Raise awareness to prevent electrical accidents
ತಿಪಟೂರು : ಬೇರೆ ತಪ್ಪಿಗೆ ಕ್ಷಮೆ ಇದೆ. ಆದರೆ ವಿದ್ಯುತ್ ನಿರ್ಲಕ್ಷ್ಯಕ್ಕೆ ಯಾವುದೇ ಕ್ಷಮೆ ಇಲ್ಲ ಎಂದ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಬೆಸ್ಕಾಂ ಕಚೇರಿಯಿಂದ ನನ್ನ ಸುರಕ್ಷತೆ, ನನ್ನ ಜವಾಬ್ದಾರಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಉಪವಿಭಾಗ ಮಟ್ಟದ ಸುರಕ್ಷತಾ ಸಪ್ತಾಹ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ವಿದ್ಯುತ್ ಕಂಪನಿಯ ನೌಕರರು ಕ್ಷೇಮವಾಗಿದ್ದರೆ ಇಡೀ ನಾಡು ಕ್ಷೇಮವಾಗಿರುತ್ತದೆ. ವಿದ್ಯುತ್ ಇಲ್ಲದ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಇದರ ತೆಗೆ ಕಣ್ಣಿಗೆ ಕಾಣದ ವಿದ್ಯುತ್ ಪ್ರಹವಿಸಿದರೆ ಉಂಟಾಗುವ ಗಂಭೀರ ಅನಾಹುತದ ಬಗ್ಗೆಯೂ ಊಹಿಸಲು ಅಸಾಧ್ಯ. ಸರ್ಕಾರ ನಿಮಗೆ ಗಂಭೀರ ಮತ್ತು ಗುರುತರ ಜವಾಬ್ದಾರಿ ಕೊಟ್ಟಿದೆ. ಕರ್ತವ್ಯ ನಿರ್ವಹಿಸುವ ಸಂದರ್ಭ ನಿಮ್ಮಗಳ ಸುರಕ್ಷತೆಗಾಗಿ ಹೆಲ್ಮೆಟ್, ಕೈಗವಸು, ಕಂಬ ಹತ್ತಿಳಿಯಲು ಅಗತ್ಯ ಸಲಕರಣೆಗಳು, ಮತ್ತು ದುರಸ್ತಿ ಅಥವಾ ವಿದ್ಯುತ್ ಲೈನ್ ಎಳೆಯುವ ಸಂದರ್ಭ ಅಗತ್ಯವಿರುವ ಪರಿಕರಗಳನ್ನು ಬಳಸಬೇಕು. ನೀವು ಮತ್ತು ನಿಮ್ಮ ಕುಟುಂಬ ಕ್ಷೇಮವಾಗಿದ್ದರೆ ನಾಡು ಕ್ಷೇಮವಾಗಿರುತ್ತದೆ ಎಂದರು.
ಉಪವಿಭಾಗ ಅಭಿಯಂತರ ಸೋಮಶೇಖರ್ ವಾತನಾಡಿ, ಇಲಾಖೆಯ ಸಿಬ್ಬಂದಿ, ನಾಗರಿಕರು ಮತ್ತು ಪಾಣಿಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ವಿದ್ಯುತ್ ಅವಡಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಸರ್ಕಾರಿ ಶಾಲೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಜಾಥಾಗಳ ಮೂಲಕ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಬೇಕು. ವಿದ್ಯುತ್ ಅವಡಕ್ಕೆ ಬಲಿಯಗುವುದನ್ನು ಶೂನ್ಯಕ್ಕೆ ತರುವ ಸಂಕಲ್ಪ ವಾಡೋಣ, ಸುರಕ್ಷತಾ ಕಾರ್ಯಕ್ರಮ ಕೇವಲ ಜಾಗೃತಿಗೆ ಸೀಮಿತವಾಗಬಾರದು. ಪಾಲನೆ ಆಗಬೆಕು ಎಂದರು.
ನಗರ ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮನೋಹರ್ ವಾತನಾಡಿ, ವಿದ್ಯುತ್ ಇಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ. ವಿದ್ಯುತ್ ಉತ್ಪಾದನೆ ಒಂದು ದೇಶದ ಶಕ್ತಿ ಮತ್ತು ಪ್ರತಿಭೆಯ ಸಂಕೇತ. ಇಷ್ಟು ಮುಂಜಾಗ್ರತೆ ವಹಿಸಿದರೂ ವಿದ್ಯುತ್ ಅವಡಗಳು ಸಂಭವಿಸುತ್ತಿರುವುದು ವಿಪರ್ಯಾಸ. ಸುರಕ್ಷತೆ ಇರುವಲ್ಲಿ ಅಪಘಾತ ಸಂಭವಿಸಲ್ಲ. ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ವಿದ್ಯುತ್ ನೌಕರರ ಸಂ ವೆಂಕಟಸ್ವಾಮಿ, ಮನೋಹರ್, ಶ್ರೀನಿವಾಸ್, ಮಹಿಳಾ ಸಂದ ಅಧ್ಯಕ್ಷೆ ನೇತ್ರಾವತಿ ಹಾಗೂ ಗುತ್ತಿಗೆದಾರರ ಸಂದ ಪದಾಧಿಕಾರಿಗಳು ಇದ್ದರು.