ಸಿಡಿಲು ಬಡಿದು ಗಂಭೀರ ಗಾಯಗೊಂಡು ಹುಮನಾಬಾದ್​ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಮತಾಬಾದ್​ ಗ್ರಾಮದ ಚಂದ್ರಕಾಂತನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್​ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ, ಡಾ.ಮುಸ್ತಾಫಾ, ಡಾ.ರೋಹಿತ ರೂಜಿ ಇತರರಿದ್ದರು. 
ರಾಜ್ಯ

ಹುಮನಾಬಾದ್​ ಸರ್ಕಾರಿ ಆಸ್ಪತ್ರೆಗೆ ರಾಜಶೇಖರ ಪಾಟೀಲ್​ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಸಿಡಿಲು ಬಡಿದು ಗಾಯಗೊಂಡ ವಿದ್ಯಾರ್ಥಿ
  • ಆರೋಗ್ಯ ವಿಚಾರಿಸಿದ ಮಾಜಿ ಸಚಿವ
ಹುಮನಾಬಾದ್​: ಸಿಡಿಲು ಬಡಿದು ಗಂಭೀರ ಗಾಯಗೊಂಡ ಚಿಟಗುಪ್ಪ ತಾಲೂಕಿನ ಶಾಮತಾಬಾದ್​ ಗ್ರಾಮದ ಚಂದ್ರಕಾಂತ ಕಲ್ಲಪ್ಪ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬುಧವಾರ ಮಾಜಿ ಸಚಿವ ರಾಜಶೇಖರ ಪಾಟೀಲ್​ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀೆಗೆ ಸಿದ್ಧತೆ ನಡೆಸುತ್ತಿದ್ದ ಚಂದ್ರಕಾಂತ,ದುರಾದೃಷ್ಟವಶಾತ ಸಿಡಿಲು ಬಡಿತಕ್ಕೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ತಣ ಆಸ್ಪತ್ರೆಗೆ ಧಾವಿಸಿದ ಮಾಜಿ ಸಚಿವರು, ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದು, ಅಗತ್ಯವಾದ ಎಲ್ಲ ರೀತಿಯ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ, ಡಾ. ಮುಸ್ತಾಫಾ, ಡಾ.ರೋಹಿತ ರೂಜಿ, ಜೀವನ ಪೋಲೆ, ಶಿವಕುಮಾರ ಬೇಳಕೇರಾ, ತಾನಾಜಿ ಪಾಟೀಲ್​, ಶಂಕರನಾಗ ಸಾಹುಕಾರ, ಫಯಾಜ್​ ಗುತ್ತೇದಾರ್​ ಇತರರಿದ್ದರು.