ರಾಜ್ಯ

ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿ ರಾಹುಲ್ ಶರಣಪ್ಪ ಸಂಕನೂರ್ ಅಧಿಕಾರ ಸ್ವೀಕಾರ

ಕಲಬುರಗಿ: ಕಲಬುರಗಿ ಜಿಲ್ಲಾ ಪಂಚಾಯತಿಯ ನೂತನ‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ನಾಟಕ ವೃಂದದ 2019ನೇ ಬ್ಯಾಚಿನ್ ಐ.ಎ.ಎಸ್. ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಹುದ್ದೆಯಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಭಂವರ್ ಸಿಂಗ್ ಮೀನಾ ಅವರನ್ನು ಚಿಕ್ಕಮಂಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಿದ್ದರಿಂದ ತೆರವಾದ ಹುದ್ದೆಗೆ ಐ.ಟಿ-ಬಿ.ಟಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಹುಲ್ ಎಸ್.‌ಸಂಕನುರ್ ಅವರನ್ನು ವರ್ಗಾಯಿಸಿ ಸರ್ಕಾರ ಇತ್ತೀಚೆಗೆ ಆದೇಶಿಸಲಾಗಿತ್ತು.
ಕರ್ನಾಟಕ ಮೂಲದವರಾದ ರಾಹುಲ್‌ ಎಸ್.‌ಸಂಕನೂರ್ ಅವರು ಬಿ.ಇ (ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ಸ್) ಪದವೀಧರರಾಗಿದ್ದಾರೆ. ಈ ಹಿಂದೆ ಇವರು ರಾಯಚೂರು ಜಿಲ್ಲೆಯ ಲಿಂಗಸೂರು ಸಹಾಯಕ ಆಯುಕ್ತರಾಗಿ, ಬಳ್ಳಾರಿ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.