ಚಿಟಗುಪ್ಪ ತಾಲೂಕಿನ ಸುೇತ್ರ ರಾಂಪುರದಲ್ಲಿ ಶನಿವಾರ ಶ್ರೀ ರಾಮನ ಅದ್ದೂರಿ ರಥೋತ್ಸವ ಜರುಗಿತು.
- ಸುಕ್ಷೇತ್ರ ರಾಂಪುರದಲ್ಲಿ ಜಾತ್ರೋತ್ಸವ
ಚಿಟಗುಪ್ಪ: ಸುಕ್ಷೇತ್ರ ರಾಂಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರೆ ನಿಮತ್ತ ಶನಿವಾರ ನಸುಕಿನ ಜಾವ ರಥೋತ್ಸವ ಭಕ್ತಿ ಭಾವದಿಂದ ಅದ್ದೂರಿಯಾಗಿ ಜರುಗಿತು.
ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನಂತರ ಅಲಂಕೃತಗೊಂಡ ರಥವನ್ನು ಭಕ್ತರು ಭಜನೆಗಳ ನಡುವೆ ಭಕ್ತಿಭಾವದಿಂದ ಎಳೆದು ಶ್ರೀ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಥೋತ್ಸವದ ಸಂದರ್ಭದಲ್ಲಿ ಗ್ರಾಮದೆಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದ್ದು, ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪುಣ್ಯಾರ್ಜನೆ ಮಾಡಿಕೊಂಡರು. ಡೊಳ್ಳು, ಬ್ಯಾಂಡ್ ತಂಡಗಳು ಹಾಗೂ ಭಜನ ಮಂಡಳಿಗಳಿಂದ ಭಕ್ತೀಗಿತೆಗಳು ಮೊಳಗಿದವು.
ರಾತ್ರಿ ನಡೆದ ಪಲ್ಲಕ್ಕಿ ಮೆರವಣಿಗೆಯೂ ವಿಶೇಷ ಆಕರ್ಷಣೆಯಾಗಿದ್ದು, ಮದ್ದು ಸುಡುವ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು. ಕಳೆದ 5 ದಿನಗಳಿಂದ ವಿವಿಧ ಸಾಮಾಜಿಕ ಗೋಷ್ಠಿ, ವಿಶೇಷ ಧಾರ್ಮಿಕ ಪೂಜೆ, ರಾಮಬಾಣ ಮೆರವಣಿಗೆ, ಧರ್ಮ ಸಭೆ, ಉಚಿತ ಆರೋಗ್ಯ ಶಿಬಿರ ಹಾಗೂ ಶನಿವಾರ ಪೈಲ್ವಾನರಿಂದ ಜಂಗಿ ಕುಸ್ತಿ ಯೊಂದಿಗೆ ಉತ್ಸವ ಸಮಾರೋಪಗೊಂಡಿತು. ಹಲವಾರು ಶ್ರೀಗಳು, ಗಣ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದರು.