ಯಡ್ರಾಮಿಯಲ್ಲಿ ಅಸಂಖ್ಯಾತ ಭಕ್ತರ ಜೈೂಷದ ಮಧ್ಯೆ ಸಂಭ್ರಮದಿಂದ ಶ್ರೀ ಬಸವೇಶ್ವರರ ಮಹಾರಥೋತ್ಸವ ಶನಿವಾರ ನಡೆಯಿತು. 
ರಾಜ್ಯ

ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಶಿವಾನಂದ ಸ್ವಾಮೀಜಿ ಕರೆ
  • ಯಡ್ರಾಮಿಯಲ್ಲಿ ಧರ್ಮಸಭೆ, ತುಲಾಭಾರ
ಯಡ್ರಾಮಿ: ಜಾತ್ರೋತ್ಸವ ನೆಪದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಗೊಳಿಸುವುದರ ಜತೆಗೆ ಯುವ ಪೀಳಿಗೆಗೆ ಗ್ರಾಮದ ಸಂಸ್ಕೃತಿ ತಿಳಿಸಿ, ಸಂಸ್ಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸೊನ್ನ ದಾಸೋಹ ಮಠದ ಶ್ರೀ ಡಾ.ಶಿವಾನಂದ ಸ್ವಾಮಿಗಳು ತಿಳಿಸಿದರು.
ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆ, ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳ ತುಲಾಭಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಜನರಲ್ಲಿ ಸಂಸ್ಕಾರ ಹಾಗೂ ಸಂಸತಿ ಅರಿವು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಯಡ್ರಾಮಿ ಶ್ರೀಗಳು ಯುವಕರಿಗೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿದ್ದಾರೆ ಎಂದು ಶ್ಲಾಸಿದರು.
ತಾಲೂಕವನ್ನು ಶೈಣಿಕವಾಗಿ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದಿಂದ ಯಡ್ರಾಮಿ ವಿರಕ್ತ ಮಠದಿಂದ ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಭಕ್ತರು ಸರ್ವಸಮ್ಮತದಿಂದ ದೇವಸ್ಥಾನದ ಜೀಣೋರ್ದ್ಧಾರ ಮಾಡಬೇಕು ಎಂದು ಸಲಹೆ ನೀಡಿದರು.
ಮಾಗಣಗೇರಾದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಪ್ರಮುಖರಾದ ಶಿವಲಾಲ್​ಸಿಂಗ್​, ನಿಂಗನಗೌಡ ಪೊಲೀಸ್​ ಪಾಟೀಲ್​, ರೇವಣಸಿದ್ದಪ್ಪ ಸಾಹು ಡಗ್ಗಾ, ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಗುರುಬಸ್ಸಪ್ಪ ಸಾಹು ಸಣ್ಣಳ್ಳಿ, ಎನ್​.ಆರ್​.ಪಾಟೀಲ್​, ಚಂದ್ರಶೇಖರ ಪುರಾಣಿಕ, ಬಸವರಾಜ ಹೂಗಾರ, ಮಲ್ಲಿಕಾರ್ಜುನ ಹಲಕರ್ಟಿ, ಸಿದ್ರಾಮಪ್ಪಗೌಡ ಮಾಲಿಪಾಟೀಲ್​, ಶಂಭುಲಿಂಗ ಸಾಹು ತಾಳಿಕೋಟಿ, ಮಲ್ಲಾರರಾವ್​ ಕುಲಕರ್ಣಿ, ನಾಗಣ್ಣ ಸಾಹು ಹಾಗರಗುಂಡಗಿ, ರೇವಣಸಿದ್ದ ಅಂಕಲಕೋಟಿ, ಈರಣ್ಣ ಸುಂಕದ, ಬಸವರಾಜ ದೊಡ್ಡಳ್ಳಿ, ಶಿವುಗೌಡ ಬಂಡೆಪ್ಪಗೋಳ, ಲಿಂಗರಾಜ ಪಟ್ಟಣಶೆಟ್ಟಿ, ಶಿವು ತಾಳಿಕೋಟಿ ಇತರರಿದ್ದರು.
ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲಗೊಂಡಿತು. ಎತ್ತುಗಳಿಗೆ ಪೂಜೆ ಸಲ್ಲಿಸಿ, ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಬಸವೇಶ್ವರನ ಮಹಾರಥೋತ್ಸವ ವೈಭವ

ಪಟ್ಟಣದ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಶನಿವಾರ ಅಸಂಖ್ಯಾತ ಭಕ್ತರ ಜೈೂಷದ ಮಧ್ಯೆ ಅದ್ದೂರಿ ರಥೋತ್ಸವ ನಡೆಯಿತು. ಬೆಳಗ್ಗೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ನೈವೇದ್ಯ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸಂಜೆ ಪುರವಂತ ಸೇವೆ, ವಿವಿಧ ವಾದ್ಯಗಳೊಂದಿಗೆ ತನಾರತಿ ನಡೆಯಿತು. ಬಳಿಕ ರಥಕ್ಕೆ ಕಳಸ ಏರಿಸಲಾಯಿತು. ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮಹಾರಥಕ್ಕೆ ಚಾಲನೆ ನೀಡಲಾಯಿತು. ಭಕ್ತರು ಶ್ರೀ ಬಸವೇಶ್ವರ ಮಹಾರಾಜ್​ಕಿ ಜೈ.. ಸೇರಿ ವಿವಿಧ ೂಷಗಳಿಂದಿಗೆ ಪಟ್ಟಣದ ಅಗಸಿಯ ಹತ್ತಿರದ ಪಾದಗಟ್ಟಿವರೆಗೆ ರಥವನ್ನು ಎಳೆದರು. ಪಾದಗಟ್ಟಿಗೆ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನಕ್ಕೆ ರಥ ತರಲಾಯಿತು. ಮಹಿಳೆಯರು ಕಳಸವನ್ನು ಹಿಡಿದು ರಥದ ಹಿಂದೆ ಹೆಜ್ಜೆ ಹಾಕಿದರು. ದೇವಸ್ಥಾನದಲ್ಲಿ ಮಹಾಮಂಗಳಾರತಿ ಮೂಲಕ ಜಾತ್ರೆ ಸಂಪನ್ನಗೊಂಡಿತು.