Railway work to speed up in the state
ಕುಣಿಗಲ್: ಕೇಂದ್ರ ರೈಲ್ವೆ ಬಜೆಟ್ 3 ಲ ಕೋಟಿ ರೂಪಾಯಿ ಆಗಿದ್ದು, 52 ಸಾವಿರ ಕೋಟಿ ರೂ. ವೆಚ್ಚದ ರೆಲ್ವೆ ಕಾಮಗಾರಿಯನ್ನು ರಾಜ್ಯದಲ್ಲಿ ಕೆಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ರೆಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಪಟ್ಟಣದಲ್ಲಿ ವೀರಶೆವ, ಲಿಂಗಾಯಿತ ಸಮುದಾಯದ ವಿವಿಧ ಸಂಟನೆಗಳು ಹಮ್ಮಿಕೊಂಡಿದ್ದ ಬಸವಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಬಳಿಕ ಮಾತನಾಡಿ, ರಾಜ್ಯದಲ್ಲಿ 40 ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ರೆಲ್ವೆ ಯೋಜನಾ ಕಾಮಗಾರಿಯನ್ನು 52 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಒಂದು ಲ ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು. ಈಗ ತುಮಕೂರು, ಬೆಂಗಳೂರು ನಡುವೆ ಎರಡು ಮಾರ್ಗದ ಹಳಿ ಇದ್ದು, ಅದನ್ನು 4 ಮಾರ್ಗದ ಹಳಿಯಾಗಿ ಮಾಡಲಾಗುತ್ತಿದೆ. ನಿಗದಿತ ದರಕ್ಕಿಂತ 10 ಪಟ್ಟು ಪರಿಹಾರ ನೀಡಲಾಗುವುದು ಎಂದರು.
ರೆಲು ಸಂಚಾರ ಮಾಡುವ ವೇಳೆ ಕ್ರಾಸಿಂಗ್ ಹಾಕಿದರೆ 15ರಿಂದ 20 ನಿಮೀಷ ವಾಹನ ಸವಾರರು ನಿಲ್ಲುವ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಲೆವೆಲ್ ಕ್ರಾಸಿಂಗ್ ಅಭಿವದ್ಧಿ ಪಡಿಸಲಾಗಿದೆ. 27 ಕ್ರಾಸಿಂಗ್ ಕಾಮಗಾರಿ ಮುಗಿದಿದ್ದು, 13 ಕಾಮಗಾರಿ ಬಾಕಿ ಇವೆ. ಬೆಂಗಳೂರಿನಿಂದ ನೂರು ಕಿ.ಮೀ ದೂರದವರಗೆ 143 ರೆಲ್ವೆಲೆನ್ ಹಾಗೂ ಎಲ್ಸಿ ಗೇಟ್ಗಳ ಕಾಮಗಾರಿ ಕೆಗೆತ್ತಿಕೊಂಡಿದ್ದು, ಈ ಪೆಕಿ 47 ಕಾಮಗಾರಿ ಮುಂದಿನ ವರ್ಷದೊಳಗೆ ಮುಗಿಯಲಿದೆ. ಈಗಾಗಲೇ ಚಿಕ್ಕಮಂಗಳೂರು, ಅರಸೀಕೆರೆ, ತಿಪಟೂರು, ತುಮಕೂರು ಮಾರ್ಗವಾಗಿ ತಿರುಪತಿಗೆ ರೆಲು ಸಂಚಾರ ಮಾಡುತ್ತಿದೆ. ಈ ರೆಲನ್ನು ಕುಣಿಗಲ್ ಮಾರ್ಗವಾಗಿ ಸಂಚಾರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೆಗೊಳ್ಳಲಾಗುವುದು ಎಂದು ಸೋಮಣ್ಣ ತಿಳಿಸಿದರು. ವೀರಶೆವ ಲಿಂಗಾಯಿತ ಸಮಾಜದ ಅಧ್ಯ ಎನ್.ಎಸ್.ವಸಂತ್ಕುಮಾರ್, ವೀರಶೆವ ಪತ್ತಿನ ಸಹಕಾರ ಸಂದ ಅಧ್ಯ ಚೇತನ್ ಇದ್ದರು.
ಈ ಹಿಂದೆ ಹಾಸನ, ಬೆಂಗಳೂರು ನಡುವೆ ರೆಲು ಕೇವಲ 80 ಕಿಮೀ ವೇಗದಲ್ಲಿ ಚಲಿಸುತಿತ್ತು. ಈಗ 135 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಇನ್ನು ಮುಂದೆ ಬೆಂಗಳೂರಿಗೆ ಒಂದುವರೆ ಗಂಟೆಯಲ್ಲಿ ತಲುಪಬಹುದು. ಮೋದಿ ಪ್ರಧಾನಿಯಾದ ಬಳಿಕ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಅವರಿಗೆ ದೇಶದ ಪ್ರಗತಿ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಪ್ರಯಾಣಿಕ ರೈಲಿನಿಂದ ರೈಲ್ವೆ ಇಲಾಖೆಗೆ ಲಾಭವಿಲ್ಲ. ನಿತ್ಯ ದೇಶದಾದ್ಯಂತ ಎರಡು ಕೋಟಿ ಜನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಕುಣಿಗಲ್ನಲ್ಲಿ ಹಮ್ಮಿಕೊಂಡಿದ್ದ ಬಸವಜಯಂತಿ ಮೆರವಣಿಗೆಗೆ ವಿ.ಸೋಮಣ್ಣ ಚಾಲನೆ ನೀಡಿದರು. ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಕಸಾಪ ಜಿಲ್ಲಾಧ್ಯ ಕೆ.ಎಸ್.ಸಿದ್ದಲಿಂಗಪ್ಪ, ಪುರಸಭೆ ಮಾಜಿ ಅಧ್ಯ ರಂಗಸ್ವಾಮಿ, ತಾಪಂ ಮಾಜಿ ಸದಸ್ಯ ಕೆ.ಎಸ್.ಬಲರಾಮ್ ಇದ್ದರು.