ಕಲಾದಗಿಯಲ್ಲಿ ಈಶಾ ಗ್ರಾಮೋತ್ಸವ ನಿಮಿತ್ತ ಆಯೋಜಿಸಿದ್ದ ರೂರಲ್ ಪ್ರೀಮಿಯರ್ ಲೀಗ್-ಕ್ಲಸ್ಟರ್ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಹಾಗೂ ಟ್ರೋಫಿಯನ್ನು ಪಡೆಯುತ್ತಿರುವ ರಾಯಚೂರಿನ ಗಿಲ್ಲೇಸುಗೂರು ಗ್ರಾಮದ ಫ್ರೆಂಡ್ಸ್ ಫಾರ್ ಎವ್ಹರ್ ತಂಡದ ಕ್ರೀಡಾಪಟುಗಳು. 
ರಾಜ್ಯ

ರಾಯಚೂರಿನ ಫ್ರೆಂಡ್ಸ್ ಫಾರ್ ಎವ್ಹರ್‌ಗೆ ಚಾಂಪಿಯನ್ ಪಟ್ಟ

ಪ್ರಮುಖ ಮುಖ್ಯಾಂಶಗಳು

  • ಕಲಾದಗಿಯಲ್ಲಿ ಈಶಾ ಫೌಂಡೇಷನ್ ಗ್ರಾಮೋತ್ಸವ ಯಶಸ್ವಿ
ಕಲಾದಗಿ: ಈಶಾ ಫೌಂಡೇಷನ್‌ನ 18ನೇ ‘ಈಶಾ ಗ್ರಾಮೋತ್ಸವ’ ಅಂಗವಾಗಿ ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರೂರಲ್ ಪ್ರೀಮಿಯರ್ ಲೀಗ್-2026ರ ಕ್ಲಸ್ಟರ್ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ರೋಚಕ ಫೈನಲ್ ಪಂದ್ಯದಲ್ಲಿ ರಾಯಚೂರು ಜಿಲ್ಲೆಯ ಗಿಲ್ಲೆಸುಗೂರು ಗ್ರಾಮದ ಫ್ರೆಂಡ್ಸ್ ಫಾರ್ ಎವ್ಹರ್ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಹಾಗೂ ಬಹುಮಾನ ತನ್ನದಾಗಿಸಿಕೊಂಡಿತು. ಅನಗವಾಡಿಯ ಬಸವೇಶ್ವರ ತಂಡ ದ್ವಿತೀಯ, ಅಮೀನಗಡದ ಜಯಸೇವಾಲಾಲ ತಂಡ ತತೀಯ ಹಾಗೂ ಬಾದಾಮಿ ತಾಲೂಕಿನ ಜಾಲಿಹಾಳದ ಚಾಲುಕ್ಯ ಬಾಯ್ಸ ತಂಡ ಚತುರ್ಥ ಸ್ಥಾನ ಗಳಿಸಿತು.
ರಾಯಚೂರು, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಭಾಗಗಳಿಂದ ಒಟ್ಟು 19 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವಾಲಿಬಾಲ್ ಪರಿಣತ ಶಿಕ್ಷಕರು ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ, ಪತ್ರಕರ್ತ ದ.ರಾ. ಪುರೋಹಿತ ಹಾಗೂ ಸಿಕಂದರ್ ಬಾವಖಾನ, ಮುಖ್ಯಗುರು ಆರ್.ವಿ. ಜಾಧವ, ಶ್ರೀಕಾಂತ ಕೆರಕಲಮಟ್ಟಿ ಹಾಗೂ ಈಶಾ ಫೌಂಡೇಷನ್‌ನ ಸ್ವಯಂ ಸೇವಕರಾದ ಮಲ್ಲಿಕಾರ್ಜುನ ಹಾಸನ, ಕುಸುಮಾ ಯರಗಾವಿ ಸೇರಿ ಹಲವರು ಉಪಸ್ಥಿತರಿದ್ದರು.
ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರೊಂದಿಗೆ ಗ್ರಾಮೋತ್ಸವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.