ಚನ್ನಮ್ಮನ ಕಿತ್ತೂರಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಬಿಡಿಸಿಸಿ ಬ್ಯಾಂಕ್ ಅಧ್ಯ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಬಾಬಾಸಾಹೇಬ ಪಾಟೀಲ ಹಾಗೂ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಡಾ.ಬಸವರಾಜ ಪರವಣ್ಣವರ, ರಾಜು ಕಾಗೆ, ನಾನಾಸಾಹೇಬ ಪಾಟೀಲ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಚನ್ನಮ್ಮನ ಕಿತ್ತೂರು
ಪಾತೀತವಾಗಿ ಸಹಕಾರಿ ಸಂಸ್ಥೆ ನಡೆಸಿದರೆ ರೆತರಿಗೆ ಒಳಿತಾಗುತ್ತದೆ. ರೈತರು ಕೃಷಿಯೊಂದಿಗೆ ಹೆನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ಸ್ಮಾರಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯ ಮಾಡುವಾಗ ರಾಜಕೀಯ ಮಾಡಿ, ಸಹಕಾರಿ ಸಂಟನೆ ಎಂದಾಗ ಪಾತೀತವಾಗಿ ಕೆಲಸ ಮಾಡಿ. ಇದು ರೆತರು ಕಟ್ಟಿದ ಸಂಟನೆಯಾಗಿದ್ದು, ಇದರ ಅಭಿವದ್ಧಿಗಾಗಿ ಎಲ್ಲರೂ ಒಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದರು.
ಡಿಸಿಸಿ ಬ್ಯಾಂಕಿನಿಂದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ. ಸಾಲ ಕೇಳಿದ್ದು, ಕಾರ್ಖಾನೆ ಅಭಿವದ್ಧಿಯಾದರೆ ರೆತರಿಗೆ ಅನುಕೂಲವಾಗುತ್ತದೆ
ಎಂಬ ದಷ್ಟಿಯಿಂದ ಕಾರ್ಖಾನೆಗೆ ಸಾಲ ಕೊಡಲು ನಿರ್ಧರಿಸಿದ್ದೇವೆ ಎಂದರು.
ಬೆಮುಲ್ ನಿರ್ದೇಶಕ ಡಾ.ಬಸವರಾಜ ಪರವಣ್ಣವರ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಏನೇ ಆಗಿದ್ದರು ಅದನ್ನು ಮರೆತು ಒಂದಾಗಿ ಕೆಲಸ ಮಾಡೋಣ. ಕೆಲವರು ಬಿಜೆಪಿಯಲ್ಲಿ ನಾನು ಇಲ್ಲ ಎಂದು ಬಿಂಬಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ರೆತರು ಸಹಕಾರಿಯ ಸದುಪಯೋಗಪಡೆದುಕೊಳ್ಳಬೇಕು. ಕಷಿ ಜತೆಗೆ ಹೆನುಗಾರಿಕೆಗೆ ಒತ್ತು ನೀಡಿ. ಹೆನುಗಾರಿಕೆಗಾಗಿ ಸಹಕಾರಿ ಸಂಟನೆಯಲ್ಲಿ ಸಬ್ಸಿಡಿ ಸಾಲ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಮಹಿಳೆಯರಿಗಾಗಿಯೇ ವಿಶೇಷ ತರಬೇತಿ ಕೇಂದ್ರ ನಿರ್ಮಿಸಿ ವಿವಿಧ ಕೌಶಲ ತರಬೇತಿ ನೀಡಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಂಟನೆ
ಕುರಿತು ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯ ರಾಜು ಕಾಗೆ, ನಾನಾಸಾಹೇಬ ಪಾಟೀಲ, ಬಾಬು ಕಟ್ಟಿ,
ಪಪಂ ಅಧ್ಯ ಜೆ ಸಿದ್ದರಾಮ ಮಾರಿಹಾಳ,
ಎನ್.ಜಿ.ಕಲಾವಂತ, ಡಾ.ವಿ.ಎನ್.ಶ್ರೀಕಾಂತ, ಪರವೀಣ ನಾಯಕ, ಶಂಕರ ಹೊಳಿ ಇತರರು ಇದ್ದರು.