ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ನೆಲಮಂಗಲ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಫರ್ಧೆ ವಿಜೇತರಿಗೆ ಶಾಸಕ ಎನ್​.ಶ್ರೀನಿವಾಸ್​ ಬಹುಮಾನ ವಿತರಿಸಿದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು, ಜಗದಾಂಬ ಪುಟ್ಟರಾಜು ಇತರರು ಇದ್ದರು.  
ರಾಜ್ಯ

ನೆಲಮಂಗಲ ಉತ್ಸವಕ್ಕೆ ರಂಗೋಲಿ ರಂಗು / NELAMANGAL

ನೆಲಮಂಗಲ : ಕ್ಷೇತ್ರದ ಮಹಿಳೆಯರು, ಮಕ್ಕಳು ಹಾಗೂ ಯುವಜನತೆಯನ್ನು ತಲುಪುವುದು ನೆಲಮಂಗಲ ಉತ್ಸವದ ಉದ್ದೇಶವಾಗಿದೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ರೈಲ್ವೆಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮೈಲನಹಳ್ಳಿಯಲ್ಲಿ ನೆಲಮಂಗಲ ಉತ್ಸವ ಮುಂದುವರಿದ ಭಾಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕ್ಷೇತ್ರದ ಜನರಿಗೆ ಕೇವಲ ಮೂಲ ಸೌಕರ್ಯ ಕಲ್ಪಿಸಿಕೊಡುವುದು, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಕ್ಕೆ ಸೀಮಿತವಾಗದೆ ಭಾವನಾತ್ಮಕವಾಗಿ ಜನರ ಹತ್ತಿರವಾಗುವುದು, ಪ್ರತಿಭೆಗಳ ಅನಾವರಣ, ಮನರಂಜನೆ ನೀಡುವ ಹಲವು ಉದ್ದೇಶದಿಂದ ನೆಲಮಂಗಲ ಉತ್ಸವ ಆಚರಿಸಲಾಗುತ್ತಿದೆ. ಬೃಹತ್​ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು, ಕ್ಷೇತ್ರದ 4500 ಎಸ್​ಎಸ್​ಎಲ್​ಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಮಹಿಳೆಯರು, ಯುವತಿಯರಿಗಾಗಿ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಆಯೋಜಿಸಿದ್ದ ರಂಗೋಲಿ ಸ್ಪರ್ಧಿಗಳಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನ ವಿತರಣೆ ಮಾಡಿ, ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಮೈಲನಹಳ್ಳಿಯಲ್ಲಿ ಬುಧವಾರ ಆರಂಭಗೊಂಡು ಯಾಡಾಳು, ಗೊಲ್ಲಹಳ್ಳಿ ಕಾಲನಿ, ಅರ್ಜುನಬೆಟ್ಟಹಳ್ಳಿ, ಗುಟ್ಟೆಪಾಳ್ಯ, ಬೈರಶೆಟ್ಟಹಳ್ಳಿ, ತ್ಯಾಗದಹಳ್ಳಿ, ಬೆಟ್ಟಹಳ್ಳಿ ಗ್ರಾಮ, ಬೆಟ್ಟಹಳ್ಳಿ ಪಾಳ್ಯ, ಕಾಲನಿಯಲ್ಲೂ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ ಎಂದು ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ಹೇಳಿದರು.
ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸ್ಥಾಯಿಸಮಿತಿ ಅಧ್ಯಕ್ಷ ಪದ್ಮನಾಭಪ್ರಸಾದ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮಂಜುನಾಥ್​, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಾರಾಯಣಗೌಡ, ಮಾಜಿ ಸದಸ್ಯ ಬಿ.ಜಿ.ವಾಸು, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಪಂ ಸದಸ್ಯ ಜಗದಾಂಬ ಪುಟ್ಟರಾಜು, ಪ್ರಶಾಂತ್​, ಶೇಖರಪ್ಪ, ಆಂಜಿನಮೂರ್ತಿ, ಮುಖಂಡ ಕೆ.ಕೆ.ಕೃಷ್ಣಪ್ಪ, ಮುನಿರಾಮು, ಚಿಕ್ಕಹನುಮೇಗೌಡ, ಬೇಗೂರು ಮುನಿಯಪ್ಪ, ನರಸಿಂಹಮೂರ್ತಿ, ಲಕ್ಷಿ$್ಮನಾರಾಯಣ್​, ಮುನಿರಾಜು, ನಾರಾಯಣರಾವ್​, ಸಿಎಂಗೌಡ, ವಸಂತ್​ ಇದ್ದರು.
ಅಭೂತಪೂರ್ವ ಸ್ಪಂದನೆ : ನೆಲಮಂಗಲ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಪ್ರತಿ ಗ್ರಾಮದಲ್ಲಿನ ಬಹುತೇಕ ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ಮಂಗಳವಾರ ರಾತ್ರಿಯಿಂದಲೇ ಅಗತ್ಯ ಸಿದ್ಧತೆ ಮಾಡಿಕೊಂಡು ಆಕರ್ಷಕ ರಂಗೋಲಿ ಬಿಡಿಸಿ ಶಾಸಕರ ಬರುವಿಕೆಗಾಗಿ ಕಾದುಕುಳಿತರು. ಕೆಲ ಉದ್ಯೋಗಸ್ಥ ಮಹಿಳೆಯರು ಬೆಳಗ್ಗಿನ ಜಾವದಲ್ಲೆ ಆಕರ್ಷಕ ಬಣ್ಣಗಳ ಬಳಕೆ ಮಾಡಿ ರಂಗೋಲಿ ಹಾಕಿ ಕೆಲಸಗಳಿಗೆ ತೆರಳಿದ್ದರು. ಸ್ಪರ್ಧೆ ಆಯೋಜಿಸಿದ್ದ ಗ್ರಾಮಗಳಲ್ಲಿ ಕನಿಷ್ಠ 100 ರಿಂದ 300ಕ್ಕೂ ಹೆಚ್ಚು ಮಹಿಳೆಯರು, ಯುವತಿಯರು ಭಾಗವಹಿಸಿ ಅಭೂತಪೂರ್ವ ಸ್ಪಂದನೆ ನೀಡಿದರು.