12ವರೆಗೆ ಬೆಂಗ್ಳೂರಲ್ಲಿ ಮಳೆ 
ರಾಜ್ಯ

ಮೇ 12ವರೆಗೆ ಬೆಂಗ್ಳೂರಲ್ಲಿ ಮಳೆ: ಹವಾಮಾನ ಇಲಾಖೆ ಮಾಹಿತಿ-Bangalore rain

ಬೆಂಗಳೂರು: ಅಂಡಮಾನ್ ನಿಕೋಬಾರ್‌ನಲ್ಲಿ ತೇವಾಂಶ ಭರಿತ ಮೋಡ ಇರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮೇ 6ರಿಂದ ಮೇ 12ವರೆಗೆ ತುಸು ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಮುಂದಿನ ಒಂದು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ವೇಳೆ ಗುಡುಗು, ಮಿಂಚು ಸಹಿತ ವರ್ಷಧಾರೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವೂ ಕ್ರಮವಾಗಿ 34 ಮತ್ತು 22 ಡಿ.ಸೆ. ದಾಖಲಾಗಬಹುದು ಎಂದು ಮಾಹಿತಿ ನೀಡಿದೆ.
ಐದಾರು ದಿನಗಳಿಂದ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಅರ್ಧ ಗಂಟೆ ಮಳೆಗೆ 9 ಮಂದಿ ಬಲಿಯಾಗಿದ್ದರು. ಹಲವು ಭಾಗಗಳಲ್ಲಿ ಮರಗಳ ಧರಾಶಾಹಿಯಾಗಿ ಸೇರಿ ಅಧಿಕವಾಗಿ ಮಳೆ ಅನಾಹುತ ಸಂಭವಿಸಿತ್ತು. ಅರ್ಧ ಗಂಟೆ ಮಳೆಗೆ ಸುಧಾರಿಸಿಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹೆಣಗಾಡುತ್ತಿದೆ.
ಇದರ ನಡುವೆಯೂ ಮಂಗಳವಾರ ಮೈಸೂರು ರಸ್ತೆ, ಕೆಂಗೇರಿ, ನಾಯಂಡಹಳ್ಳಿ ಮತ್ತು ಚಾಮರಾಜಪೇಟೆ ಸೇರಿ ನಗರದ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಯಿತು. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.ಕೆಲ ಬಡಾವಣೆಗಳಲ್ಲಿ ರಸ್ತೆಗಳ ಮೇಲೆ ನೀರು ಸಾಧಾರಣ ಪ್ರಮಾಣದಲ್ಲಿ ನೀರು ಹರಿಯಿತು.