ಪ್ರಮುಖ ಮುಖ್ಯಾಂಶಗಳು
ಸರ್ಕಾರ ಸಕ್ಕರೆ ದರ ನಿಯಂತ್ರಣ ಕೈಬಿಡಬೇಕು: ಮಾಜಿ ಸಂಸದ ರಮೇಶ ಕತ್ತಿ ಒತ್ತಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ : ದೇಶದಲ್ಲಿ ಸಕ್ಕರೆ ದರ ಹೆಚ್ಚಾಗಿರುವುದು ರೈತರ ಕಬ್ಬಿಗೆ ಹೆಚ್ಚು ಬೆಲೆ ಸಿಗಬಹುದೆಂಬ ಆಶಾವಾದ ಹುಟ್ಟುಹಾಕಿದ್ದು, ಸರ್ಕಾರ ಸಕ್ಕರೆ ದರ ನಿಯಂತ್ರಣ ಕೈಬಿಡಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕಳೆದ ಮೂವತ್ತು ವರ್ಷಗಳ ಮಾರುಕಟ್ಟೆ ಗಮನಿಸಿದರೆ ಸಕ್ಕರೆ, ಗೋಧಿ, ಮೆಕ್ಕೆಜೋಳ, ಸೋಯಾಬೀನ ಭತ್ತದಂತಹ ಬೆಳೆಗಳ ಬೆಲೆ ಸರಾಸರಿ ದರಗಳು ಉತ್ತಮ ಏರಿಕೆಯಾಗಿಲ್ಲ. ಬೀಜ, ಗೊಬ್ಬರ ರಸಗೊಬ್ಬರ, ಕೃಷಿ ಉತ್ಪಾದನೆ ವೆಚ್ಚ ಗಣನೀಯವಾಗಿ ಏರಿಕೆಯಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಹೇಳಿದರು.
ಉದಾಹರಣೆಗೆ ದೇಶದ ಒಟ್ಟು ಉತ್ಪಾದನೆಯಲ್ಲಿ ಸಕ್ಕರೆ ಬಳಕೆ ಪ್ರಮಾಣ ಗಮನಿಸಿದರೆ ಶೇ.75ರಷ್ಟು ಉದ್ಯಮಗಳಿಗೆ ಸಕ್ಕರೆ ಬಳಕೆಯಾದರೆ ಶೇ.೨೫ರಷ್ಟು ಮಾತ್ರ ಗೃಹಬಳಕೆಗೆ ಉಪಯೋಗವಾಗುತ್ತದೆ ಹೀಗಾಗಿ ಬೆಲೆ ನಿಯಂತ್ರಣ ಗ್ರಾಹಕರಿಗಿಂತ ಉದ್ಯಮಗಳಿಗೆ ಅಧಿಕ ಲಾಭ ತಂದುಕೊಡಲಿದೆ, ರೈತರ ಹಿತರಕ್ಷಣೆಗೆ ನಿಯಂತ್ರಣ ಕ್ರಮ ಸರ್ಕಾರ ಕೈಬಿಡುವುದು ಸೂಕ್ತ ಎಂದರು.
ಸಕ್ಕರೆ ಉದ್ಯಮದ ಮೇಲೆ ೧೯೬೦ರಿಂದಲೂ ವಿವಿಧ ರೀತಿಯ ತೆರಿಗೆಗಳ ಮೂಲಕ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿದೆ, ೧೯೭೦ ರ ದಶಕದಲ್ಲಿ ಪ್ರತಿ ಟನ್ ಕಬ್ಬು ೧೦ ಗ್ರಾಂ ಬಂಗಾರಕ್ಕೆ ಸಮನಾದ ಬೆಲೆ ಕಾರಖಾನೆ ಖರೀದಿಸಿದ ಉದಾಹರಣೆ ದಿ.ಅಪ್ಪಣಗೌಡ ಪಾಟೀಲರ ಆಡಳಿತದಲ್ಲಿ ಸಂಕೇಶ್ವರದ ಹಿರಾಶುಗರ ಕಾರಖಾನೆ ನೀಡಿದೆ. ಅಂತಹ ದಿನಮಾನಗಳನ್ನು ರೈತರು ನೋಡುವ ದಿನಮಾನಗಳು ಭವಿಷ್ಯದಲ್ಲಿ ಬರುವ ಮೂಲಕ ಐಟಿಬಿಟಿಗಿಂತ ಕೃಷಿಗೆ ಪ್ರಾಧಾನ್ಯತೆ ದೊರೆಯಬೇಕು ಎಂದು ಹೇಳಿದರು.
ಗೋಧಿ, ಮೆಕ್ಕೆಜೋಳ, ಸೋಯಾಬೀನ ಭತ್ತದಂತಹ ಆಹಾರ ಪದಾರ್ಥಗಳು ಸಹ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಯಾಗುತ್ತಿವೆ, ದೇಶದ ಉದ್ಯಮಗಳಿಗೆ ಸಿಗುವ ಪ್ರೋತ್ಸಾಹ ರೈತರಿಗೆ ಸಿಗುತ್ತಿಲ್ಲ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಿದೆ. ಹೀಗಾಗಿ ರೈತ ಮತ್ತು ಉದ್ಯಮಗಳ ಬೆಳವಣಿಗೆ ಸಮಾನ ದೃಷ್ಟಿಯಲ್ಲಿ ನೋಡುವ ಮೂಲಕ ಸರ್ಕಾರದ ಕೃಷಿ ವಲಯವನ್ನು ಭವಿಷ್ಯ ಪೀಳಿಗೆ ಉದ್ಯಮವನ್ನಾಗಿ ಮಾಡಿದೆ ಬೆಳೆಸುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ನಾನು ಒಬ್ಬ ರೈತನಾಗಿದ್ದರೆ, ಹೀಗಾಗಿ ರೈತರ ಹಿತಾಸಕ್ತಿಯೇ ಎಲ್ಲರಿಗೂ ಮುಖ್ಯವಾಗಿದ್ದು, ರೈತರ ಭಾವನೆಗಳಿಗೆ ಸರ್ಕಾರ ಸಕಾರಾತ್ಮಕವಾಗಿದೆ ಕಾರ್ಯನಿರ್ವಹಿಸಬಹುದೆಂಬುದು ನನ್ನ ನಂಬಿಕೆಯಾಗಿದೆ ಎಂದರು.