ಹೊರರಾಜ್ಯದ ಅಂಗಡಿಕಾರರನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಬೆಟಗೇರಿ ಗ್ರಾಪಂ ಪಿಡಿಒ ಎಸ್​.ಆರ್​.ಪತ್ತಾರಗೆ ಸ್ಥಳಿಯ ಅಂಗಡಿಕಾರರು ಮನವಿ ಸಲ್ಲಿಸಿದರು. ಈರಪ್ಪ ದೇಯಣ್ಣವರ, ಈರಣ್ಣ ಬಳಿಗಾರ, ರಾಮಪ್ಪ ಮುಧೋಳ, ರಫೀಕ್​ ಮಿರ್ಜಾನಾಯ್ಕ, ಮಹಾಂತೇಶ ಸಿದ್ನಾಳ ಇತರರಿದ್ದರು. 
ರಾಜ್ಯ

ರಾಜಸ್ಥಾನ ವ್ಯಾಪಾರಿಗಳ ಅಂಗಡಿ ತೆರವುಗೊಳಿಸಿ

ಬೆಟಗೇರಿ: ಗ್ರಾಮದಲ್ಲಿ ಹೊರರಾಜ್ಯ(ರಾಜಸ್ಥಾನ)ದಿಂದ ಬಂದ ಕೆಲವರು ವಿವಿಧ ಅಂಗಡಿ ತೆರೆದು ವ್ಯಾಪಾರ ವಹಿವಾಟು ಮಾಡುತ್ತಿದ್ದು, ಅವರ ಅಂಗಡಿಗಳನ್ನು ತೆರವು ಮಾಡುವಂತೆ ಆಗ್ರಹಿಸಿ ಗ್ರಾಮದ ಅಂಗಡಿಕಾರರು, ಯುವಕರು, ಸ್ಥಳಿಯರು ಗ್ರಾಪಂ ಪಿಡಿಒ ಎಸ್​.ಆರ್​.ಪತ್ತಾರಗೆ ಸೋಮವಾರ ಮನವಿ ಸಲ್ಲಿಸಿದರು.
ಯುವಕರು ಶಿಣ ಕಲಿತು ನಿರುದ್ಯೋಗಿಗಳಾಗಿದ್ದು, ಸ್ವಗ್ರಾಮದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಹೊರರಾಜ್ಯದಿಂದ ಬಂದವರ ಅಂಗಡಿ ತೆರವು ಮಾಡುವಂತೆ ಆಗ್ರಹಿಸಿದರು. ಗ್ರಾಪಂನಿಂದ ಅಂಗಡಿ ತೆರೆಯಲು ಪರವಾನಗಿ ಪತ್ರ ನೀಡಬಾರದು ಎಂದು ಒತ್ತಾಯಿಸಿದರು.
ಪಿಡಿಒ ಎಸ್​.ಆರ್​.ಪತ್ತಾರ ಮಾತನಾಡಿ, ಅನ್ಯರಾಜ್ಯದ ಅಂಗಡಿಗಾರರಿಗೆ ಗ್ರಾಪಂ ವತಿಯಿಂದ ನೋಟಿಸ್​ ನೀಡಿ ವಿಚಾರಿಸಲಾಗುವುದು ಎಂದರು.
ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ, ಈರಪ್ಪ ದೇಯಣ್ಣವರ, ಈರಣ್ಣ ಬಳಿಗಾರ, ರಾಮಪ್ಪ ಮುಧೋಳ, ರಫೀಕ್​ ಮಿರ್ಜಾನಾಯ್ಕ,
ಮಹಾಂತೇಶ ಸಿದ್ನಾಳ, ಸಂಗಯ್ಯ ಹಿರೇಮಠ, ಹನುಮಂತ ಕಾಡದವರ, ಮುತ್ತೆಪ್ಪ ಕನೋಜಿ, ಮುತ್ತೆಪ್ಪ ಕುರಬರ, ಕಾಳಪ್ಪ ಕಂಬಾರ, ನಾಗಪ್ಪ ಚಂದರಗಿ, ಉದಯ ಕೋಣಿ, ರಮೇಶ ದಂಡಿನ, ಸದಾಶಿವ ದಂಡಿನ, ವೀರಭದ್ರ ಪಡಶೆಟ್ಟಿ, ಗುಳಪ್ಪ ಅಜ್ಜನಕಟ್ಟಿ, ದಸ್ತಗಿರಸಾಬ ಯಲಿಗಾರ, ಫಿರೋಜ ಮಿರ್ಜಾನಾಯ್ಕ, ರಮೇಶ ಕಂಬಿ, ರಮೇಶ ಕದಮ ಇತರರಿದ್ದರು.