ramu patil 
ರಾಜ್ಯ

ಭೀಮಣ್ಣ ಖಂಡ್ರೆ ಪ್ರಶಸ್ತಿಗೆ ರಾಮು ಪಾಟೀಲ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಸತತ 25 ವರ್ಷಗಳ ವೃತ್ತಿ ಸೇವೆ
  • 1997ರಲ್ಲಿ ಪತ್ರಿಕೋದ್ಯಮ ಪ್ರವೇಶ
ಬೆಂಗಳೂರು:
ಸ್ವಾತಂತ್ರ ಹೋರಾಟಗಾರ, ಶತಾಯುಷಿ, ಮಾಜಿ ಸಚಿವ ಮತ್ತು ಲೋಕನಾಯಕರಾದ ದಿ.ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ ಅವರ ಸುಪುತ್ರರಾದ ಈಶ್ವರ ಬಿ ಖಂಡ್ರೆ ಅವರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ 3 ಲಕ್ಷ ರೂ ದತ್ತಿ ನಿಧಿ ಸ್ಥಾಪನೆ ಮಾಡಿದ್ದು, ಮೊದಲ ಪ್ರಶಸ್ತಿಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಹಾಯಕ ಸ್ಥಾನಿಕ ಸಂಪಾದಕರಾದ ರಾಮು ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರ್ಗಿ ಜಿಲ್ಲೆ ಸೇಡಂನವರಾದ ರಾಮು ಪಾಟೀಲ್ ಅವರು 1997ರಲ್ಲಿ ಪತ್ರಿಕೋದ್ಯಮ ಪ್ರವೇಶ ಮಾಡಿದರು. ವೀಕ್ ಪತ್ರಿಕೆ, ಮಸ್ಕತ್ ಡೈಲಿಯಲ್ಲಿ ಸೇವೆ ಸಲ್ಲಿಸಿ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಮುಖ್ಯ ವರದಿಗಾರರಾಗಿ ಸೇರ್ಪಡೆಗೊಂಡರು. ಸತತ 25 ವರ್ಷಗಳ ವೃತ್ತಿ ಸೇವೆ ಮಾಡಿರುವ ಅವರು ಈಗಲೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಸಹಾಯಕ ಸ್ಥಾನಿಕ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಬೀದರ್‌ನಲ್ಲಿ ಏ.11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿ:
ಲಿಂಗಸುಗೂರು ಸಿದ್ರಾಮಪ್ಪ ಹೆಸರಿನಲ್ಲಿ ಹೊಸದಾಗಿ ಅವರು ಪುತ್ರ ಶಿವರಾಜ ಕೆಂಭಾವಿ ಅವರು ಸ್ಥಾಪನೆ ಮಾಡಿರುವ ಪ್ರಶಸ್ತಿಗೆ ಹಾಸನ ಜಿಲ್ಲೆ ಹಾಸನವಾಣಿ ಪತ್ರಿಕೆ ಬೇಲೂರು ತಾಲೂಕು ವರದಿಗಾರರಾದ ಭಾರತಿಗೌಡ ಮತ್ತು ವಿಜಯಪುರ ಜಿಲ್ಲೆ ಸುವರ್ಣ ನ್ಯೂಸ್ ಟಿವಿ ಜಿಲ್ಲಾ ವರದಿಗಾರರಾದ ಷಡಾಕ್ಷರಿ ಬಸವರಾಜು ಕಂಪೂನವರ (ಷಡಾಕ್ಷರಿ ಬಿ ಕಂಪೂನವರ) ಅವರು ಆಯ್ಕೆಯಾಗಿದ್ದಾರೆ.
*ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಮೊದಲ ಪ್ರಶಸ್ತಿಯನ್ನು ನನಗೆ ನೀಡಿರುವುದು ನಿಜಕ್ಕೂ ಸಂತಸದ ಕ್ಷಣ. 25 ವರ್ಷಗಳ ವೃತ್ತಿ ಸೇವೆಗೆ ಸಂದ ಗೌರವ.
-ರಾಮು ಪಾಟೀಲ, ಹಿರಿಯ ಪತ್ರಕರ್ತರು