ವಾಸದ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ 
ರಾಜ್ಯ

ಮನೆಗಳಿಗೆ ನುಗ್ಗಿದ ಮಳೆ ನೀರು

ಪ್ರಮುಖ ಮುಖ್ಯಾಂಶಗಳು

  • ಜಾವಗಲ್ ಹೋಬಳಿ
  • ಕರಗುಂದ ಗ್ರಾಮ ಪಂಚಾಯಿತಿಯ ಹರಲಹಳ್ಳಿ ಗ್ರಾಮ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಹೋಬಳಿಯ ಕರಗುಂದ ಗ್ರಾಮ ಪಂಚಾಯಿತಿಯ ಹರಲಹಳ್ಳಿ ಗ್ರಾಮದಲ್ಲಿ ವಾಸದ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಶಾಸಕರ ನಿಧಿಯಿಂದ ಗ್ರಾಮದ ಪ್ರಮುಖ ಬೀದಿ ಕಾಂಕ್ರೀಟ್ ರಸ್ತೆ ಮಾಡಲಾಗಿದ್ದು, ರಸ್ತೆ ಪಕ್ಕದಲ್ಲಿರುವ ಚರಂಡಿ ಚಿಕ್ಕದಾಗಿರುವುದರಿಂದ ನೀರು ಸರಾಗವಗಿ ಹೋಗಲು ಅನುವು ಮಾಡಿ ಕೊಟ್ಟಿಲ್ಲ.
ಪರಿಣಾಮ ಮಳೆ ನೀರು ರಸ್ತೆಯ ಬದಿಯಲ್ಲಿರುವ ಶೈಲಜಾ, ಪಾರ್ವತಮ್ಮ, ಬೈರಪ್ಪ, ಗೀತಾ ನಾಗೇಶ್, ಚಂದ್ರಶೇಖರ್ ಅವರ ಮನೆಗೆ ನುಗ್ಗಿದೆ. ಪರಿಣಾಮ ಮನೆಯಲ್ಲಿರುವ ದಿನಸಿ ಸಾಮಗ್ರಿ ಹಾಗೂ ಇತರ ವಸ್ತುಗಳು ಹಾಳಾಗಿವೆ.