ತುಮಕೂರಿನಲ್ಲಿ ನಡೆದ ವಾಣಿಜ್ಯ ಮತ್ತು ಕೈಗಾರಿಕೆ ಸಂಘ ಸಂಸ್ಥೆಗಳ ಸಮ್ಮೇಳನವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಶಾಸಕ ಜ್ಯೋತಿ ಗಣೇಶ್, ಎ್ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮತ್ತಿತರರಿದ್ದರು.  
ರಾಜ್ಯ

ತುಮಕೂರಿನಲ್ಲಿ ರೈಲ್ವೆ ಕಂಟೈನರ್ ಕಾರ್ಪೋರೇಶನ್; ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೊಮಣ್ಣ ಭರವಸೆ

ಪ್ರಮುಖ ಮುಖ್ಯಾಂಶಗಳು

  • ತುಮಕೂರಿನಲ್ಲಿ ರೈಲ್ವೆ ಕಂಟೈನರ್ ಕಾರ್ಪೋರೇಶನ್
  • ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೊಮಣ್ಣ ಭರವಸೆ
  • ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕೆ ಸಂಘ ಸಂಸ್ಥೆಗಳ ಸಮ್ಮೇಳನ

ತುಮಕೂರು: ವಿಕಸಿತಭಾರತ 2047 ಗುರಿಸಾಧನೆಯಲ್ಲಿ ಸೂಕ್ಷ್ಮ ಸಣ್ಣಮತ್ತು ಮಧ್ಯಮ ಕೈಗಾರಿಕೆಗಳಎಂಎಸ್‌ಎಂಇ ಪಾತ್ರ ಅತ್ಯಂತಮಹತ್ವದ್ದಾಗಿದ್ದು,ರೈಲ್ವೆ ಇಲಾಖೆಯಿಂದತುಮಕೂರಿನಲ್ಲಿ ಶೀಘ್ರದಲ್ಲೇರೈಲ್ವೆ ಕಂಟೇನರ್ ಕಾರ್ಪೊರೇಷನ್ಪ್ರಾರಂಭಿಸಲಾಗುವುದು ಎಂದುಕೇಂದ್ರ ರೈಲ್ವೆ ಮತ್ತು ಜಲಶಕ್ತಿರಾಜ್ಯ ಸಚಿವ ವಿ.ಸೋಮಣ್ಣಹೇಳಿದರು.

ನಗರದಹೆಗ್ಗೆರೆಯ ಎಚ್.ಎಂ.ಗಂಗಾಧರಯ್ಯಮೆಮೋರಿಯಲ್ ಹಾಲ್ನಲ್ಲಿ ಎಫ್‌ಕೆಸಿಸಿಐಮತ್ತು ತುಮಕೂರು ಜಿಲ್ಲಾ ವಾಣಿಜ್ಯಮತ್ತು ಕೈಗಾರಿಕಾ ಸಂಸ್ಥೆಆಯೋಜಿಸಿದ್ದ ರಾಜ್ಯಮಟ್ಟದ ವಾಣಿಜ್ಯಮತ್ತು ಕೈಗಾರಿಕೆ ಸಂಘ ಸಂಸ್ಥೆಗಳಸಮ್ಮೇಳನವನ್ನು ಉದ್ಘಾಟಿಸಿಮಾತನಾಡಿದರು.

ಆರ್ಥಿಕಬೆಳವಣಿಗೆಯ ಎಂಜಿನ್ ಆಗಿ ಭಾರತೀಯರೈಲ್ವೆ ಅಭೂತಪೂರ್ವ ಆಧುನಿಕರಣಕ್ಕೆಒಳಗಾಗುತ್ತಿದೆ,ರೈಲ್ವೆ ಮೂಲಸೌಕರ್ಯವಿಸ್ತರಣೆ, ನಿಲ್ದಾಣಗಳಪುನರ್ ಅಭಿವೃದ್ಧಿ,ಸರಕು ಸಾಗಣೆಕಾರಿಡಾರ್ ಮತ್ತು ಸುಧಾರಿತ ಸಂಪರ್ಕವ್ಯವಸ್ಥೆಗಳು,ವ್ಯಾಪಾರ,ವಾಣಿಜ್ಯಕ್ಕೆಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ತುಮಕೂರು ಕೈಗಾರಿಕಾಕ್ಷೇತ್ರದಲ್ಲಿ ವೇಗವಾಗಿಮುನ್ನಡೆಯುತ್ತಿದ್ದು, ಬೆಂಗಳೂರಿನಕೈಗಾರಿಕೆಗಳು ಮತ್ತು ಹೂಡಿಕೆದಾರರುತುಮಕೂರಿನತ್ತ ಗಮನ ಹರಿಸಬೇಕಾಗಿದೆ.ವಸಂತ ನರಸಾಪುರಕೈಗಾರಿಕಾ ಪ್ರದೇಶವು ರಾಜ್ಯದಅತಿ ದೊಡ್ಡ ಕೈಗಾರಿಕಾ ಕೇಂದ್ರಗಳಲ್ಲಿಒಂದಾಗಿ ರೂಪುಗೊಳ್ಳುತ್ತಿದೆ.ಕೈಗಾರಿಕಾ ಮತ್ತುವಾಣಿಜ್ಯ ಸಂಸ್ಥೆಗಳು ಅಭಿವೃದ್ಧಿಯಪ್ರಮುಖ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯಎಂದು ಸೋಮಣ್ಣ ಹೇಳಿದರು.

ಕಾರ್ಯಕ್ರಮದಲ್ಲಿಟಿಡಿಸಿಸಿಐ ಅಧ್ಯಕ್ಷ ಪಾಂಡುರಂಗಕುರಂದವಾಡ, ಶಾಸಕಜಿ.ಬಿ.ಜ್ಯೋತಿಗಣೇಶ್, ಎಫ್‌ಕೆಸಿಸಿಐಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಮ್ಪ್ರಸಾದ್, ಉಪಾಧ್ಯಕ್ಷಬಿ.ಪಿ.ಶಶಿಧರ್,ನಿಕಟ ಪೂರ್ವಅಧ್ಯಕ್ಷ ಎಂಜಿ ಬಾಲಕೃಷ್ಣ, ಜಿಲ್ಲಾ ಸಮನ್ವಯಸಮಿತಿ ಛೇರ್ಮನ್ ಸುಜ್ಞಾನ ಹಿರೇಮಠ್,ಮತ್ತಿತರರುಉಪಸ್ಥಿತರಿದ್ದರು.

ನಮ್ಮ ಸಂಸ್ಥೆಯು ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ಸಮ್ಮೇಳನವನ್ನು ಆಯೋಜಿಸುತ್ತಿದ್ದು ಈ ಬಾರಿ ತುಮಕೂರಿನಲ್ಲಿ ಆಯೋಜಿಸಿದ್ದೇವೆ. ಪ್ರಸ್ತುತ ವಾಣಿಜ್ಯ ಕೈಗಾರಿಕಾ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಮ್ಮೇಳನ ವೇದಿಕೆಯಾಗಿದೆ.

— ಉಮಾ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷೆ