ನಗರದ ಥಣಿಸಂದ್ರ ಅನಾಲಿಟಿಕ್ಸ್ ಮತ್ತು ರಿಸರ್ಚ್ ಲ್ಯಾಬೊರೇಟರಿಗೆ ಅಧಿಕಾರಿಗಳೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
- ಥಣಿಸಂದ್ರದ ಪ್ರಯೋಗಾಲಯದಲ್ಲಿ ಪರಿಶೀಲನೆ ಪರಿಶೀಲನೆ
- ನೋಟಿಸ್ ನೀಡಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು: ನಗರದ ಥಣಿಸಂದ್ರ ಅನಾಲಿಟಿಕ್ಸ್ ಮತ್ತು ರಿಸರ್ಚ್ ಲ್ಯಾಬೊರೇಟರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಲ್ಲಿನ ಅವ್ಯವಸ್ಥೆಯನ್ನು ಕಂಡು ಲ್ಯಾಬ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಕೊಳಚೆ ನೀರು ಶುದ್ಧೀಕರಣ ಟಕ (ಎಸ್ಟಿಪಿ), ಒಳಹರಿವು ಮತ್ತು ಹೊರಹರಿವಿನ ನೀರು, ಕೆರೆ, ಅಂತರ್ಜಲ, ಟ್ಯಾಂಕರ್ ನೀರನ್ನು ಲ್ಯಾಬ್ನಲ್ಲಿ ಪರೀಸುತ್ತಿದ್ದು, ನಿಯಮಗಳನ್ನು ಪಾಲನೆ ಮಾಡದೆ ಇರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿ ವೀಸಿದರು.
ಪ್ರಯೋಗಾಲಯದ ಸಿಬ್ಬಂದಿ ನಾನಾ ಕಡೆಯ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಸಲಾಗುತ್ತಿದ್ದಾರೆ. ಕೈಗಾರಿಕೆಗಳ ನೀರನ್ನು ಪರೀಸಲು ಸಿದ್ಧರಿದ್ದೇವೆ. ಯಾವುದೇ ರೀತಿ ಉಲ್ಲಂನೆ ಮಾಡುತ್ತಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಪ್ರಯೋಗಾಲಯದಲ್ಲಿ ಐವರು ವಿಶ್ಲೇಷಕರು ಇರುವುದಾಗಿ ತಿಳಿಸಿ ಪೂರ್ವಾನುಮತಿ ಪಡೆಯಲಾಗಿದೆ. ಆದರೆ ಭೇಟಿ ಸಮಯದಲ್ಲಿ ಒಬ್ಬರೆ ಕಾರ್ಯನಿರ್ವಹಿಸುತ್ತಿದ್ದರು. ಲೈಸೆನ್ಸ್ ಅವಧಿ ಮುಗಿದರೂ ನವೀಕರಣ ಮಾಡಿಕೊಳ್ಳದೆ ಇದ್ದುದರಿಂದ ನೋಟಿಸ್ ನೀಡಿ ಕ್ರಮಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಗರದಲ್ಲಿ ನೀರು ಮತ್ತು ಪರಿಸರ ಪರೀೆ ನಡೆಸುವ ಲ್ಯಾಬ್ಗಳು ನಿಯಮಾನುಸಾರ ಕಾರ್ಯನಿರ್ವಹತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಸುಮಾರು 50ಕ್ಕೂ ಲ್ಯಾಬ್ಗಳ ಮೇಲೆ ಅನುಮಾನವಿದೆ. ಯಾವುದೇ ಪರೀೆಗಳನ್ನು ಸಮರ್ಪಕವಾಗಿ ನಡೆಸದೆ, ಕಾಗದದ ಮೇಲೆ ತಪು$್ಪ ವರದಿ ನಮೂದು ಮಾಡಿಕೊಡುತ್ತಿರುವಬುದು ಗಮನಕ್ಕೆ ಬಂದಿದೆ ಎಂದರು.
* ಲ್ಯಾಬೋರೇಟರಿಯು ಮಂಡಳಿಯಿಂದ ಪಡೆದುಕೊಂಡಿರುವ ವಿಮೋಚನಾ ಪತ್ರದ ಅವಧಿ 2025ಕ್ಕೆ ಮುಕ್ತಾಯವಾಗಿರುವುದು.
* ಲ್ಯಾಬೋರೇಟರಿಯಿಂದ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಘಟಕವು ಯಾವುದೇ ಸೂಕ್ತವಾದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ತೆರೆದ ಗುಂಡಿಗೆ ಹರಿಯಬಿಟ್ಟಿರುವುದು.
* ಸದರಿ ಘಟಕದ ದಾಖಲಾತಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಶ್ಲೇಷಣ ದರಪಟ್ಟಿಗೆ ಹೋಲಿಸಿದಾಗ ಎಸ್ಟಿಪಿ ಘಟಕದ ನೀರಿನ ಮಾದರಿಯ ಪರೀೆಗೆ ನಿಗದಿತ ದರಕ್ಕಿಂತ ಹೆಚ್ಚುವರಿ ದರ ವಸೂಲು ಮಾಡುತ್ತಿರುವುದು.
* ಶಬ್ದ ಮಟ್ಟ ಅಳೆಯಲು ಸಂಗ್ರಹಿಸುವ ಮಾದರಿಯ ಫೀಲ್ಡ್ಡೇಟಾ ಮತ್ತು ವಿಶ್ಲೇಷಣೆ ವರದಿಯಲ್ಲಿ ದತ್ತಾಂಶದಲ್ಲಿ ವ್ಯತ್ಯಾಸ.