ಪತಂಜಲಿ ಯೋಗಪೀಠದ ಸ್ಥಾಪಕ ಅಧ್ಯಕ್ಷ ಸ್ವಾಮಿ ರಾಮದೇವ್ 
ರಾಜ್ಯ

ಯೋಗ, ಆಯುರ್ವೇದ ಸೇವೆಗೈಯಲು ಸಂತರಿಂಗೆ ರಾಮ್ ದೇವ್ ಕರೆ

ಪ್ರಮುಖ ಮುಖ್ಯಾಂಶಗಳು

  • * ಪತಂಜಲಿ ಯೋಗಪೀಠದ 32ನೇ ಸಂಸ್ಥಾಪನಾ ದಿನ ಆಚರಣೆ
  • * ಹರಿದ್ವಾರದಲ್ಲಿ ನಡೆದ ಬೃಹತ್ ಕಾರ್ಯಕ್ರಮ
ಬೆಂಗಳೂರು: ನಾಡಿನ ಎಲ್ಲ ಸಾಧು ಮತ್ತು ಸಂತರು ಯೋಗ, ಆಯುರ್ವೇದ ಸೇವೆ ಮಾಡುವ ಮೂಲಕ ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕು ಎಂದು ಪತಂಜಲಿ ಯೋಗಪೀಠದ ಸ್ಥಾಪಕ ಅಧ್ಯಕ್ಷ ಸ್ವಾಮಿ ರಾಮದೇವ್ ಅವರು ಕರೆ ನೀಡಿದ್ದಾರೆ.
ಹರಿದ್ವಾರದಲ್ಲಿ ಪತಂಜಲಿಯ 32ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಋಷಿಗಳ ವಂಶಸ್ಥರು ಎಂಬುದನ್ನು ಯಾವಾಗಲೂ ನೆನಪಿಡಿ. ನಮ್ಮ ಜೀವನವು ಋಷಿಗಳ ಜ್ಞಾನ, ದೇವರುಗಳ ದೈವತ್ವ, ಬ್ರಹ್ಮನ ಬ್ರಹ್ಮತ್ವ, ರಾಮನ ರಾಮತ್ವ, ಶ್ರೀಕೃಷ್ಣನ ಕೃಷ್ಣತ್ವ, ಹನುಮನ ಹನುಮಾನ್ ಅಂಶ ಮತ್ತು ವೇದಗಳ ಶಿವತ್ವವನ್ನು ವ್ಯಕ್ತಪಡಿಸಬೇಕು ಎಂದರು.
ಪತಂಜಲಿಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಯೋಗ, ಆಯುರ್ವೇದ, ಸ್ವದೇಶಿ, ಸನಾತನ ಧರ್ಮ, ಸನಾತನ ಶಿಕ್ಷಣ, ಸನಾತನ ಔಷಧ, ಸನಾತನ ಕೃಷಿ ಮತ್ತು ಸನಾತನ ಜೀವನ ವಿಧಾನವನ್ನು ಗೌರವಿಸಬೇಕು ಮತ್ತು ಆ ಮೂಲಕ ತಮ್ಮೊಳಗೆ ಅನಂತ ಜ್ಞಾನ, ಅಪರಿಮಿತ ಭಕ್ತಿ ಮತ್ತು ಅನಂತ ಅಗಾಧ ಶಕ್ತಿಯನ್ನು ಜಾಗೃತಗೊಳಿಸಬೇಕು ಎಂದುನ ಹೇಳಿದರು.
ಜಗತ್ತಿನಾದ್ಯಂತ 200-250 ಕೋಟಿಗೂ ಹೆಚ್ಚು ಜನರು ಸನಾತನ ಮೌಲ್ಯಗಳನ್ನು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ವಿಶ್ವದ ಶೇ.80-90 ಜನರು ಸನಾತನವನ್ನು ಅನುಸರಿಸುತ್ತಿದ್ದಾರೆ. ಹೀಗಿರುವಾಗ ನಾವು ಭಾರತವನ್ನು ಅತ್ಯಂತ ಸಮೃದ್ಧ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಪತಂಜಲಿ ಗುರುಕುಲಂ ಜಗತ್ತಿನಾದ್ಯಂತ ಆಕರ್ಷಣೆಯ ಕೇಂದ್ರವಾಗಿದೆ. ಸುಮಾರು 200 ದೇಶಗಳಿಂದ ಕನಿಷ್ಠ 15,000-20,000 ಮಕ್ಕಳು ಪತಂಜಲಿ ಗುರುಕುಲಂ, ಆಚಾರ್ಯಕುಲಂ ಮತ್ತು ಪತಂಜಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಬರುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಎರಡನೇ ಹಂತದ ಶೈಕ್ಷಣಿಕ ಸೇವೆಗಳಲ್ಲಿ, ಪತಂಜಲಿ ಗ್ಲೋಬಲ್ ಗುರುಕುಲಂ ಮತ್ತು ಪತಂಜಲಿ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದ ಎಲ್ಲ ಶಾಖೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗಪೀಠದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಅವರು ಸಂಸ್ಥೆಯ ಅರಂಭ, ಬೆಳವಣಿಗೆ ಕುರಿತು ವಿವರಿಸಿದರು. ಪತಂಜಲಿಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಯೋಗ, ಮಲ್ಲಕಂಬ, ಕುಸ್ತಿ, ಸಮರ ಕಲೆಗಳು, ಬಾಕ್ಸಿಂಗ್, ಜೂಡೋ-ಕರಾಟೆ ಮತ್ತು ಇತರ ಸುಂದರ ಪ್ರದರ್ಶನಗಳನ್ನು ನೀಡಿದರು. ಪತಂಜಲಿಯ ವಿವಿಧ ಘಟಕಗಳ ಘಟಕ ಮುಖ್ಯಸ್ಥರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.