ಹೆಲ್ಮೆಟ್‌ ಇಲ್ಲದೆ ಬುಲೆಟ್‌ ಸವಾರಿ ಮಾಡಿದ ರಾಣೆಬೆನ್ನೂರು ಶಾಸಕ ಕೋಳಿವಾಡಗೆ 500 ರೂ. ದಂಡ! MLA Prakash Koliwad  
ರಾಜ್ಯ

ಹೆಲ್ಮೆಟ್‌ ಇಲ್ಲದೆ ಬುಲೆಟ್‌ ಸವಾರಿ ಮಾಡಿದ ರಾಣೆಬೆನ್ನೂರು ಶಾಸಕ ಕೋಳಿವಾಡಗೆ 500 ರೂ. ದಂಡ! MLA Prakash Koliwad

ಪ್ರಮುಖ ಮುಖ್ಯಾಂಶಗಳು

  • ಹೆಲ್ಮೆಟ್ ಧರಿಸದೆ ಬುಲೆಟ್ ಸವಾರಿ ಮಾಡಿದ ಶಾಸಕ ಪ್ರಕಾಶ ಕೋಳಿವಾಡ
  • ಶಾಸಕರಿಗೆ 500 ರೂಪಾಯಿ ದಂಡ ವಿಧಿಸಿದ ಹಾವೇರಿ ಸಂಚಾರ ಪೊಲೀಸರು
  • ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ದೃಶ್ಯ
  • ಪೊಲೀಸರ ಕರ್ತವ್ಯ ನಿರ್ವಹಣೆಯನ್ನು ಗೌರವಿಸಿದ ಶಾಸಕ ಪ್ರಕಾಶ ಕೋಳಿವಾಡ
ಹಾವೇರಿ: ಹೆಲ್ಮೆಟ್‌ ಧರಿಸದೆ ಬುಲೆಟ್‌ ಬೈಕ್‌ ಚಲಾಯಿಸಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ( MLA Prakash Koliwad ) ಅವರಿಗೆ ಸಂಚಾರ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.
ಆಗಸ್ಟ್​ 25ರಂದು ಬೈಕ್ ರ್ಯಾಲಿಯೊಂದರಲ್ಲಿ ಶಾಸಕ ಪ್ರಕಾಶ ಕೋಳಿವಾಡ ಹೆಲ್ಮೆಟ್‌ ಇಲ್ಲದೆ ಬೈಕ್‌ ಚಲಾಯಿಸಿದ್ದರು. ಇದು ನಗರದ ವಿವಿಧೆಡೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇದು ಸಂಚಾರ ಪೊಲೀಸರ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 500 ರೂ. ದಂಡದ ನೋಟಿಸ್‌ ಜಾರಿಗೊಳಿಸಿದ್ದರು. ಅಲ್ಲದೆ ನೋಟಿಸ್‌ ಶಾಸಕರ ಮನೆ ಬಾಗಿಲಿಗೆ ತಲುಪಿದ್ದು, ಬಳಿಕ ಅವರು ದಂಡದ ಮೊತ್ತ ಪಾವತಿಸಿದ್ದಾರೆ.
ನೋಟಿಸ್‌ ನೀಡಿರುವ ವಿಚಾರವನ್ನು ಶಾಸಕ ಪ್ರಕಾಶ ಕೋಳಿವಾಡ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಸ್‌ಪಿ ಮೇಡಂ ಅವರು ನನಗೆ ನೋಟಿಸ್‌ ನೀಡಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರನ್ನು ಗೌರವಿಸುತ್ತೇನೆ’ ಎಂದು ಶಾಸಕ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗೂ ನಿಯಮಾನುಸಾರ ದಂಡ ವಿಧಿಸಿರುವ ಪೊಲೀಸರ ಕ್ರಮ ಇದೀಗ ಗಮನ ಸೆಳೆದಿದೆ.