ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ವಿಜೇತ ಮಹಿಳೆಯರಿಗೆ ಶಾಸಕ ಎನ್​.ಶ್ರೀನಿವಾಸ್​ ಬಹುಮಾನ ವಿತರಣೆ ಮಾಡಿದರು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಂಜುನಾಥ್​, ಮಾಜಿ ಅಧ್ಯಕ್ಷ ಟಿ.ನಾಗರಾಜು ಇದ್ದರು. 
ರಾಜ್ಯ

ಕಷ್ಟ, ಸುಖ ಕೇಳಲು ನೆರವಾದ ರಂಗೋಲಿ ಸ್ಪರ್ಧೆ / NELAMANGAL

ನೆಲಮಂಗಲ : ರಂಗೋಲಿ ಸ್ಪರ್ಧೆ ಮೂಲಕ ಗ್ರಾಮದ ಮಹಿಳೆಯರು, ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಧ್ವನಿಯಾಗುವ ಉತ್ತಮ ಅವಕಾಶ ಸಿಕ್ಕಿದೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ಬೂದಿಹಾಲ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೆಲಮಂಗಲ ಉತ್ಸವ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಾತನಾಡಿದರು. ಕ್ಷೇೇತ್ರಕ್ಕೆ <1500 ಕೋಟಿಗೂ ಹೆಚ್ಚು ಅನುದಾನ ತಂದಿದ್ದು, ಕೆಲಸ ಪ್ರಗತಿಯಲ್ಲಿದೆ. ಕೇವಲ ಕೆಲಸಗಳಿಗೆ ಸೀಮಿತವಾಗಬಾರದು ಎಂದು ನೆಲಮಂಗಲ ಉತ್ಸವ ಮಾಡಲಾಗುತ್ತಿದೆ. ಮತ ಕೇಳಲು ಮಾತ್ರ ಶಾಸಕರು ಮನೆ ಬಾಗಿಲಿಗೆ ಬರಬಾರದು, ಅವರ ಕಷ್ಟ ಸುಖ ಕೇಳಲು ಬರಬೇಕು ಎಂದು ರಂಗೋಲಿ ಸ್ಪರ್ಧೆಮೂಲಕ ಪ್ರತಿ ಗ್ರಾಮದ ಮಹಿಳೆಯರನ್ನು ಭೇಟಿ ಮಾಡಲಾಗುತ್ತಿದೆ ಎಂದರು.
ಮಹಿಳೆಯರು ಬಹಳಷ್ಟು ಆಸಕ್ತಿ ವಹಿಸಿ ರಂಗೋಲಿ ಬಿಡಿಸುವುದರ ಜತೆಗೆ ಗ್ರಾಮದಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸಾವಿರಾರು ಮಹಿಳೆಯರು, ಹೆಣ್ಣು ಮಕ್ಕಳು, ವೃದ್ಧೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವೆ ಎಂದರು.
ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ಇತ್ತೀಚಿಗೆ ರಂಗೋಲಿ ಬಿಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಸಕರು ರಂಗೋಲಿ ಸ್ಪರ್ಧೆ ಆಯೋಜಿಸುವ ಮೂಲಕ ಗ್ರಾಮದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಹೆಚ್ಚು ಆಸಕ್ತಿ ವಹಿಸುವಂತೆ ಮಾಡಿದ್ದಾರೆ ಎಂದರು.
ಗ್ರಾಪಂಮಾಜಿ ಅಧ್ಯೆ ಶೈಲಜಾ ಮಂಜುನಾಥ್​, ಸದಸ್ಯ ಆನಂದ್​, ಮುನಿರಾಜು, ಬೂದಿಹಾಲ್​ ವಿಎಸ್ಸೆಸ್ಸೆನ್​ ಅಧ್ಯಕ್ಷ ಮಧುಕುಮಾರ್​, ಗೋವಿಂದರಾಜು, ಮುಖಂಡ ಮುನಿರಾಜು, ನರಸಿಂಹಮೂರ್ತಿ, ಮುನಿರಾಮು, ನವೀನ್​ಕುಮಾರ್​, ಮನುಕುಮಾರ್​ ಇದ್ದರು.
ಶಾಸಕರಿಗೆ ಪುಷ್ಪವೃಷ್ಠಿ: ರಂಗೋಲಿ ಸ್ಪರ್ಧೆ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ಶಾಸಕ ಎನ್​. ಶ್ರೀನಿವಾಸ್​ ಅವರಿಗೆ ಮಹಿಳೆಯರು, ಮಕ್ಕಳು ಆರತಿ ಎತ್ತಿ ಸ್ವಾಗತಿಸಿದರೆ, ಪಕ್ಷದ ಮುಖಂಡರು ಸೇಬಿನ ಹಾರ ಹಾಕಿ ಗೌರವಿಸಿದರು. ಮಾಚೋನಾಯಕನಹಳ್ಳಿಯಲ್ಲಿ ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ಮತ್ತವರ ಕುಟುಂಬದವರು ಶಾಸಕರನ್ನು ಸನ್ಮಾನಿಸಿ ಪುಷ್ಪವೃಷ್ಟಿಗರೆದರು.
ವಿಜೇತರಿಗೆ ಬಹುಮಾನ : ಬೂದಿಹಾಲ್​ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಮ್ಮನಹಳ್ಳಿ, ತೊಣಚಿನಕುಪ್ಪೆ, ಬೂದಿಹಾಲ್​, ದೇಗನಹಳ್ಳಿ, ದಿಣ್ಣೇಪಾಳ್ಯ, ಅನಂತಪುರ, ಪಾಪಭೋವಿಪಾಳ್ಯ, ಮಾಚೋನಾಯಕನಹಳ್ಳಿ, ಕಾಚನಹಳ್ಳಿ, ವಜ್ರಕಟ್ಟೆಪಾಳ್ಯ, ಮಂಡಿಗೆರೆ, ಬರದಿ ಹಾಗೂ ಯರಮಂಚನಹಳ್ಳಿಯಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, 800ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.