ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯೊಂದಿಗೆ ರವೀಂದ್ರ ಢಪಳಾಪೂರ. 
ರಾಜ್ಯ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ರವೀಂದ್ರ ಢಪಳಾಪುರ ಹೆಸರು

ಪ್ರಮುಖ ಮುಖ್ಯಾಂಶಗಳು

  • ಎರಡೂವರೆ ವರ್ಷದ ಬಾಲಕನ ಅಪರೂಪದ ಸಾಧನೆ
ಮಹಾಲಿಂಗಪುರ: ಪಟ್ಟಣದ ಪ್ರತಿಭಾವಂತ ಬಾಲಕ ರವೀಂದ್ರ ಢಪಳಾಪುರ ಕೇವಲ 2 ವರ್ಷ 6 ತಿಂಗಳ ವಯಸ್ಸಿನಲ್ಲಿ ಅಪರೂಪದ ಸಾಧನೆ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (ಐಬಿಆರ್) ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.
ಈತನು 41 ಪ್ರಸಿದ್ಧ ವ್ಯಕ್ತಿಗಳು, 30 ಸ್ವಾತಂತ್ರ್ಯ ಹೋರಾಟಗಾರರು, 11 ರಾಷ್ಟ್ರೀಯ ಚಿಹ್ನೆಗಳು, 16 ಐತಿಹಾಸಿಕ ಸ್ಮಾರಕಗಳು, 27 ಮಿಶ್ರ ಜೀವಿಗಳು, 14 ವಿಜ್ಞಾನಿಗಳು, 28 ಭಾರತೀಯ ರಾಜ್ಯಗಳು ಹಾಗೂ 14 ಭಾರತದ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳನ್ನು ಗುರುತಿಸಿ, ಹೆಸರು ಹೇಳುವ ಮೂಲಕ ಈ ಸಾಧನೆ ಮಾಡಿದ್ದಾನೆ.
2023 ಜುಲೈ 24ರಂದು ಜನಿಸಿದ ರವೀಂದ್ರ ತನ್ನ ಅಸಾಧಾರಣ ನೆನಪಿನ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದಿದ್ದಾನೆ. ಆತನ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ 2026 ಜನವರಿ 28ರಂದು ಅಧಿಕೃತವಾಗಿ ದೃಢಪಡಿಸಲಾಗಿದೆ. ಸಂಸ್ಥೆ ಮುಖ್ಯ ಸಂಪಾದಕ ಡಾ. ಸ್ವರೂಪರಾಯ್ ಚೌಧರಿ ಪಾಲಕರ ಒಪ್ಪಿಗೆ ಮೇರೆಗೆ ಜೂನ್ 6ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಚಿವರ್ ಪ್ರಮಾಣ ಪತ್ರ ನೀಡಿದ್ದಾರೆ.
ಪಾಲಕರಾದ ವಿವೇಕ ಢಪಳಾಪುರ, ಕವಿತಾ ಢಪಳಾಪುರ, ವೀಣಾ ಢಪಳಾಪುರ ಹಾಗೂ ಶೋಭಾ ಕಂಕಾಳೆ ಹರ್ಷ ವ್ಯಕ್ತಪಡಿಸಿದ್ದಾರೆ.