ಸುದ್ದಿಗೋಷ್ಠಿಯಲ್ಲಿ ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ಆರ್. ಜಯರಾಂ ಮಾತನಾಡಿದರು. 
ರಾಜ್ಯ

ಆಲ್ಬನಿ ವಿವಿ ಜತೆ ಸಹಯೋಗ ದೇಶದಲ್ಲಿಯೇ ರಾಮಯ್ಯ ಗ್ರೂಪ್ ಮೊದಲ ಸಂಸ್ಥೆ: ಏನಿದರ ವಿಶೇಷ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಏನೆಲ್ಲ ಲಾಭವಿದೆ?

ಪ್ರಮುಖ ಮುಖ್ಯಾಂಶಗಳು

  • ಸಾಂಪ್ರದಾಯಿಕ ಶಿಕ್ಷಣದ ಮಾದರಿಗಿಂತ ಹೆಚ್ಚಾಗಿ ಜಾಗತಿಕ ಜ್ಞಾನದ ಪರಿಸರಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತಕ್ಕೆ ಬೇಕಿದೆ. ಈ ಹಿನ್ನೆಲೆಯಲ್ಲಿ ಸಹಯೋಗ
  • ಸಂಶೋಧನೆ, ಪಠ್ಯಕ್ರಮ, ಬೋಧಕ ಸಿಬ್ಬಂದಿ ಮತ್ತು ತರಬೇತಿ ವಿಚಾರದಲ್ಲಿ ಜ್ಞಾನ ವಿನಿಯಮವಾಗಲಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
  • ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಮುಖ ಮೂರು ಕೋರ್ಸ್‌ಗಳನ್ನು ಈ ವರ್ಷ ಆರಂಭಿಸಲಾಗುತ್ತಿದೆ. ಕಂಪ್ಯೂಟರ್ ಸೈನ್ಸ್ ಆೃಂಡ್ ಇಂಜಿನಿಯರಿಂಗ್, ಏರೋಸ್ಪೇಸ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
  • ಇದೇ ಜೂ.4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಗಳಾದ ಜೆಇಇ ಮತ್ತು ಕಾಮೆಡ್-ಕೆನಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈ ಕೋರ್ಸ್ ಪ್ರವೇಶಾತಿಗೆ ಅರ್ಹ
ಬೆಂಗಳೂರು: ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಆಲ್ಬನಿಯ ‘ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್’ ಜತೆಗೆ ರಾಮಯ್ಯ ಗ್ರೂಪ್ ಸಹಯೋಗ ಪಡೆದಿದೆ. ಈ ರೀತಿ ಸಹಯೋಗ ಪಡೆಯುತ್ತಿರುವ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ರಾಮಯ್ಯ ಗ್ರೂಪ್ ಪಾತ್ರವಾಗಿದೆ.
ಈ ಕುರಿತು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ಆರ್. ಜಯರಾಂ, ಸಾಂಪ್ರದಾಯಿಕ ಶಿಕ್ಷಣದ ಮಾದರಿಗಿಂತ ಹೆಚ್ಚಾಗಿ ಜಾಗತಿಕ ಜ್ಞಾನದ ಪರಿಸರಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತಕ್ಕೆ ಬೇಕಿದೆ. ಈ ಹಿನ್ನೆಲೆಯಲ್ಲಿ ಸಹಯೋಗ ಪಡೆಯಲಾಗಿದೆ ಎಂದು ಹೇಳಿದರು.

ಈ ವರ್ಷ 3 ಪ್ರೋಗ್ರಾಂ ಆರಂಭ:

ಸಂಶೋಧನೆ, ಪಠ್ಯಕ್ರಮ, ಬೋಧಕ ಸಿಬ್ಬಂದಿ ಮತ್ತು ತರಬೇತಿ ವಿಚಾರದಲ್ಲಿ ಜ್ಞಾನ ವಿನಿಯಮವಾಗಲಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಮುಖ ಮೂರು ಕೋರ್ಸ್‌ಗಳನ್ನು ಈ ವರ್ಷ ಆರಂಭಿಸಲಾಗುತ್ತಿದೆ. ಕಂಪ್ಯೂಟರ್ ಸೈನ್ಸ್ ಆೃಂಡ್ ಇಂಜಿನಿಯರಿಂಗ್, ಏರೋಸ್ಪೇಸ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಇದೇ ಜೂ.4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಗಳಾದ ಜೆಇಇ ಮತ್ತು ಕಾಮೆಡ್-ಕೆನಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈ ಕೋರ್ಸ್ ಪ್ರವೇಶಾತಿಗೆ ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಡಾ. ಎನ್.ಡಿ. ಗಂಗಾಧರ್. ಡಾ. ಡಿ.ಎನ್. ರಘನಂದನ್, ಗುರುಚರಣ್ ಗೊಲ್ಲೇರ್‌ಕೇರಿ ಮತ್ತು ಡಾ. ಜೆ.ಡಿ. ದೇಸಾಯಿ ಉಪಸ್ಥಿತರಿದ್ದರು.

ಜೂ.3ರಂದು ಚಾಲನೆ

ಆಲ್ಬನಿ ಮತ್ತು ರಾಮಯ್ಯ ಗ್ರೂಪ್‌ನ ಸಹಯೋಗದ ಸಂಸ್ಥೆಯನ್ನು ‘ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಸೈನ್ಸ್ ಆೃಂಡ್ ಮ್ಯಾನೇಜ್‌ಮೆಂಟ್’ (ಆರ್‌ಐಎಸ್‌ಎಂ) ಎಂದು ಹೆಸರಿಡಲಾಗಿದೆ. ಜೂ.3ರಂದು ಬೆಳಗ್ಗೆ 10.30ಕ್ಕೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
"

ದೇಶದಲ್ಲಿಯೇ ವಿಶಿಷ್ಟವಾದ, ಎಲ್ಲ ರೀತಿಯ ಸೌಕರ್ಯಗಳನ್ನು ಒಳಗೊಂಡ ಡೀಮ್ಡ್ ಯೂನಿವರ್ಸಿಟಿಯಾಗಿ ಆಲ್ಬನಿ ಮತ್ತು ರಾಮಯ್ಯ ಗ್ರೂಪ್‌ನ ಸಹಯೋಗದ ‘ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಸೈನ್ಸ್ ಆೃಂಡ್ ಮ್ಯಾನೇಜ್‌ಮೆಂಟ್’ ತಲೆ ಎತ್ತಲಿದೆ. ಇದು ಮುಂದಿನ ತಲೆಮಾರಿನ ಸ್ಟೆಮ್ ಮತ್ತು ಮ್ಯಾನೇಜ್‌ಮೆಂಟ್ ವಿವಿಯಾಗಿ ಪರಿಗಣಿಸಲಾಗಿದೆ.

— - ಎಂ.ಆರ್. ಜಯರಾಂ, ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ