ಕಲಬುರಗಿಯ ಕೆಬಿಎನ್ ವಿವಿಯಲ್ಲಿ ಹಮ್ಮಿಕೊಂಡಿದ್ದ ಆ್ಯಂಟಿ ರ‍್ಯಾಗಿಂಗ್ ವೀಕ್ ಕಾರ್ಯಕ್ರಮವನ್ನು ಸಮ ಉಪಕುಲಪತಿ ಪ್ರೊ.ಅಸ್ಫಾಕ್ ಅಹ್ಮದ್ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಮೀರ್ ವಿಲಾಯತ್, ಡಾ.ಅಬ್ದುಲ್ ಬಶೀರ್, ಡಾ.ಗುರುಪ್ರಸಾದ, ಡಾ.ಅನೂಪ್ ದೇಸಾಯಿ ಇದ್ದರು.
- ಪ್ರೊ.ಅಸ್ಫಾಕ್ ಅಹ್ಮದ್ ಹೇಳಿಕೆ
- ಕೆಬಿಎನ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ
ಕಲಬುರಗಿ: ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಟ್ಟ. ಒಳ್ಳೆಯ ನಡತೆ, ನಿರ್ಧಾರ ತೆಗೆದುಕೊಳ್ಳುವ ಸಮಯ. ರ್ಯಾಗಿಂಗ್ನಿಂದಾಗಿ ಭವಿಷ್ಯ ಹಾಳಾಗುತ್ತದೆ ಎಂದು ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ.ಅಸ್ಫಾಕ್ ಅಹ್ಮದ್ ಹೇಳಿದರು.
ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಅನಾಟೋಮಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆ್ಯಂಟಿ ರ‍್ಯಾಗಿಂಗ್ ವೀಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರ್ಯಾಗಿಂಗ್ನಿಂದ ಜೂನಿಯರ್ ಜತೆಗೆ ಸೀನಿಯರ್ ವಿದ್ಯಾರ್ಥಿಗಳು ತಮ್ಮ ಭವ್ಯ ಹಾಳು ಮಾಡಿಕೊಳ್ಳುತ್ತಾರೆ. ಇದೀಗ ಅದೊಂದು ಶಿಕ್ಷಾರ್ಹ ಅಪರಾಧವಾಗಿದ್ದು, ಅಡ್ಮಿಷನ್ ಕ್ಯಾನ್ಸಲ್ ಆಗಬಹುದು ಎಂದು ಎಚ್ಚರಿಕೆ ನೀಡಿದರು.
ರಿಜಿಸ್ಟ್ರಾರ್ ಮೀರ್ ವಿಲಾಯತ್ ಮಾತನಾಡಿ, ಕೆಬಿಎನ್ ವಿವಿಯಲ್ಲಿ ರ್ಯಾಗಿಂಗ್ ನಡೆಯುವುದಿಲ್ಲ. ಯಾವುದೇ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ, ತಮಾಷೆ ಹೆಸರಲ್ಲಿ ಅವಮಾನ ಮಾಡಲಾಗುವುದಿಲ್ಲ. ಜೀವನದ ಜತೆ ಚೆಲ್ಲಾಟ ಆಡಬೇಡಿ. ಅಕಸ್ಮಾತ್ ಅಂತಹ ಟನೆಗಳು ಕಂಡು ಬಂದಲ್ಲಿ ಆ್ಯಂಟಿ ರ್ಯಾಗಿಂಗ್ ಕಮಿಟಿ ಮ್ಯಾನೇಜಮೆಂಟ್ ಗಮನಕ್ಕೆ ತರಬೇಕು ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ.ಸನಾ ಇಜಾಜ್ ನಿರೂಪಣೆ ಮಾಡಿದರು. ಮಹಾಲ್ಮ ಉಪನ್ಯಾಸ ನೀಡಿದರು.
ಐಕ್ಯೂಎಸಿ ನಿರ್ದೇಶಕ ಡಾ.ಅಬ್ದುಲ್ ಬಶೀರ್, ಡೀನ್ ಡಾ.ಗುರುಪ್ರಸಾದ, ಡಾ.ಅನೂಪ್ ದೇಸಾಯಿ, ಡಾ.ಶ್ರೀನಿವಾಸ, ಡಾ.ಸುಭಾಸ ಕಮಲ, ಡಾ.ಇಕ್ಬಾಲ್, ಡಾ.ಸಿದ್ದೇಶ ಸಿರವಾರ, ಡಾ.ಸಿದ್ಧಲಿಂಗ ಚೆಂಗಟಿ, ಡಾ.ಗೀತಾಂಜಲಿ ಇತರರಿದ್ದರು. ಡಾ.ಮಾರುಫ್ ಸ್ವಾಗತಿಸಿದರು. ಡಾ.ಜಿಬ್ರಾನ್ ಅನ್ವರ್ ವಂದಿಸಿದರು. ಆ್ಯಂಟಿ ರಾಗಿಂಗ್ ಜಾಗೃತಿ ಬಗ್ಗೆ ವಿಡಿಯೋ ತುಣುಕನ್ನು ಪ್ರದರ್ಶಿಸ ಲಾಯಿತು.