Rajanna's role is important in field development
ಐ.ಡಿ.ಹಳ್ಳಿ: ಕೆ.ಎನ್.ರಾಜಣ್ಣ ಅವರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕರಾಗಿರುವುದರಿಂದ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ಮಧುಗಿರಿ ತಾಲೂಕಿನ ಐಡಿಹಳ್ಳಿಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಣ್ಣ ಅವರು ತಾಲೂಕಿಗೆ ಹಾಗೂ ರೈತರಿಗೆ ಹೆಚ್ಚು ಅನುಕೂಲವಾಗಬೇಕೆಂದು ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದೆ ಬರಲಿರುವ ಜಿಲ್ಲಾ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲ ಸೇರಿ ತಾಲೂಕಿನಲ್ಲಿನ ಎಲ್ಲ ಸ್ಥಾನಗಳನ್ನು ಗೆಲ್ಲಿಸಿದಾಗ ರಾಜಣ್ಣ ಅವರಿಗೆ ಶಕ್ತಿ ತುಂಬಿದಂತಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಗೂ ನಮಗೆ ಶಕ್ತಿ ಬಂದಂತಾಗಲಿದೆ ಎಂದರು.
ಮುಖಂಡರಾದ ಪಿ.ಟಿ.ಗೋವಿಂದಯ್ಯ, ಶ್ರೀಧರ್ ರೆಡ್ಡಿ, ನರಸರೆಡ್ಡಿ, ಶನಿವಾರಮರೆಡ್ಡಿ, ನರಸಿಂಹರೆಡ್ಡಿ, ಪ್ರಜ್ವಲ್, ಶಂಕರ್, ಹೇಮಂತ್, ನರಸಿಂಹಮೂರ್ತಿ, ಜಿಲಾನ್, ಲಿಂಗಪ್ಪ, ಪಿಡಿಒ ಆಂಜನೇಯಲು, ಸಿದ್ದಲಿಂಗಯ್ಯ ಮತ್ತಿತರರು ಇದ್ದರು.