ಬೆಳಗಾವಿ ಜಿಲ್ಲೆಯಲ್ಲಿ ತಗ್ಗಿದ ಮಳೆ
- ಬೆಳಗಾವಿ ಜಿಲ್ಲೆಯಲ್ಲಿ ತಗ್ಗಿದ ಮಳೆ
- ನದಿಗಳ ನೀರಿನ ಮಟ್ಟ ಇಳಿಕೆ
- ದೂರಾದ ಪ್ರವಾಹ ಭೀತಿ
ಜಿಲ್ಲೆಯಲ್ಲಿ ತಗ್ಗಿದ ಮಳೆ
| ಕೃಷ್ಣಾ ನದಿ ಒಳ ಹರಿವಿನಲ್ಲಿ ಇಳಿಕೆ | ನಿರಾಳರಾದ ಜನತೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿತ್ತು. ಆದರೆ ಕಳೆದೆರಡು ದಿನದಿಂದ ಮಳೆ ತಗ್ಗಿನಿಂದ ನೀರಿನ ಪ್ರಮಾಣ ಶುಕ್ರವಾರ ಇಳಿಮುಖ ಕಂಡಿದೆ.ನದಿ ನೀರಿನ ಒಳ ಹರಿವು ಕೊಂಚ ಕಡಿಮೆಯಾಗಿದೆ.
ಕೃಷ್ಣಾ ನದಿಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಹಾಗೂ ವೇದಗಂಗಾ, ದೂಧ ಗಂಗಾ ನದಿಗಳ ಮೂಲಕ ಒಟ್ಟು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ೧.೪೪ ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಗುರುವಾರಕ್ಕಿಂತ 85 ಕ್ಯೂಸೆಕ್ ಒಳ ಹರಿವಿನಲ್ಲಿ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ತಗ್ಗಿದ ಮಳೆ:
ಬೆಳಗಾವಿ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ ಸೇರಿ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದೆ. ನಿರಂತರ ಮಳೆಯಿಂದ ಜಿಲ್ಲೆ ಕೃಷ್ಣಾ, ವೇದಗಂಗಾ, ದೂಧಗಆಗಾ, ಹಿರಣ್ಯಕೇಶಿ,
ಮಲಪ್ರಭಾ,ಮತ್ತು ಘಟಪ್ರಭಾ ನದಿಗಳು ಮೈದುಂಬಿ ಹರಿದಿದ್ದು, ನದಿಗಳು ನೀರಿನ ಮಟ್ಟ ನಿರಂತರ ಏರಿಕೆಯಿಂದ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿತ್ತು.ಆದರೆ ಮಳೆ ತಗ್ಗಿ ನದಿಗಳ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಜನರು ನಿರಾಳರಾಗಿದ್ದಾರೆ.