧ್ಯಕ್ಷ ದೇವೇಂದ್ರಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಶಂಭುಲಿಂಗಯ್ಯ ಹಿರೇಮಠ, ಮಳಿಯಪ್ಪ ಕಮ್ಮಾರ, ಬಸವರಾಜ ಜಂಬಾಳಿ, ಹಜರತ ನೆರೆಬೆಂಚಿ, ಮಲ್ಲಿಕಾರ್ಜುನ ನಿಟ್ಟಾಲಿ, ದೇವಪ್ಪ ಕಳ್ಳಿಮರದ, ಕುಶ ಬೇವಿನಗಿಡದ, ನಾಗರಾಜ ಹುಡೇದ, ಮುದಕಪ್ಪ ತಳವಾರ, ಮೌನೇಶ ಬೇವಿನಗಿಡದ, ವಿರೂಪಾಕ್ಷಪ್ಪ ಹರಿಜನ, ಕನಕಪ್ಪ ಹುಡೇದ, ಬಸವರಾಜ ಚೌಡಕಿ, ಮೂಕಣ್ಣ ಹುಡೇದ, ರಾಮಣ್ಣ ಕುಂಬಾರ, ಶರಣಪ್ಪ ನಿಟ್ಟಾಲಿ, ಮಳೇಗೌಡ ಸಾಲಭಾವಿ, ಲಕ್ಷ್ಮಣ ಜಡ್ರಾಮಕುಂಟಿ, ಬಸವರಾಜ ಕುಷ್ಟಗಿ, ಪ್ರವೀಣ ಹುಡೇದ ಇತರರಿದ್ದರು.