ಮಸ್ಕಿಯಲ್ಲಿ ಶಿರಸ್ತೇದಾರ್ ಗುರುಲಿಂಗಯ್ಯಗೆ ತಾಲೂಕು ರಜಪೂತ ಸಮಾಜ ಮನವಿ ಸಲ್ಲಿಸಿತು. ಅಧ್ಯಕ್ಷ ಅಶೋಕ ಸಿಂಗ್ ಠಾಕೂರ, ಕಾರ್ಯದರ್ಶಿ ರಾಮಸಿಂಗ್, ಭರತರಾಜ ದೇಶಮುಖ, ಶಿವಪಾಲಸಿಂಗ್ ಕಿಲ್ಲಾ, ಹೇಮಂತಸಿಂಗ್ ಕುರುಡಿ, ಚಂದ್ರಕುಮಾರ ಸಿಂಗ್ ದೇಶಮುಖ ಇತರರಿದ್ದರು.
ಮಸ್ಕಿ: ರಾಜ್ಯ ಸರ್ಕಾರ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಸಮಾಜದ ಬಡವರ ಕಲ್ಯಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜದ ತಾಲೂಕು ಘಟಕದಿಂದ ಬುಧವಾರ ತಹಸಿಲ್ ಕಚೇರಿಯ ಶಿರಸ್ತೇದಾರ್ ಗುರುಲಿಂಗಯ್ಯಗೆ ಮನವಿ ಸಲ್ಲಿಸಲಾಯಿತು.
ರಜಪೂತ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಸಿಂಗ್ ಠಾಕೂರ್ ಮಾತನಾಡಿ, ಜಿಲ್ಲೆಯಲ್ಲಿ ಸಮಾಜದ ಜನಸಂಖ್ಯೆ ಎಷ್ಟಿದೆ, ಸಾಮಾಜಿಕ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುವ ಕೆಲಸ ನಡೆದಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಈ ಕಾರ್ಯ ಚಾಲ್ತಿಯಲ್ಲಿದೆ.
ಸಮುದಾಯದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಅಭಿವೃದ್ಧಿ ಮಂಡಳಿ ಸ್ಥಾಪನೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಪ್ರಮುಖರಾದ ಸುಭಾಷ್‌ಸಿಂಗ್ ಠಾಕೂರ, ಮದನ್‌ಸಿಂಗ್ ಕಿಲ್ಲಾ, ಸತೀಶಸಿಂಗ್ ದಿವಾನ್, ಪ್ರಕಾಶಸಿಂಗ್ ದೇಶಮುಖ, ರೂಪಸಿಂಗ್ ಕಿಲ್ಲಾ, ಪ್ರಮೋದಸಿಂಗ್ ಹಜೇರಿ, ದೇವರಾಜ ಸಿಂಗ್ ಕುರುಡಿ ಇತರರಿದ್ದರು.