ದೊಡ್ಡಬಳ್ಳಾಪುರದ ಚಿಕ್ಕಪೇಟೆಯಲ್ಲಿ ರಾಮ್​ರಾಜ್​ ಮಳಿಗೆಯನ್ನು ಶಾಸಕ ಧೀರಜ್​ ಮುನಿರಾಜು ಉದ್ಘಾಟಿಸಿದರು. ಹುಲಿಕಲ್​ ನಟರಾಜ್​, ಕೆ.ಎಂ.ಹನುಮಂತರಾಯಪ್ಪ, ಅಶ್ವತ್ಥನಾರಾಯಣಗೌಡ, ಆರ್​.ಎಸ್​.ಮಂಜುನಾಥ, ಸಂಸ್ಥೆಯ ಹಿರಿಯ ಎಜಿಎಂ ಶ್ರೀನಿವಾಸಲು, ಎಜಿಎಂ ರಾಜೇಶ್​, ವಲಯ ವ್ಯವಸ್ಥಾಪಕ ಪ್ರಸನ್ನ, ಪ್ರದೇಶ ವ್ಯವಸ್ಥಾಪಕ ನರಸಿಂಹಮೂರ್ತಿ ಇದ್ದರು. 
ರಾಜ್ಯ

ದೊಡ್ಡಬಳ್ಳಾಪುರದಲ್ಲಿ ರಾಮ್​ರಾಜ್​ ಮಳಿಗೆ ಶುಭಾರಂಭ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ದೊಡ್ಡಬಳ್ಳಾಪುರ : ಸಾಂಪ್ರದಾಯಿಕ ಪಂಚೆಗಳು ಹಾಗೂ ಉಡುಪುಗಳ ತಯಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಮ್​ರಾಜ್​ ಕಾಟನ್​ ಸಂಸ್ಥೆಯು ನಗರದ ಚಿಕ್ಕಪೇಟೆಯಲ್ಲಿ ಗುರುವಾರ ನೂತನ ಮಳಿಗೆ ಶುಭಾರಂಭ ಮಾಡಿತು. ಶಾಸಕ ಧೀರಜ್​ ಮುನಿರಾಜು ಮಳಿಗೆ ಉದ್ಘಾಟಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್​ ನಟರಾಜ್​ ಅವರು ಪ್ರಥಮ ಮಾರಾಟದ ಬಿಲ್​ ಸ್ವೀಕರಿಸುವ ಮೂಲಕ ಮಳಿಗೆಗೆ ಚಾಲನೆ ನೀಡಿದರು. ರಾಮ್​ ರಾಜ್​ ಕಾಟನ್​ ಸಂಸ್ಥೆ ಸೀನಿಯರ್​ ಎಜಿಎಂ ಶ್ರೀನಿವಾಸಲು ಮಾತನಾಡಿ, ಸಾಂಪ್ರದಾಯಿಕತೆ, ಸಂಸತಿ ಮತ್ತು ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ಮತ್ತು ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರದಲ್ಲಿ ನೂತನ ಶೋರೂಂ ಆರಂಭಿಸಲು ಸಂತೋಷವಾಗುತ್ತಿದೆ. ಕರ್ನಾಟಕವು ರಾಮ್​ರಾಜ್​ ಕಾಟನ್​ಗೆ ಯಾವಾಗಲೂ ಪ್ರಮುಖ ಮಾರುಕಟ್ಟೆಯಾಗಿದೆ ಎಂದರು.
ಈ ನೂತನ ಮಳಿಗೆಯು ಗ್ರಾಹಕರಿಗೆ ಮನೆಯ ಸಮೀಪದಲ್ಲೇ ಅತ್ಯುತ್ತಮ ಸೇವೆ ನೀಡುವ ಬದ್ಧತೆ ಹೊಂದಿದೆ. 50,000ಕ್ಕೂ ಹೆಚ್ಚು ನೇಕಾರರು ಮತ್ತು ಅವರ ಕುಟುಂಬಗಳ ಜತೆ ನಿಂತಿದ್ದೇವೆ. ಈ ಶೋರೂಂ ಮೂಲಕ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ವೈವಿಧ್ಯಮಯ ಉಡುಪುಗಳನ್ನು ಗ್ರಾಹಕರಿಗೆ ಒದಗಿಸುವ ಜತೆಗೆ ಈ ಭಾಗದಲ್ಲಿ ನಮ್ಮ ಹೆಜ್ಜೆಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದರು.
ಬೃಹತ್​ ಸಂಗ್ರಹ : ಗ್ರಾಹಕರ ಆಧುನಿಕ ಶೈಲಿ ಹಾಗೂ ಸಾಂಪ್ರದಾಯಿಕತೆಗೆ ಒತ್ತು ನೀಡಿ ಸಿದ್ಧಪಡಿಸಲಾಗಿರುವ ಪ್ರೀಮಿಯಂ ಹತ್ತಿ ಬಟ್ಟೆಗಳ ಬೃಹತ್​ ಸಂಗ್ರಹ ಇಲ್ಲಿದೆ. ಮುಖ್ಯವಾಗಿ ಪುರುಷರಿಗಾಗಿ ಬಾರ್ಡರ್​, ಸುಕ್ಕುರಹಿತ, ಸುಗಂಧಿತ ಪಂಚೆಗಳು, ಎಂಬ್ರಾಯ್ಡರಿ, ಮಯಿಲ್​ ಕಣ್​, ಪಂಚಕಚ್ಚಂ ಹಾಗೂ ಆಕರ್ಷಕ ರೇಷ್ಮೆ ಪಂಚೆಗಳು ಇಲ್ಲಿ ಲಭ್ಯವಿವೆ. ಇದಲ್ಲದೆ ಹತ್ತಿ ಶರ್ಟ್​ಗಳು, ಲೆನಿನ್​, ಡಿಸೈನರ್​ ಹಾಗೂ ರೇಷ್ಮೆ ಶರ್ಟ್​ಗಳು ಮಾತ್ರವಲ್ಲದೆ, ಪಂಚೆ&ಶರ್ಟ್​ಗಳ ಮ್ಯಾಚಿಂಗ್​ ಕಾಂಬಿನೇಷನ್​ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿವೆ. ಪುರುಷರ ಉಡುಪುಗಳಷ್ಟೇ ಅಲ್ಲದೆ ಮಹಿಳೆಯರಿಗಾಗಿ ಹತ್ತಿ ಮತ್ತು ರೇಷ್ಮೆ ಸೀರೆಗಳು ಹಾಗೂ ದೈನಂದಿನ ಉಡುಪುಗಳು ಇಲ್ಲಿ ದೊರೆಯುತ್ತವೆ. ಒಳ ಉಡುಪುಗಳು, ಬೆಲ್ಟ್​, ಕರವಸ್ತ್ರ, ಸಾಕ್ಸ್​ ಮತ್ತು ಟವಲ್​ ಸೇರಿ ಕುಟುಂಬಕ್ಕೆ ಬೇಕಾದ ವಸ್ತ್ರವಿನ್ಯಾಸಗಳು ಒಂದೇ ಸೂರಿನಡಿ ಲಭ್ಯವಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬಹುದು.