Ration Card e-KYC Karnataka
- ರೇಷನ್ ಕಾರ್ಡ್ ಪರಿಷ್ಕರಣೆ ತಾತ್ಕಾಲಿಕ ನಿಲ್ಲಿಸಲಾಗಿದೆ ಎಂದ ಆಹಾರ ಸಚಿವ ರಿಜ್ವಾನ್ ಅರ್ಷದ್.
- ಸೆ.30ವರೆಗೆ ಇಕೆವೈಸಿ ಮಾಡಿಸಲು ಗಡುವು ನೀಡಲಾಗಿದೆ.
- ರೇಷನ್ ಕಾರ್ಡ್ ರದ್ದಾಗುವ ಭೀತಿಯಲ್ಲಿದ್ದ ಜನರಿಗೆ ಗುಡ್ನ್ಯೂಸ್ ಕೊಟ್ಟ ರಿಜ್ವಾನ್ ಅರ್ಷದ್.
ಬೆಂಗಳೂರು: ರೇಷನ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಶುರುವಾಗುತ್ತದೆ ಎಂದು ಭೀತಿಯಲ್ಲಿದ್ದ ಜನರಿಗೆ ಸದ್ಯ ಸರ್ಕಾರ
ರೇಷನ್ ಕಾರ್ಡ್ ಪರಿಷ್ಕರಣೆ ಕಾರ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸೆ.30ರೊಳಗೆ ಇ-ಕೆವೈಸಿ ಮಾಡಿಸುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಅವರು
ಅನರ್ಹ ರೇಷನ್ ಕಾರ್ಡ್ ಹೊಂದಿರುವವರ ಪಟ್ಟಿ ಮಾಡಿ ಅವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಆಹಾರ ಧಾನ್ಯ ಬಡವರ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಫಲಾನುಭವಿಗಳಿಗೆ ಸಮಸ್ಯೆಯಾಗ ಕೂಡದು ಎಂದು ಹೇಳಿದ್ದರು.
ಪರಿಷ್ಕರಣೆ ತಾತ್ಕಾಲಿಕ ಬಂದ್
ಇದರಿಂದ ಕೆಲವು ಪಡಿತರ ಚೀಟಿ ಹೊಂದಿರುವ ನಾಗರಿಕರಿಗೆ ಭಯ ಹೆಚ್ಚಾಗಿತ್ತು. ಆದರೆ ಆ ಬೆನ್ನಲ್ಲೇ ಮಾತನಾಡಿರುವ ಅವರು, ಸದ್ಯ ರೇಷನ್ ಕಾರ್ಡ್ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆರ್ಥಿಕ ಹೊರೆ ಮತ್ತು ಜನರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಇಕೆವೈಸಿ ಮಾಡಿಸಲು ಗಡುವು
ಕರ್ನಾಟಕದಲ್ಲಿ ಇನ್ನೂ 2.65 ಕೋಟಿ ಕಾರ್ಡ್ಗಳ ಇ ಕೆವೈಸಿ ಪ್ರಕ್ರಿಯೆ ಬಾಕಿ ಇದೆ. ಈ ಬಗ್ಗೆ ಮಾತನಾಡಿದ ಅವರು. ಮೊದಲು ಇ ಕೆವೈಸಿ ಬಾಕಿ ಇರುವುದು ಪೂರ್ಣಗೊಳ್ಳಲಿ. 2.65 ಕೋಟಿ ಕಾರ್ಡ್‌ಗಳಿಗೆ ಇಕೆವೈಸಿ ಮಾಡಿಸಲು ಸೆ.30ವರೆಗೆ ಇಕೆವೈಸಿಗೆ ಗಡುವು ನೀಡಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಇಕೆವೈಸಿ ನಂತರ ಎಷ್ಟು ಕಾರ್ಡ್ಗಳು ಡಿಲೀಟ್ ಆಗುತ್ತವೆಯೋ ಅದನ್ನು ನೋಡಿಕೊಂಡು, ಅಷ್ಟೇ ಸಂಖ್ಯೆಯ ಹೊಸ ಕಾರ್ಡ್ಅನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದು ಆಹಾರ ಸಚಿವ ರಿಜ್ವಾನ್ ಅವರು ಸ್ಪಷ್ಟನೆ ಕೊಟ್ಟರು.
ಫುಡ್ ಕಿಟ್ ಯೋಜನೆ ಪ್ರಗತಿಯಲ್ಲಿದೆ
ಕರ್ನಾಟಕದಲ್ಲಿ 50 ಲಕ್ಷ ಜನರಿಗೆ ಕೇಂದ್ರ ಸರ್ಕಾರ ಇನ್ನು ರೇಷನ್ ಕಾರ್ಡ್ ಸೌಲಭ್ಯ ಮಾಡಿಕೊಡಬೇಕಾಗಿದೆ. ಈ ಬಗ್ಗೆ ನಾವು ಕೇಂದ್ರ ಸರ್ಕಾರದ ಬಗ್ಗೆ ಚರ್ಚೆ ನಡೆಸಬೇಕು. ಸಾಕಷ್ಟು ಕೆಲಸಗಳು ಬಾಕಿ ಇವೆ. ಫುಡ್ ಕಿಟ್ ನೀಡುವುದು. ಈ ಯೋಜನೆ ಜಾರಿ ಒಂದು ಹಂತಕ್ಕೆ ಬಂದಿದೆ.ಆದರೆ ಸರ್ಕಾರ ಘೋಷಿಸಿರುವ ಅಕ್ಕಿ ವಿತರಣೆ ಕಾರ್ಯ ಸುಸಜ್ಜಿತವಾಗಿ ಸಾಗುತ್ತಿದೆ ಎಂದು ಹೇಳಿದರ, (ಏಜೆನ್ಸೀಸ್).