ಭಾರತ್‌ನಗರದಲ್ಲಿ ಭಾನುವಾರ ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮ 
ರಾಜ್ಯ

ಭಾರತ್‌ನಗರದಲ್ಲಿ ಭಾನುವಾರ ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮ

ಪ್ರಮುಖ ಮುಖ್ಯಾಂಶಗಳು

  • ಭಾರತ್‌ನಗರದಲ್ಲಿ ಭಾನುವಾರ ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮ
  • ಬೆಂಗಳೂರು ಸಮಸ್ತ ವೀರಶೈವ ಲಿಂಗವಂತ ಸಂಘಟನೆ ಆಯೋಜನೆ
  • ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ, ಸಂಜೆ ಉತ್ಸವ ಮತ್ತು ಧರ್ಮಸಭೆ

ಬೆಂಗಳೂರು: ಬೆಂಗಳೂರುನಗರ ಸಮಸ್ತ ವೀರಶೈವ,ಲಿಂಗವಂತ ಮಹಾಸಂಘಟನೆಯು ಮಾಗಡಿ ರಸ್ತೆಯ ಬಿಇಎಲ್ಲೇಔಟ್ ಅಂಜನಾನಗರದಲ್ಲಿ ಭಾನುವಾರ(.2)ಬಾಳೆಹೊನ್ನೂರುಶ್ರೀರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಹಾಗೂ ಧರ್ಮ ಜಾಗೃತಿ ಸಮಾರಂಭಹಮ್ಮಿಕೊಂಡಿದೆ.

ಭಾರತ್‌ನಗರದಈಸ್ಟ್ ವೆಸ್ಟ್ ಕಾಲೇಜ್ ರಸ್ತೆಯಲ್ಲಿರುವಆರ್.ವಿ.ಭದ್ರಯ್ಯಗ್ರಂಧಿಗೆ ಸ್ಟೋರ್ ಮುಂಭಾಗದಲ್ಲಿನಿರ್ಮಿಸಿರುವ ಮಾನವ ಧರ್ಮ ಮಂಟಪದಲ್ಲಿಬೆಳಗ್ಗೆ 8ಗಂಟೆಯಿಂದಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆನೆರವೇರಲಿದೆ.ಸಂಜೆ 4ಗಂಟೆಗೆ ಮಂಗಳವಾದ್ಯ,ವಿವಿಧ ಜಾನಪದಕಲಾ ತಂಡಗಳೊಂದಿಗೆ ಜಗದ್ಗುರುಗಳಸಾರೋಟು ಉತ್ಸವ ನಡೆಯಲಿದೆ.ಸಂಜೆ 6ಗಂಟೆಗೆ ಧರ್ಮಜಾಗೃತಿ ಸಮಾರಂಭ ನಡೆಯಲಿದ್ದು,ಎಡೆಯೂರು,ನೊಣವಿನಕೆರೆ,ಸಿದ್ದರಬೆಟ್ಟ,ಬಂಡೆಮಠ ಮತ್ತಿತರಮಠಗಳ ಶ್ರೀಗಳು ಆಗಮಿಸಲಿದ್ದಾರೆ.ಕಾರ್ಯಕ್ರಮದಉದ್ಘಾಟನೆಯನ್ನು ಸಿಎಂ ಡಿ.ಕೆ.ಶಿವಕುಮಾರ್ನೆರವೇರಿಸಲಿದ್ದು, ಕೇಂದ್ರ ಸಚಿವವಿ.ಸೋಮಣ್ಣ,ಸಚಿವ ಈಶ್ವರಖಂಡ್ರೆ, ಶಾಸಕಎಸ್.ಟಿ.ಸೋಮೇಶೇಖರ್ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದುಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುವಂತೆ ಸಂಘಟನೆಯ ಅಧ್ಯಕ್ಷಆರ್.ಬಿ.ಬಸವರಾಜುತಿಳಿಸಿದ್ದಾರೆ.