ರಾಜ್ಯ

ಸಂಭ್ರಮದಿಂದ ಜರುಗಿದ ರಮಣಾದೇವಿ ರಥೋತ್ಸವ

ಶಹಾಬಾದ್: ನಗರದ ಹಳೆ ಶಹಾಬಾದ್ ಬಡಾವಣೆಯ ಶ್ರೀ ರಮಣಾದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಂಜೆ ಭಕ್ತರ ಜಯಘೋಷದ ಮಧ್ಯೆ ಭವ್ಯ ರಥೋತ್ಸವ ನಡೆಯಿತು, ವಿವಿಧ ರಾಜ್ಯದಿಂದ ಆಗಮಿದ ಭಕ್ತರು ರಥಕ್ಕೆ ಉತ್ತತ್ತಿ,ಹೂವು ಎರಚಿ ಕೃತಾರ್ಥರಾದರು.ರಥೋತ್ಸವದಲ್ಲಿ ಶ್ರೀ ರಾಚೋಟೇಶ್ವರ ಸಂಸ್ಥಾನದ ಪೂಜ್ಯ ಶಂಕರಯ್ಯ ಸ್ಮಾಮಿ ಹಿರೇಮಠ, ಶಾಸಕ ಬಸವರಾಜ ಮತ್ತಿಮಡು,ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು,ಭಕ್ತರು ಪಾಲ್ಗೊಂಡಿದ್ದರು.