ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ರಾಮಯ್ಯಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಆರ್‌ಐಎಂ)ನ29ನೇವಾರ್ಷಿಕ ಘಟಿಕೋತ್ಸವವು ಬುಧವಾರನಡೆಯಿತು. 2023ರಿಂದ2025ನೇಸಾಲಿನ ಪದವಿ ಬ್ಯಾಚ್‌ನ ಒಟ್ಟು280 ವಿದ್ಯಾರ್ಥಿಗಳಿಗೆಪ್ರಮಾಣಪತ್ರ ವಿತರಿಸಲಾಯಿತು.
ಸಮಾರಂಭದಮುಖ್ಯ ಅತಿಥಿಗಳಾಗಿ ಪಾಲ್ಗೊಂಡುಘಟಿಕೋತ್ಸವ ಭಾಷಣ ಮಾಡಿದ ಮಿಟ್ಟಿಕೆಫೆಯ ಸಂಸ್ಥಾಪಕಿ ಮತ್ತು ಸಿಇಒಅಲೀನಾ ಆಲಂ,ದಿವ್ಯಾಂಗರಿಗೆಉದ್ಯೋಗಾವಕಾಶಗಳನ್ನು ನೀಡುವಮೂಲಕ ಅವರ ಜೀವನವನ್ನು ಹೇಗೆಬದಲಾಯಿಸಬಹುದು ಹಾಗೂ ತಾವು‘ಮಿಟ್ಟಿ ಕೆಫೆ’ಯನ್ನು ಕಟ್ಟಿದಸ್ಫೂರ್ತಿದಾಯಕ ಪ್ರಯಾಣವನ್ನುಹಂಚಿಕೊಂಡರು.
ಸಮಾಜವನ್ನುರೂಪಿಸುವಲ್ಲಿ ಘನತೆ,ಒಳಗೊಳ್ಳುವಿಕೆ,ಸಮುದಾಯದ ಬೆಂಬಲ,ಧೈರ್ಯ ಮತ್ತುಗಟ್ಟಿತನದ ಪ್ರಾಮುಖ್ಯತೆಯನ್ನುಒತ್ತಿಹೇಳಿದ ಆಲಂ,ಉದ್ದೇಶಪೂರ್ವಕವಾಗಿಕೆಲಸ ಮಾಡಿದಾಗ ಸಾಮಾನ್ಯ ಆಲೋಚನೆಗಳುಸಹ ಹೇಗೆ ಯಶಸ್ವಿಯಾಗುತ್ತವೆಎಂಬುದನ್ನು ವಿವರಿಸಿದರು.ಪ್ರತಿಯೊಬ್ಬರಲ್ಲೂಜಗತ್ತನ್ನು ಬದಲಾಯಿಸುವ ಕೀಲಿಕೈಇದ್ದು, ಅದನ್ನುಅರಿಯುವಂತೆ ವಿದ್ಯಾರ್ಥಿಗಳಿಗೆಕಿವಿಮಾತು ಹೇಳಿದರು.
ಅತ್ಯುತ್ತಮಸಾಧನೆ ಮಾಡಿದ ವಿದ್ಯಾರ್ಥಿಗಳಿಗೆಚಿನ್ನ ಮತ್ತು ಬೆಳ್ಳಿಯ ಪದಕಗಳನ್ನುನೀಡಿ ಗೌರವಿಸಲಾಯಿತು.ಸರ್ವತೋಮುಖಶ್ರೇಷ್ಠ ಸಾಧನೆಗಾಗಿ ಪೂಜಾಸಾಸನೂರ್ ಚಿನ್ನದ ಪದಕವನ್ನುತಮ್ಮದಾಗಿಸಿಕೊಂಡರು.
ಗೋಕುಲಎಜುಕೇಷನ್ ಫೌಂಡೇಷನ್‌ನ ಅಧ್ಯಕ್ಷರಾದಡಾ. ಎಂ.ಆರ್.ಸೀತಾರಾಮ್ ಮತ್ತುಆರ್‌ಐಎಂ ನಿರ್ದೇಶಕ ಡಾ.ಎಂ.ಆರ್.ಪಟ್ಟಾಭಿರಾಮ್ತಮ್ಮ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆಶುಭ ಹಾರೈಸಿ,ಮೌಲ್ಯಾಧಾರಿತಶಿಕ್ಷಣ ಮತ್ತು ನಿರಂತರ ಪ್ರಗತಿಯಮೂಲಕ ರಾಮಯ್ಯ ಸಮೂಹದ ಪರಂಪರೆಯನ್ನುಮುಂದುವರಿಸಬೇಕು ಎಂದು ಕರೆನೀಡಿದರು.
ಗೋಕುಲಎಜುಕೇಷನ್ ಫೌಂಡೇಷನ್‌ನ ನಿರ್ದೇಶಕಎಂ.ಆರ್.ಆನಂದರಾಮ್,ಮುಖ್ಯ ಕಾರ್ಯನಿರ್ವಾಹಕಡಾ.ಎಚ್.ವಿ.ಪಾರ್ಶ್ವನಾಥ್,ಹಣಕಾಸು ಮುಖ್ಯಸ್ಥಜಿ. ರಾಮಚಂದ್ರ,ಡೀನ್ ಡಾ.ಎ.ವಿ.ಅರುಣಕುಮಾರ್ಮತ್ತು ರಿಜಿಸ್ಟ್ರಾರ್ ಡಾ.ಸವಿತಾರಾಣಿರಾಮಚಂದ್ರನ್ ಉಪಸ್ಥಿತರಿದ್ದರು.