ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

ದಣಿಯದೆ ಬಜೆಟ್ ಮಂಡಿಸಿದ ದಾಖಲೆ ರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, 77ನೇ ವಯಸ್ಸಿನಲ್ಲೂ 3 ಗಂಟೆ 29 ನಿಮಿಷಗಳ ನಿರರ್ಗಳವಾಗಿ 182 ಪುಟಗಳ ಆಯವ್ಯಯ ಪುಸ್ತಕವನ್ನು ಓದುವ ಮೂಲಕ 17ನೇ ಬಜೆಟ್ ಮಂಡಿಸಿ ದಾಖಲೆ ರಾಮಯ್ಯ ಎಂಬ ಖ್ಯಾತಿಗೆ ಒಳಗಾದರು.
ಶುಕ್ರವಾರ ಬೆಳಗ್ಗೆ ರೇಷ್ಮೆ ಪಂಚೆ, ಜುಂಬ, ಶಲ್ಯ ಧರಿಸಿಕೊಂಡು ಬಜೆಟ್ ಮಂಡನೆಗೆ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ, 10.15ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದರು. ಅಲ್ಲಿಂದ ವಿಧಾನಸಭೆಗೆ ಆಗಮಿಸಿದ ಸಿದ್ದರಾಮಯ್ಯಗೆ ಸ್ಪೀಕರ್ ಯು.ಟಿ. ಖಾದರ್ ಬಜೆಟ್ ಮಂಡನೆಗೆ ಅನುಮೋದನೆ ನೀಡಿದರು. 10.23ಕ್ಕೆ ವಚನಕಾರ್ತಿ ಅಕ್ಕಮ್ಮ ವಚನದಿಂದ ಶುರು ಮಾಡಿದ ಸಿಎಂ, ಕೇಂದ್ರ ಸರ್ಕಾರಕ್ಕೆ ಚಾಡಿ ಬೀಸಿದರು. ಅದಕ್ಕೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ದದ್ ಆಕ್ಷೇಪ ವ್ಯಕ್ತಪಡಿಸಿದಾಗ ಕಿವಿಕೊಡದೆ ಓದನ್ನು ಮುಂದುವರಿಸಿದರು. 11.35ರಲ್ಲಿ ಸಚಿವ ಬೈರತಿ ಸುರೇಶ್, ಕೂರುವಂತೆ ಮನವಿ ಮಾಡಿದರು.
ಅದಕ್ಕೆ ಸ್ಪೀಕರ್, ಬೆಲ್ಲದ್ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಹ ಆಯಾಸವಾದರೇ ಕುಳಿತುಕೊಂಡು ಮಂಡನೆ ಮಾಡುವಂತೆ ಮನವಿ ಮಾಡಿದರು. ನನ್ನ ಕಾಲು ಸ್ವಲ್ಪ ನೋವಿದೆ. ಆದರೆ, ಆಯಾಸವಿಲ್ಲ. ಅಗತ್ಯ ಇದ್ದಾಗ ಕೂರುವುದಾಗಿ ಸಿದ್ದರಾಮಯ್ಯ, ಹೇಳಿ ಆಯವ್ಯಯ ಮಂಡನೆ ಮುಂದುವರಿಸಿದರು. ಮತ್ತೆ ಮಧ್ಯಾಹ್ನ 12ಕ್ಕೆ ಸ್ಪೀಕರ್, ಕುಳಿತು ಮಂಡಿಸುವಂತೆ ಕೈಸನ್ನೆ ಮಾಡಿದಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಡಚಣೆ ಬೇಡ.
ಅವರು ಓದಲಿ ಎಂದು ಕೈಸನ್ನೆಯಲ್ಲೇ ಸ್ಪೀಕರ್ ಅವರನ್ನು ಸುಮ್ಮನಿಸಿದರು. ಆಡಳಿತ ಪಕ್ಷದವರು ಮತ್ತು ಪ್ರತಿಪಕ್ಷದವರು ಸದನದಿಂದ ಒಳಗೆ-ಹೊರಗೆ ಓಡಾಡಿದರು ಮತ್ತು ಈಗ ಈಗ.. ಕೂರಲಿದ್ದಾರೆ ಎಂದು ಕುತೂಹಲದಿಂದ ನೋಡು ನೋಡುತ್ತಿದಂತೆ ಎಲ್ಲಿಯೂ ಆಯಾಸವಾಗದೆ ಸಿದ್ದರಾಮಯ್ಯ, ನೀರನ್ನು ಕುಡಿಯದೆ ನಿರರ್ಗಳವಾಗಿ 3 ಗಂಟೆ 29 ನಿಮಿಷಗಳ ಕಾಲ ಬಜೆಟ್ ಪುಸ್ತಕ ಓದುವ ಮೂಲಕ ತನ್ನ 17ನೇ ದಾಖಲೆ ಬಜೆಟ್‌ನ್ನು ಮಂಡಿಸಿದರು. ಆದರೆ, ಬಜೆಟ್ ಓದುವ ಸಮಯದಲ್ಲಿ ಹೊಸ ಯೋಜನೆ ೋಷಣೆ ಮಾಡಿದಾಗ ಆಡಳಿತರೂಢ ಸದಸ್ಯರು ಟೇಬಲ್ ತಟ್ಟಿ ಮುಖ್ಯಮಂತ್ರಿಗೆ ಉತ್ಸಾಹ ತುಂಬುವುದು ಸರ್ವೆಸಾಮಾನ್ಯ. ಆದರೆ, ಈ ಬಾರಿ ಎಲ್ಲಿಯೂ ಅಂತಹ ಉತ್ಸಾಸ ಕಾಣಲಿಲ್ಲ.
ಕೊನೆಯಲ್ಲಿ ಪ್ರತಿಪಕ್ಷದವರು ಗೋವಿಂದಾ. ಗೋವಿಂದ. ಸಾಲದ ಬಜೆಟ್ ಎಂದು ೋಷಣೆ ಕೂಗಿಕೊಂಡು ಸದನದಿಂದ ಹೊರನಡೆದರು. ಮತ್ತೊಂದೆಡೆ ಹಿರಿಯ ಸಚಿವರು, ಶಾಸಕರು ಸಿದ್ದರಾಮಯ್ಯಗೆ ಹಸ್ತಲಾಘವ ಮಾಡಿ ಶಬ್ಬಾಸ್ ಹೇಳಿದರೇ ಕಿರಿಯ ಶಾಸಕರು ಸಿಎಂ ಕಾಲಿಗೆ ಬಿದ್ದು, ಆರ್ಶೀವಾದ ಪಡೆದು ಪೋಟೋಗೆ ಮುಖ ಮಾಡಿದರು.